ಹಿಂಸಾಚಾರ ಬೆನ್ನಲ್ಲೇ ಲಂಕಾ ಪ್ರಧಾನಿ ಸ್ಥಾನಕ್ಕೆ ವಿಕ್ರಮಸಿಂಘೆ ರಾಜಿನಾಮೆ ; ಸರ್ವಪಕ್ಷಗಳ ಸರಕಾರ ಅಸ್ತಿತ್ವಕ್ಕೆ ಸಲಹೆ, ನೌಕಾ ಹಡಗಿನಲ್ಲಿ ಅಡಗಿ ಕುಳಿತ ಅಧ್ಯಕ್ಷ !  

09-07-22 09:15 pm       HK News Desk   ದೇಶ - ವಿದೇಶ

ರಾಜಧಾನಿ ಕೊಲಂಬೋದಲ್ಲಿ ಲಕ್ಷಾಂತರ ಮಂದಿ ಅಧ್ಯಕ್ಷ ಗೊಟಬಾಯ ರಾಜಪಕ್ಷ ಅವರ ನಿವಾಸಕ್ಕೆ ಮುತ್ತಿಗೆ ಹಾಕಿ ಹಿಂಸಾಚಾರ ನಡೆಸಿದ ಬೆನ್ನಲ್ಲೇ ಪ್ರಧಾನ ಮಂತ್ರಿ ರನಿಲ್ ವಿಕ್ರಮಸಿಂಘೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಕೊಲಂಬೋ, ಜುಲೈ 9: ರಾಜಧಾನಿ ಕೊಲಂಬೋದಲ್ಲಿ ಲಕ್ಷಾಂತರ ಮಂದಿ ಅಧ್ಯಕ್ಷ ಗೊಟಬಾಯ ರಾಜಪಕ್ಷ ಅವರ ನಿವಾಸಕ್ಕೆ ಮುತ್ತಿಗೆ ಹಾಕಿ ಹಿಂಸಾಚಾರ ನಡೆಸಿದ ಬೆನ್ನಲ್ಲೇ ಪ್ರಧಾನ ಮಂತ್ರಿ ರನಿಲ್ ವಿಕ್ರಮಸಿಂಘೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಸರ್ವ ಪಕ್ಷಗಳ ಸರಕಾರ ಅಸ್ತಿತ್ವಕ್ಕೆ ತರಲು ಹಾದಿ ಸುಗಮವಾಗಲು ತಾವು ಸ್ಥಾನದಿಂದ ಇಳಿಯುತ್ತಿರುವುದಾಗಿ ಪ್ರಕಟಿಸಿದ್ದಾರೆ.

ಇದಕ್ಕೂ ಮುನ್ನ ಪಕ್ಷದ ನಾಯಕರು ಸಭೆ ನಡೆಸಿ, ಪ್ರಧಾನಿ ಮತ್ತು ಅಧ್ಯಕ್ಷ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಸೂಚಿಸಿದ್ದರು. ಆದರೆ, ಅಧ್ಯಕ್ಷ ಗೊಟಬಾಯ ರಾಜಿನಾಮೆ ನೀಡಲು ನಿರಾಕರಿಸಿದ್ದರು. ಅಲ್ಲದೆ, ತಮ್ಮ ಅಧಿಕೃತ ನಿವಾಸದಿಂದ ಪಲಾಯನ ಮಾಡಿದ್ದಲ್ಲದೆ, ನೌಕಾಸೇನೆಯ ಹಡಗಿನಲ್ಲಿ ಅವಿತುಕೊಂಡಿದ್ದಾರೆ. ರಾಜಧಾನಿಯಲ್ಲಿ ಶಾಂತಿ ಮರಳಿದ ಬಳಿಕ ಬರುವ ಬಗ್ಗೆ ನಿರ್ಧರಿಸಿದ್ದಾರೆ.

ranil wickremesinghe: Sri Lanka crisis: Ranil Wickremesinghe resigns as PM  amid protests across the country - The Economic Times Video | ET Now

ದೇಶದ ಸರ್ವ ಜನರ ಒಳಿತಿಗಾಗಿ ಸರ್ವ ಪಕ್ಷಗಳ ಸರಕಾರವನ್ನು ಅಸ್ತಿತ್ವಕ್ಕೆ ತರಲು ಪಕ್ಷದ ನಾಯಕರು ಶಿಫಾರಸು ಮಾಡಿದ್ದಾರೆ. ಅದರಂತೆ, ತಮ್ಮ ಸ್ಥಾನದಿಂದ ಇಳಿಯುತ್ತಿರುವುದಾಗಿ ಪ್ರಧಾನಿ ರನಿಲ್ ವಿಕ್ರಮಸಿಂಘೆ ತಿಳಿಸಿದ್ದಾರೆ. ದೇಶಾದ್ಯಂತ ಜನರು ಪ್ರತಿಭಟನೆ ನಡೆಸುತ್ತಿರುವುದಕ್ಕೆ ಬೆಂಬಲ ಘೋಷಿಸಿರುವ ಮಾಜಿ ಕ್ರಿಕೆಟಿಗ ಜಯಸೂರ್ಯ, ಜನರ ಪರವಾಗಿ ಪ್ರಧಾನಿ ಮತ್ತು ಅಧ್ಯಕ್ಷರನ್ನು ತರಾಟೆಗೆತ್ತಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಜಯಸೂರ್ಯ, ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ, ಪ್ರಧಾನಿ ಮತ್ತು ಅಧ್ಯಕ್ಷರೇ ನಿಮಗೇನು ಜನರ ಸ್ಥಿತಿ ಅರ್ಥ ಆಗುತ್ತಿಲ್ಲವೇ, ನೀವು ರಾಜಿನಾಮೆ ಕೊಡಿ ಅಥವಾ ಮನೆಗೆ ಹೋಗಿ. ಇದು ಮಿಸ್ಟರ್ ಬೀನ್ ಸಿನಿಮಾ ಅಲ್ಲ. ಜನರ ಬದುಕಿನ ಪ್ರಶ್ನೆ ಎಂದು ಖಾರ ನುಡಿಗಳಿಂದ ತಿವಿದಿದ್ದಾರೆ.

gotabaya rajapaksa: Sri Lanka President Gotabaya Rajapaksa flees as protesters  storm home, office - The Economic Times

ಇದೇ ವೇಳೆ, ಶ್ರೀಲಂಕಾದ ಪ್ರಭಾವಿ ವಕೀಲರ ಕಮಿಟಿ ಅಧ್ಯಕ್ಷ ರಾಜಪಕ್ಷ ತಮ್ಮ ಸ್ಥಾನದಲ್ಲಿ ಮುಂದುವರಿಯುವ ಹಕ್ಕು ಹೊಂದಿಲ್ಲ ಎಂದಿದ್ದಾರೆ. ದೇಶಾದ್ಯಂತ ಜುಲೈ 15ರ ವರೆಗೆ ಶಾಲೆ, ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ದೇಶದ ಪ್ರಮುಖ ನಾಲ್ಕು ಯುನಿವರ್ಸಿಟಿಗಳು ತಾತ್ಕಾಲಿಕವಾಗಿ ತಮ್ಮ ಕಾರ್ಯವನ್ನು ರದ್ದುಪಡಿಸಿವೆ.

A naval official from Sri Lanka on Saturday said President Gotabaya Rajapaksa was on board SLNS Gajabahu, and will stay out in the sea until its safe for him to return to the mainland. This was the contingency plan that had to be activated earlier than anticipated, the official added.