ಲಂಕಾದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ ; ಅಧ್ಯಕ್ಷರ ನಿವಾಸಕ್ಕೆ ಮುತ್ತಿಗೆ, ಗೊಟಬಾಯ ರಾಜಪಕ್ಸ ದೇಶ ಬಿಟ್ಟು ಪರಾರಿ ವದಂತಿ ! 

09-07-22 06:40 pm       HK News Desk   ದೇಶ - ವಿದೇಶ

ಲಂಕಾದಲ್ಲಿ ಮತ್ತೆ ಪ್ರತಿಭಟನೆ ಹೊತ್ತಿಕೊಂಡಿದೆ. ಲಂಕಾ ಅಧ್ಯಕ್ಷ ಗೊಟಬಾಯ ರಾಜಪಕ್ಸ ವಿರುದ್ಧ ಜನರು ದಂಗೆ ಎದ್ದಿದ್ದು ಲಕ್ಷಾಂತರ ಜನರು ಬೀದಿಗೆ ಇಳಿದಿದ್ದಾರೆ.

ಕೊಲಂಬೋ, ಜುಲೈ 9 : ಲಂಕಾದಲ್ಲಿ ಮತ್ತೆ ಪ್ರತಿಭಟನೆ ಹೊತ್ತಿಕೊಂಡಿದೆ. ಲಂಕಾ ಅಧ್ಯಕ್ಷ ಗೊಟಬಾಯ ರಾಜಪಕ್ಸ ವಿರುದ್ಧ ಜನರು ದಂಗೆ ಎದ್ದಿದ್ದು ಲಕ್ಷಾಂತರ ಜನರು ಬೀದಿಗೆ ಇಳಿದಿದ್ದಾರೆ. ಅಧ್ಯಕ್ಷರ ನಿವಾಸಕ್ಕೆ ಮುತ್ತಿಗೆ ಹಾಕಿದ್ದಾರೆ. ಇದೇ ವೇಳೆ, ಅಧ್ಯಕ್ಷ ಗೊಟಬಾಯ ದೇಶ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ. 

ರಾಜಧಾನಿ ಕೊಲಂಬೋದಲ್ಲಿರುವ ಅಧ್ಯಕ್ಷರ ಅಧಿಕೃತ ನಿವಾಸಕ್ಕೆ ಸಾವಿರಾರು ಮಂದಿ ನುಗ್ಗಿದ್ದಾರೆ. ಮನೆಯ ಒಳಗಿನ ಸ್ವಿಮ್ಮಿಂಗ್ ಪೂಲ್ ನಲ್ಲಿ ನೂರಾರು ಮಂದಿ ಸೇರಿ ಈಜಾಡುತ್ತಿರುವ ವಿಡಿಯೋಗಳನ್ನು ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ. ಅಲ್ಲದೆ, ಅಧ್ಯಕ್ಷರ ನಿವಾಸದ ಅಡುಗೆ ಮನೆಯಲ್ಲಿ ತಾವೇ ತಿಂಡಿ, ಊಟ ತಯಾರಿಸಿ ತಿಂದಿದ್ದಾರೆ. ಮನೆಯ ಒಳಗೆ ದಾಂಧಲೆ ಎಬ್ಬಿಸಿರುವ ವಿಡಿಯೋ ವೈರಲ್ ಆಗಿದೆ. 

Protesters storm Lanka president's home, swim in Rajapaksa's pool -  Rediff.com India News

Sri Lanka protesters storm President's House, demand resignation | News |  Al Jazeera

Sri Lankan President's whereabouts remain uknown; protesters occupy his  office, residence, Sri Lanka crisis

ಶನಿವಾರ ರಾಜಧಾನಿಯಲ್ಲಿ ಜನರು ದಂಗೆಯೇಳುವ ಬಗ್ಗೆ ಮೊದಲೇ ಅರಿತಿದ್ದ ಅಧ್ಯಕ್ಷ ರಾಜಪಕ್ಷ ಶುಕ್ರವಾರವೇ ಅಧಿಕೃತ ನಿವಾಸದಿಂದ ಪಲಾಯನ ಮಾಡಿದ್ದರು. ಸೇನೆಗೆ ಸೇರಿದ ಹಡಗಿನಲ್ಲಿ ಅವಿತು ಕುಳಿತಿದ್ದಾರೆ ಎನ್ನುವ ಮಾಹಿತಿಯೂ ಇದೆ. ಇದೇ ವೇಳೆ, ಪ್ರತಿಭಟನಾಕಾರರ ಜೊತೆಗೆ ಲಂಕಾ ಕ್ರಿಕೆಟ್ ತಂಡದ ದಿಗ್ಗಜರು ಕೂಡ ಕೈಜೋಡಿಸಿದ್ದಾರೆ. ಮಾಜಿ ಕ್ರಿಕೆಟಿಗ ಜಯಸೂರ್ಯ ಪ್ರತಿಭಟನಕಾರರ ಜೊತೆಗೆ ರಸ್ತೆಗಿಳಿದಿದ್ದು ಜೊತೆಗೆ ನಿಂತು ಫೋಟೊ ಕ್ಲಿಕ್ಕಿಸುವ ವಿಡಿಯೋ ವೈರಲ್ ಆಗಿದೆ. ಇದಲ್ಲದೆ, ಕೆಲವು ಸೇನಾ ವಿಭಾಗದ ಮಂದಿಯೂ ಪ್ರತಿಭಟನೆಗೆ ಬೆಂಬಲಿಸಿದ್ದಾರೆ. 

