ಬ್ರೇಕಿಂಗ್ ನ್ಯೂಸ್
10-07-22 10:41 pm HK News Desk ದೇಶ - ವಿದೇಶ
ಪಣಜಿ, ಜುಲೈ 10: ಗೋವಾದಲ್ಲಿಯೂ ಕಾಂಗ್ರೆಸ್ ಶಾಸಕರನ್ನು ಆಪರೇಶನ್ ಮಾಡಲು ಬಿಜೆಪಿ ಮುಂದಾಗಿದೆ ಎನ್ನುವ ವದಂತಿ ಹರಡಿದೆ. ಕಾಂಗ್ರೆಸಿನ ಇಬ್ಬರು ಹಿರಿಯ ನಾಯಕರು ಬಿಜೆಪಿ ಸೇರಲಿದ್ದಾರೆ ಎನ್ನಲಾಗುತ್ತಿದ್ದು, ಗೋವಾ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ಗೋವಾದಲ್ಲಿ ಬೀಡು ಬಿಟ್ಟಿದ್ದಾರೆ. ಇದೇ ವೇಳೆ, ಗೋವಾದ ಕಾಂಗ್ರೆಸ್ ಮುಖಂಡರೊಬ್ಬರು ಬಿಜೆಪಿಯಿಂದ ಪ್ರತಿ ಶಾಸಕನಿಗೆ 40 ಕೋಟಿ ರೂಪಾಯಿ ಆಫರ್ ಮಾಡಿದ್ದಾಗಿ ಆರೋಪ ಮಾಡಿದ್ದಾರೆ.
ಗೋವಾ ಕಾಂಗ್ರೆಸ್ ವಿಪಕ್ಷ ನಾಯಕ ಮೈಕೆಲ್ ಲೋಬೊ ಮತ್ತು ಕಳೆದ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಸಿಎಂ ಅಭ್ಯರ್ಥಿಯಾಗಿದ್ದ ದಿಗಂಬರ ಕಾಮತ್ ಬಿಜೆಪಿ ಸೇರಲಿದ್ದಾರೆ ಎನ್ನುವ ಮಾತು ಕೇಳಿಬಂದಿದೆ. ಇವರಿಬ್ಬರು ಬಿಜೆಪಿ ನಾಯಕರ ಸಂಪರ್ಕದಲ್ಲಿದ್ದಾರೆ ಎನ್ನುವುದನ್ನು ಗೋವಾ ಉಸ್ತುವಾರಿ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಅಲ್ಲದೆ, ಮೈಕೆಲ್ ಲೋಬೊ ಅವರನ್ನು ವಿಪಕ್ಷ ನಾಯಕ ಸ್ಥಾನದಿಂದ ಕೆಳಗಿಳಿಸಿದ್ದಾರೆ.
ನಮ್ಮದೇ ನಾಯಕರು ಪಕ್ಷವನ್ನು ಒಡೆಯುವ ಸಂಚು ಮಾಡುತ್ತಿದ್ದಾರೆ. ಮೈಕೆಲ್ ಲೋಬೊ ಮತ್ತು ದಿಗಂಬರ್ ಕಾಮತ್ ಅವರೇ ಮುಂದೆ ನಿಂತು ಪಕ್ಷದ ಶಾಸಕರನ್ನು ಬಿಜೆಪಿಯತ್ತ ಸೆಳೆಯುತ್ತಿದ್ದಾರೆ. ಈ ಕುರಿತು ಸ್ಪಷ್ಟ ಮಾಹಿತಿ ದೊರೆತಿದ್ದು, ಹಾಗಾಗಿ ಅವರನ್ನು ಪಕ್ಷದ ನಾಯಕ ಸ್ಥಾನದಿಂದ ದೂರ ಇಟ್ಟಿದ್ದೇವೆ. ಆದರೆ ಬಿಜೆಪಿ ಆಫರ್ ಕೇಳಿಯೂ ಆರು ಮಂದಿ ಗಟ್ಟಿ ನಿಂತಿದ್ದಾರೆ. ಅವರನ್ನು ಅಭಿನಂದಿಸುತ್ತೇನೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ. ನಮ್ಮ ಹಲವು ಶಾಸಕರಿಗೆ ದೊಡ್ಡ ಮೊತ್ತದ ಆಫರ್ ನೀಡಿದ್ದಾರೆ. ಆಫರ್ ಮೊತ್ತ ಕೇಳಿ ನನಗೇ ಶಾಕ್ ಆಗಿದೆ. ಆದರೆ ನಮ್ಮ ಆರು ಮಂದಿ ಶಾಸಕರು ಆಫರ್ ಹಣಕ್ಕೆ ಮಣಿದಿಲ್ಲ. ನಾನು ಅವರ ಬಗ್ಗೆ ಹೆಮ್ಮೆ ಪಡುತ್ತೇನೆ ಎಂದಿದ್ದಾರೆ.
ಇದೇ ವೇಳೆ, ಗೋವಾ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಚೂಡಾಂಕರ್, ನಮ್ಮ ಶಾಸಕರಿಗೆ ಬಿಜೆಪಿ ಕಡೆಯಿಂದ ತಲಾ 40 ಕೋಟಿ ರೂಪಾಯಿ ಆಫರ್ ಮಾಡಿದ್ದಾರೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಉದ್ಯಮಿಗಳು ಮತ್ತು ಅದಿರು ಮಾಫಿಯಾಗಳು ಕರೆ ಮಾಡಿದ್ದು, ಬಿಜೆಪಿ ಸೇರಿದರೆ 40 ಕೋಟಿ ನೀಡುವ ಆಫರ್ ನೀಡಿದ್ದಾರೆ. ಈ ಬಗ್ಗೆ ನಮ್ಮ ಪಕ್ಷದ ಉಸ್ತುವಾರಿ ದಿನೇಶ್ ಗುಂಡೂರಾವ್ ನಮ್ಮದೇ ಶಾಸಕರು ಮಾಹಿತಿ ನೀಡಿದ್ದಾರೆ ಎಂದಿದ್ದಾರೆ.
