ಬ್ರೇಕಿಂಗ್ ನ್ಯೂಸ್
14-07-22 08:31 pm HK News Desk ದೇಶ - ವಿದೇಶ
ಪಾಟ್ನಾ, ಜುಲೈ 14: ಪ್ರಧಾನಿ ಮೋದಿ ಬಿಹಾರಕ್ಕೆ ಭೇಟಿ ನೀಡುವ ಸಂದರ್ಭದಲ್ಲಿಯೇ ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿದ್ದ ಒಬ್ಬರು ನಿವೃತ್ತ ಪೊಲೀಸ್ ಅಧಿಕಾರಿ ಸೇರಿದಂತೆ ಇಬ್ಬರನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ. ಪಾಟ್ನಾ ನಗರದ ಫುಲ್ವಾರಿ ಶರೀಫ್ ಎಂಬ ಪ್ರದೇಶದಲ್ಲಿ ಇಬ್ಬರನ್ನು ಸೆರೆಹಿಡಿಯಲಾಗಿದೆ.
ಜಾರ್ಖಂಡ್ ನಲ್ಲಿ ಪೊಲೀಸ್ ಅಧಿಕಾರಿಯಾಗಿ ನಿವೃತ್ತಿ ಪಡೆದಿದ್ದ ಮೊಹಮ್ಮದ್ ಜಲಾಲುದ್ದೀನ್ ಮತ್ತು ಅತ್ತರ್ ಪರ್ವೇಜ್ ಬಂಧಿತರು. ಇವರು ತೀವ್ರಗಾಮಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜೊತೆಗೆ ಗುರುತಿಸಿಕೊಂಡಿದ್ದರು. ಜಲಾಲುದ್ದೀನ್ ಈ ಹಿಂದೆ ನಿಷೇಧಿತ ಸಿಮಿ ಸಂಘಟನೆಯಲ್ಲೂ ತೊಡಗಿಸಿಕೊಂಡಿದ್ದ. ಪ್ರಧಾನಿ ಬರುತ್ತಿರುವ ಸಂದರ್ಭದಲ್ಲಿ ನಾವು ಅಲರ್ಟ್ ಇರುತ್ತೇವೆ. ಇಂಥ ಸಂಘಟನೆಗಳ ಸದಸ್ಯರು, ಅವರ ಕಚೇರಿ ಮೇಲೆ ನಿಗಾ ಇಡುತ್ತೇವೆ. ಉಗ್ರವಾದಿ ತರಬೇತಿ ಬಗ್ಗೆ 26 ಮಂದಿಯ ವಿರುದ್ಧ ಎಫ್ಐಆರ್ ದಾಖಲಿಸಿದ್ದು ಮೂರು ಮಂದಿಯನ್ನು ಬಂಧಿಸಿದ್ದೇವೆ ಎಂದು ಪಾಟ್ನಾ ಎಎಸ್ಪಿ ಮನೀಶ್ ಕುಮಾರ್ ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಬಿಹಾರ ವಿಧಾನಸಭೆಯ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಪ್ರಧಾನಿ ಆಗಮಿಸುವವರಿದ್ದರು. ಈ ಹಿನ್ನೆಲೆಯಲ್ಲಿ ಬಿಹಾರ ಪೊಲೀಸರು ದೇಶ ವಿರೋಧಿ ಚಟುವಟಿಕೆಯ ಬಗ್ಗೆ ನಿಗಾ ಇರಿಸಿದ್ದರು. ಅತ್ತರ್ ಪರ್ವೇಜ್ ದೇಶ-ವಿದೇಶದಲ್ಲಿ ನೆಟ್ವರ್ಕ್ ಹೊಂದಿದ್ದು ದೇಶ ವಿರೋಧಿ ಚಟುವಟಿಕೆ ನಡೆಸುವುದಕ್ಕಾಗಿಯೇ ಲಕ್ಷಾಂತರ ರೂಪಾಯಿ ಹಣ ಸಂಗ್ರಹ ಮಾಡುತ್ತಿದ್ದ. ಸದ್ಯಕ್ಕೆ 26 ಮಂದಿ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದೇವೆ. ಮೋದಿ ಭೇಟಿ ನೀಡುವ 15 ದಿನ ಮೊದಲೇ ಪಾಟ್ನಾದ ಫುಲ್ವಾರಿ ಶರೀಫ್ ಪ್ರದೇಶದಲ್ಲಿ ಉಗ್ರವಾದಿ ತರಬೇತಿ ಆರಂಭಿಸಲಾಗಿತ್ತು ಎಂದು ಮನೀಶ್ ಕುಮಾರ್ ತಿಳಿಸಿದ್ದಾರೆ.