Protesters storm Sri Lankan President Gotabaya Rajapaksa's residence; 7  injured in clashes - Cyber Tech Gurus

ಪ್ರತಿಭಟನೆ ಹಿನ್ನೆಲೆಯಲ್ಲಿ ಸಂಸದರು ಸಭೆ ನಡೆಸಿ, ಅಧ್ಯಕ್ಷ ಗೊಟಬಾಯ ರಾಜಿನಾಮೆ ನೀಡುವಂತೆ ಹೇಳಿದ್ದಾರೆ. ಆದರೆ ಗೊಟಬಾಯ ರಾಜಿನಾಮೆಗೆ ನಿರಾಕರಿಸಿದ್ದಾರೆ. ಇನ್ನೊಂದೆಡೆ ಅಧ್ಯಕ್ಷ ಸ್ಥಾನಕ್ಕೆ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರನ್ನು ನೇಮಿಸಲು ಒಂದು ಗುಂಪು ಮುಂದಾಗಿದೆ. ಅಧ್ಯಕ್ಷರ ಮನೆಯ ಮುಂದೆ ಲಕ್ಷಕ್ಕೂ ಹೆಚ್ಚು ಜನರು ಸೇರಿ ಪ್ರತಿಭಟನೆ ನಡೆಸಿದ್ದಾರೆ. ಅಧ್ಯಕ್ಷರು ಸಿಗದ ಹಿನ್ನೆಲೆಯಲ್ಲಿ ದಂಗೆಯೆದ್ದ ಜನರು ಸಂಜೆ ವೇಳೆಗೆ ಪ್ರಧಾನಿ ನಿವಾಸದತ್ತ ತೆರಳಿದ್ದಾರೆ. 

Sri Lanka financial disaster: President Gotabaya Rajapaksa flees as protesters  storm residence | Report Wire

Sri Lanka protesters storm president's house after clashing with police -  World - DAWN.COM

Sri Lanka President flees as protesters storm his house; seven injured in  clashes- The New Indian Express

Sri Lanka crisis - Sri Lanka Protests Live Updates: Protesters storm  President Gotabaya Rajapaksa's official residence

Sri Lanka News: Sri Lanka president Gotabaya Rajapaksa flees as protesters  storm his home; Key points | World News

ಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿ ಎರಡು ತಿಂಗಳು ಕಳೆದಿದ್ದು ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಜನರು ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಇತ್ತೀಚೆಗೆ ಪ್ರಧಾನಿ ಸ್ಥಾನಕ್ಕೆ ಮಹೀಂದ ರಾಜಪಕ್ಸ ರಾಜಿನಾಮೆ ನೀಡಿದ ಬಳಿಕ ಸರ್ವ ಪಕ್ಷಗಳು ಜೊತೆಯಾಗಿ ಹಿರಿಯ ಸಂಸದ ರನಿಲ್ ವಿಕ್ರಮಸಿಂಘೆ ಅವರನ್ನು ಪ್ರಧಾನಿ ಸ್ಥಾನಕ್ಕೆ ನೇಮಕ ಮಾಡಿದ್ದರು. ಆದರೆ ಇದೀಗ ದೊಡ್ಡ ಮಟ್ಟದಲ್ಲಿ ಮತ್ತೆ ಪ್ರತಿಭಟನೆ, ಹಿಂಸಾಚಾರ ಕಾಣಿಸಿಕೊಂಡಿದ್ದು ಅಧ್ಯಕ್ಷ ಗೊಟಬಾಯ ವಿರುದ್ಧ ತಿರುಗಿ ಬಿದ್ದಿದ್ದಾರೆ.

Sri Lankan President Gotabaya Rajapaksa has fled his home as protesters surrounded and stormed his residence on Saturday, reported news agency AFP, citing a defence source and local media. At least seven people, including two policemen, were injured as the protesters and police clashed, said news agency PTI.Thousands of protesters clashed with the police and breached barricades to storm the president’s official residence in the capital city of Colombo.