ದ್ರೌಪದಿ ಮುರ್ಮುಗೆ ಬೆಂಬಲ ಘೋಷಿಸಿದ ಉದ್ಧವ್ ಠಾಕ್ರೆ ;   ಕಾಂಗ್ರೆಸ್ ಜೊತೆಗಿದ್ದುಕೊಂಡೇ ಎನ್ ಡಿಎ ಅಭ್ಯರ್ಥಿ ಬೆಂಬಲ

12-07-22 08:44 pm       HK News Desk   ದೇಶ - ವಿದೇಶ

ಶಿವಸೇನೆ ವರಿಷ್ಠ ಉದ್ಧವ್ ಠಾಕ್ರೆ ಪಕ್ಷದ ಸಂಸದರ ಸಭೆಯ ಬಳಿಕ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ.

ಮುಂಬೈ, ಜುಲೈ 12: ಶಿವಸೇನೆ ವರಿಷ್ಠ ಉದ್ಧವ್ ಠಾಕ್ರೆ ಪಕ್ಷದ ಸಂಸದರ ಸಭೆಯ ಬಳಿಕ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ. ಕಾಂಗ್ರೆಸ್, ಎನ್ ಸಿಪಿ ಜೊತೆಗೆ ಸರಕಾರ ನಡೆಸಿದ್ದ ಉದ್ಧವ್ ಠಾಕ್ರೆ, ಮಹಾರಾಷ್ಟ್ರದ ಏನಕಾಥ ಶಿಂಧೆ ಸರಕಾರದ ವಿರುದ್ಧ ಹೋರಾಟ ನಡೆಸುತ್ತಿರುವ ಮಧ್ಯೆಯೇ ಬಿಜೆಪಿ ನೇತೃತ್ವದ ರಾಷ್ಟ್ರಪತಿ ಅಭ್ಯರ್ಥಿಯನ್ನು ಬೆಂಬಲಿಸಿ ಅಚ್ಚರಿ ಮೂಡಿಸಿದ್ದಾರೆ.

ನನಗೆ ಯಾರದೇ ಒತ್ತಡ ಇಲ್ಲ. ಹಾಗೆಂದು ನಾವು ಯಾವುದೇ ಸ್ಥಾಪಿತ ಹಿತಾಸಕ್ತಿಯ ಭಾವನೆಯನ್ನೂ ಹೊಂದಿಲ್ಲ. ಮೊದಲ ಬಾರಿಗೆ ಬುಡಕಟ್ಟು ಮಹಿಳೆಗೆ ರಾಷ್ಟ್ರಪತಿಯಾಗುವ ಅವಕಾಶ ಬಂದಿದೆ. ಈ ಬಗ್ಗೆ ಕೆಲವು ಸಂಸದರು ಬುಡಕಟ್ಟು ಮಹಿಳೆಗೆ ಬೆಂಬಲಿಸುವ ಒಲವು ವ್ಯಕ್ತಪಡಿಸಿದ್ದಾರೆ. ಹಾಗಾಗಿ ನಾವು ದ್ರೌಪದಿ ಬೆಂಬಲಿಸಲು ನಿರ್ಧರಿಸಿದ್ದೇವೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.

Pratibha Patil Birthday Special: Lesser-known facts about the former  President of India

Pranab Mukherjee: Latest News, Videos and Pranab Mukherjee Photos | Times  of India

ಅಲ್ಲದೆ, ಈ ಹಿಂದೆ ಶಿವಸೇನೆ ಎನ್ ಡಿಎ ಮೈತ್ರಿಕೂಟದಲ್ಲಿದ್ದರೂ ಯುಪಿಎ ಸರಕಾರ ಆಡಳಿತ ನಡೆಸುತ್ತಿದ್ದಾಗ ಪ್ರತಿಭಾ ಪಾಟೀಲ್ ಮತ್ತು ಪ್ರಣವ್ ಮುಖರ್ಜಿಗೆ ಬೆಂಬಲ ನೀಡಿದ್ದನ್ನು ಉದ್ಧವ್ ಠಾಕ್ರೆ ಸ್ಮರಿಸಿದ್ದಾರೆ. ಶಿವಸೇನೆ ಯಾವತ್ತೂ ರಾಜಕೀಯ ಮೀರಿ ಯೋಚನೆ ಮಾಡುತ್ತದೆ. ದೇಶದ ಒಳಿತಿಗಾಗಿ ನಿರ್ಧಾರ ಕೈಗೊಳ್ಳುತ್ತದೆ ಎಂದು ಠಾಕ್ರೆ ಹೇಳಿದ್ದಾರೆ.