ಆದರೆ ಈ ಆರೋಪವನ್ನು ಬಿಜೆಪಿ ರಾಜ್ಯ ಅಧ್ಯಕ್ಷ ಸದಾನಂದ ತಾನ್ವಾಡೆ ನಿರಾಕರಿಸಿದ್ದಾರೆ. ನಾವು ರಾಜ್ಯದಲ್ಲಿ ಐವರು ಪಕ್ಷೇತರ ಶಾಸಕರ ಜೊತೆ ಸೇರಿ ಅಧಿಕಾರ ನಡೆಸುತ್ತಿದ್ದೇವೆ. ನಮಗೆ ಕಾಂಗ್ರೆಸ್ ಶಾಸಕರ ಅಗತ್ಯ ಇರುವುದಿಲ್ಲ. ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ವಿಶೇಷ ಅಂದರೆ, ಎರಡು ದಿನಗಳ ಹಿಂದೆ ಬಿಜೆಪಿ ಗೋವಾ ಉಸ್ತುವಾರಿ ಆಗಿರುವ ಸಿಟಿ ರವಿ, ನಮ್ಮ ಪಕ್ಷದಲ್ಲಿ ಸದ್ಯ 20 ಶಾಸಕರಿದ್ದಾರೆ. ಈ ವರ್ಷಾಂತ್ಯದ ಒಳಗೆ ನಮ್ಮಲ್ಲಿ 30 ಶಾಸಕರು ಆಗಲಿದ್ದಾರೆ ಎಂದು ಹೇಳಿದ್ದರು. ಆಮೂಲಕ ಕಾಂಗ್ರೆಸ್ ಶಾಸಕರನ್ನು ಸೆಳೆಯುತ್ತಿರುವುದನ್ನು ಪರೋಕ್ಷವಾಗಿ ಸುಳಿವು ನೀಡಿದ್ದರು. ಇದರ ಬೆನ್ನಲ್ಲೇ ಕಾಂಗ್ರೆಸ್ ಪ್ರಮುಖ ನಾಯಕರಿಬ್ಬರು ಬಿಜೆಪಿ ಕಡೆ ವಾಲಿದ್ದು ಸ್ಪಷ್ಟವಾಗಿದ್ದು, ಕಾಂಗ್ರೆಸ್ ಉಸ್ತುವಾರಿ ಸೇರಿದಂತೆ ಪ್ರಮುಖ ನಾಯಕರು ತಡಬಡಾಯಿಸಿದ್ದಾರೆ.
ಗೋವಾದಲ್ಲಿ ಸದ್ಯ 11 ಕಾಂಗ್ರೆಸ್ ಶಾಸಕರಿದ್ದು ಆ ಪೈಕಿ ಕೆಲವರು ಬಿಜೆಪಿ ಸಂಪರ್ಕದಲ್ಲಿದ್ದಾರೆಂದು ಹೇಳಲಾಗುತ್ತಿದೆ. ಬಿಜೆಪಿ ಕಳೆದ ಚುನಾವಣೆಯಲ್ಲಿ 20 ಶಾಸಕರನ್ನು ಗೆದ್ದು ಐವರು ಪಕ್ಷೇತರ ಶಾಸಕರ ಬಲದಲ್ಲಿ ಅಧಿಕಾರಕ್ಕೇರಿತ್ತು.
The Congress on Sunday dismissed Michael Lobo as the Leader of the Opposition in the Goa assembly for allegedly trying to engineer defections in cahoots with the ruling BJP. At a press conference, AICC Goa in-charge Dinesh Gundu Rao said that a “conspiracy was hatched by some of our own leaders with the BJP" to weaken the party and “engineer defections". “This conspiracy was led by two of our own leaders — LoP Michael Lobo and Digambar Kamat."Kamat is the former chief minister of Goa and was also a CM nominee for the elections held earlier this year.
06-05-25 08:18 pm
Bangalore Correspondent
Hubballi Accident, Sagara, Five Killed: ಹುಬ್ಬ...
06-05-25 01:35 pm
Hassan Suicide, Police Constable Harrasment:...
05-05-25 01:30 pm
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
06-05-25 02:45 pm
HK News Desk
ಭಾರತ - ಪಾಕ್ ಯುದ್ಧ ಸನ್ನಿವೇಶ ; ದೇಶಾದ್ಯಂತ ಮೇ 7ರಂ...
05-05-25 11:10 pm
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
06-05-25 06:36 pm
Mangalore Correspondent
Suhas Shetty Murder, Bommai, Dinesh Gundurao:...
06-05-25 06:17 pm
Mangalore, Kodikere Loki Arrest: ಕಮ್ಯುನಲ್ ಕೇಸ...
06-05-25 04:02 pm
Suhas Shetty Murder, Mangalore, Police: ಅಹಿತಕ...
06-05-25 12:32 pm
Mangalore Police, Sharan Pumpwell: ದಕ್ಷಿಣ ಕನ್...
05-05-25 10:59 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm