ಲಂಕಾದಲ್ಲಿ ಮತ್ತೆ ತುರ್ತು ಪರಿಸ್ಥಿತಿ ಘೋಷಣೆ, ರಾಜಿನಾಮೆ ನೀಡದೆ ಮಾಲ್ದೀವ್ಸ್ ಹಾರಿದ ಅಧ್ಯಕ್ಷ, ಪ್ರಧಾನಿ ಕಚೇರಿಗೂ ಮುತ್ತಿಗೆ  

13-07-22 02:20 pm       HK News Desk   ದೇಶ - ವಿದೇಶ

ಶ್ರೀಲಂಕಾದಲ್ಲಿ ಮತ್ತೆ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ದೇಶಾದ್ಯಂತ ಜನರು ಬೀದಿಗಿಳಿದು ಪ್ರತಿಭಟನೆ ಆರಂಭಿಸಿರುವಾಗಲೇ ಅಧ್ಯಕ್ಷ ಗೊಟಬಾಯ ರಾಜಪಕ್ಷ ರಾಜಿನಾಮೆ ನೀಡುವ ಬದಲು ಸದ್ದಿಲ್ಲದೆ ಮಾಲ್ದೀವ್ಸ್ ದೇಶಕ್ಕೆ ಪರಾರಿಯಾಗಿದ್ದಾರೆ.

ಕೊಲಂಬೋ, ಜುಲೈ 13: ಶ್ರೀಲಂಕಾದಲ್ಲಿ ಮತ್ತೆ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ದೇಶಾದ್ಯಂತ ಜನರು ಬೀದಿಗಿಳಿದು ಪ್ರತಿಭಟನೆ ಆರಂಭಿಸಿರುವಾಗಲೇ ಅಧ್ಯಕ್ಷ ಗೊಟಬಾಯ ರಾಜಪಕ್ಷ ರಾಜಿನಾಮೆ ನೀಡುವ ಬದಲು ಸದ್ದಿಲ್ಲದೆ ಮಾಲ್ದೀವ್ಸ್ ದೇಶಕ್ಕೆ ಪರಾರಿಯಾಗಿದ್ದಾರೆ. ತನ್ನ ಪತ್ನಿ ಮತ್ತು ಇಬ್ಬರು ಬಾಡಿ ಗಾರ್ಡ್ ಗಳನ್ನು ಇಟ್ಟುಕೊಂಡು ಬುಧವಾರ ಬೆಳಗ್ಗೆ ಮಾಲ್ದೀವ್ಸ್ ರಾಜಧಾನಿ ಮಾಲೆಗೆ ತೆರಳಿದ್ದಾರೆ.

ಇದೇ ವೇಳೆ, ಸಾವಿರಾರು ಉದ್ರಿಕ್ತರು ಪ್ರಧಾನಿ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಅಧ್ಯಕ್ಷ ಗೊಟಬಾಯ ಮಾಲ್ದೀವ್ಸ್ ಪರಾರಿಯಾಗುತ್ತಲೇ ದೇಶದಲ್ಲಿ ಮತ್ತೆ ತುರ್ತು ಪರಿಸ್ಥಿತಿಯನ್ನು ಹಂಗಾಮಿ ಪ್ರಧಾನಿ ರನಿಲ್ ವಿಕ್ರಮಸಿಂಘೆ ಘೋಷಿಸಿದ್ದಾರೆ. ಗೊಟಬಾಯ ಪಲಾಯನ ಮಾಡಿರುವುದರಿಂದ ರನಿಲ್ ವಿಕ್ರಮಸಿಂಘೆ ಅವರೇ ಹಂಗಾಮಿ ಅಧ್ಯಕ್ಷರಾಗಲಿದ್ದಾರೆ ಎಂದು ಸಂಸತ್ತಿನ ಸ್ಪೀಕರ್ ನೇಮಕ ಮಾಡಿದ್ದಾರೆ. ಪ್ರಧಾನಿ ಕಚೇರಿಗೆ ಮುತ್ತಿಗೆ ಹಾಕಿರುವ ಪ್ರತಿಭಟನಾಕಾರರು ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಕೂಡ ಅಧ್ಯಕ್ಷರ ಜೊತೆ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಪೊಲೀಸರು ಜಲಫಿರಂಗಿ, ಅಶ್ರುವಾಯು ಸಿಡಿಸಿ ಜನರನ್ನು ಚದುರಿಸಲು ಯತ್ನಿಸುತ್ತಿದ್ದಾರೆ.

Sri Lankan president flees the country amid economic crisis | The Seattle  Times

Sri Lankan president flees the country amid economic crisis

ಇದಕ್ಕೂ ಮುನ್ನ ಕೊಲಂಬೋ ವಿಮಾನ ನಿಲ್ದಾಣದಿಂದ ದುಬೈಗೆ ಹಾರಲು ಅಧ್ಯಕ್ಷ ಗೊಟಬಾಯ ರಾಜಪಕ್ಷ ಯತ್ನಿಸಿದ್ದರು. ಕಮರ್ಶಿಯಲ್ ವಿಮಾನದ ಮೂಲಕ ತೆರಳಲು ಅವಕಾಶ ಸಿಗದ ಕಾರಣ ಇತರೇ ಸಾರ್ವಜನಿಕ ವಿಮಾನದಲ್ಲಿಯೇ ತೆರಳುವಂತೆ ಸೂಚಿಸಲಾಗಿತ್ತು. ಆದರೆ, ಸರದಿಯಲ್ಲಿ ನಿಂತು ವಿಮಾನದ ಟಿಕೆಟ್ ಪಡೆಯಬೇಕಿದ್ದರಿಂದ ಸಾಧ್ಯವಾಗಲಿಲ್ಲ. ಹೀಗಾಗಿ ಮಾಲ್ದೀವ್ಸ್ ತೆರಳುವ ವಿಮಾನದ ಮೂಲಕ ತೆರಳಿದ್ದು, ಅಲ್ಲಿ ಮಾಲೆ ದ್ವೀಪದಲ್ಲಿ ನಿಗೂಢ ಜಾಗಕ್ಕೆ ತೆರಳಿದ್ದಾರೆ ಎನ್ನಲಾಗುತ್ತಿದೆ. ಮಹಿಂದಾ ರಾಜಪಕ್ಸ, ಗೊಟಬಾಯ ರಾಜಪಕ್ಸ ಸೇರಿದಂತೆ ರಾಜಪಕ್ಸ ಕುಟುಂಬಸ್ಥರು ಭಾರೀ ಭ್ರಷ್ಟಾಚಾರದಲ್ಲಿ ತೊಡಗಿ, ದೇಶದ ಸ್ಥಿತಿಯನ್ನು ಅಧೋಗತಿಗೆ ತಂದಿದ್ದಾರೆ ಎನ್ನುವ ಆರೋಪವನ್ನು ಜನರು ಮಾಡುತ್ತಿದ್ದಾರೆ.

Sri Lanka declared a state of emergency Wednesday as thousands of people mobbed the prime minister’s office after the country’s president flew to the Maldives, following months of widespread protests against an economic crisis. President Gotabaya Rajapaksa had promised at the weekend to resign on Wednesday and clear the way for a “peaceful transition of power” after fleeing his official residence in Colombo just before tens of thousands of protesters overran it.