Presidential Poll: Support NDA's Droupadi Murmu, 16 Shiv Sena MPs Urge  Uddhav Thackeray

Naradmuni, Shukracharya' — 1 in 3 Shiv Sena rebels blames Sanjay Raut for  split

ಶಿವಸೇನೆಯ ಬುಡಕಟ್ಟು ಜನಾಂಗವನ್ನು ಮತ್ತು ಪರಿಶಿಷ್ಟ ವರ್ಗವನ್ನು ಪ್ರತಿನಿಧಿಸುವ ವಿಧಾನ ಪರಿಷತ್ ಸದಸ್ಯರು ಮತ್ತು ಶಾಸಕರು ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಲು ಒಲವು ವ್ಯಕ್ತಪಡಿಸಿದ್ದರು. ಇದೇ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿರುವ ಶಿವಸೇನೆ ಸಂಸದ ಸಂಜಯ ರಾವುತ್, ನಾವು ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಿದ್ದೇವೆ ಅನ್ನುವ ಮಾತ್ರಕ್ಕೆ ಬಿಜೆಪಿಯನ್ನು ಬೆಂಬಲಿಸುತ್ತೇವೆಂದು ಅರ್ಥವಲ್ಲ. ನಾವು ಬಿಜೆಪಿಯನ್ನು ಬೆಂಬಲಿಸುತ್ತಿಲ್ಲ ಎಂದು ಹೇಳಿದ್ದಾರೆ.

FIR against former Shiv Sena corporator, six others | Cities News,The  Indian Express

ಶಿವಸೇನೆ ಮಹಾರಾಷ್ಟ್ರದಲ್ಲಿ 18 ಸಂಸದರು ಮತ್ತು ಮೂವರು ರಾಜ್ಯಸಭೆ ಸದಸ್ಯರನ್ನು ಹೊಂದಿದೆ. ಅಲ್ಲದೆ, ಪಕ್ಷದಲ್ಲಿ 55 ಶಾಸಕರಿದ್ದು, ಆ ಪೈಕಿ 15 ಉದ್ಧವ್ ಠಾಕ್ರೆ ಜೊತೆಗಿದ್ದರೆ, 40 ಮಂದಿ ಏಕನಾಥ ಶಿಂಧೆ ಜೊತೆಗಿದ್ದಾರೆ. ಬಿಜೆಪಿ ಜೊತೆ ಸೇರಿ ಶಿವಸೇನೆ ಬಂಡಾಯ ಶಾಸಕರು ಸರಕಾರ ರಚನೆಯ ಜಟಾಪಟಿ ನಡುವೆಯೂ ಶಿವಸೇನೆಯ ವರಿಷ್ಠ ಉದ್ಧವ್ ಠಾಕ್ರೆ ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿಯನ್ನು ಬೆಂಬಲಿಸಿದ್ದು ಕಾಂಗ್ರೆಸ್ ಪಾಲಿಗೆ ಮುಖಭಂಗ ಆಗುವಂತಾಗಿದೆ. ಅಲ್ಲದೆ, ಮಹಾ ವಿಘಾಡಿ ಮೈತ್ರಿಕೂಟ ಮತ್ತಷ್ಟು ಅಸ್ಥಿರವಾಗುವತ್ತ ಸರಿದಿದೆ. 

Former Maharashtra chief minister Uddhav Thackeray on Tuesday declared that going beyond politics, his Shiv Sena faction would support NDA candidate Droupadi Murmu in the Presidential elections. Stating that there was no pressure on him, Uddhav acknowledged that this was the first occasion where a tribal woman is getting the opportunity to become the country’s President.