ತರಬೇತಿ ಸಂದರ್ಭದಲ್ಲಿ ಸ್ಥಳೀಯರಿಗೆ ಕತ್ತಿ, ಚೂರಿಯನ್ನು ಹೇಗೆ ಬಳಸಬೇಕು ಎಂದು ಹೇಳಿಕೊಡುತ್ತಿದ್ದರು. ಕೋಮು ಗಲಭೆ ಸಂದರ್ಭದಲ್ಲಿ ಹೇಗೆ ವರ್ತಿಸಬೇಕು ಅನ್ನುವ ಬಗ್ಗೆಯೂ ತರಬೇತಿ ಕೊಡುತ್ತಿದ್ದರು. ತನಿಖೆಯ ಸಂದರ್ಭದಲ್ಲಿ ಬೇರೆ ರಾಜ್ಯಗಳ ಕಾರ್ಯಕರ್ತರು ಕೂಡ ಪಾಟ್ನಾಕ್ಕೆ ಭೇಟಿ ಕೊಡುತ್ತಿದ್ದರು ಅನ್ನೋದು ಗೊತ್ತಾಗಿದೆ. ಹೀಗೆ ಭೇಟಿ ನೀಡುತ್ತಿದ್ದ ವೇಳೆ ಹೊಟೇಲುಗಳಲ್ಲಿ ತಮ್ಮ ನಿಜ ಹೆಸರುಗಳನ್ನು ಮುಚ್ಚಿಟ್ಟು ನೈಜ ಗುರುತುಗಳನ್ನು ಮರೆಮಾಚುತ್ತಿದ್ದರು. ದಾಳಿ ವೇಳೆ ಇಸ್ಲಾಮಿಕ್ ತೀವ್ರವಾದ ಬಿತ್ತುವ ಹಲವು ಪುಸ್ತಕ, ಇನ್ನಿತರ ಆಕ್ಷೇಪಾರ್ಹ ದಾಖಲೆ, ಬರಹ ಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಎಸ್ಪಿ ಮನೀಶ್ ಕುಮಾರ್ ಹೇಳಿದ್ದಾರೆ. ಆರೋಪಿ ಪರ್ವೇಜ್ ತಮ್ಮ ಈ ಹಿಂದೆ 2001-02ರಲ್ಲಿ ಸಿಮಿ ಜೊತೆಗೆ ಗುರುತಿಸಿಕೊಂಡು ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಸಿಕ್ಕಿಬಿದ್ದು ಜೈಲುಪಾಲಾಗಿದ್ದ. ಪರ್ವೇಜ್ ಹಣಕಾಸು ವ್ಯವಹಾರದ ಬಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೂಡ ತನಿಖೆ ಆರಂಭಿಸಿದ್ದಾರೆ ಎಂದವರು ಹೇಳಿದ್ದಾರೆ.
‘’2047ರಲ್ಲಿ ಇಸ್ಲಾಮಿಕ್ ರಾಷ್ಟ್ರವಾಗಿಸುತ್ತೇವೆ’’
ಇಂಡಿಯಾ ವಿಶನ್-2047 ಎನ್ನುವ ಹೆಸರಿನ ಪುಸ್ತಕ, ದಾಖಲೆ ಪತ್ರಗಳು ಸಿಕ್ಕಿದ್ದು, ಅದರಲ್ಲಿ 2047ರಲ್ಲಿ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವಾಗಿಸಲು ಪಿಎಫ್ಐ ಗುರಿ ಇರಿಸಿರುವ ಬಗ್ಗೆ ಬರೆಯಲಾಗಿದೆ. ಅಲ್ಲದೆ, ಹೇಡಿಗಳ ಸಮುದಾಯದ ಮಂದಿ ದೇಶದಲ್ಲಿ ಬಹುಸಂಖ್ಯಾತರಾಗಿದ್ದು ಮರಳಿ ಭಾರತವನ್ನು ವಶಕ್ಕೆ ಪಡೆಯಬೇಕು ಎಂಬುದಾಗಿ ಬರೆಯಲಾಗಿತ್ತು. ಎಂಟು ಪುಟಗಳ ಬರಹದಲ್ಲಿ ಹಲವು ಆಕ್ಷೇಪಾರ್ಹ ವಿಚಾರಗಳಿರುವುದನ್ನು ಪೊಲೀಸರು ತಿಳಿಸಿದ್ದಾರೆ. ಮುಸ್ಲಿಮರು ಕೇವಲ ಹತ್ತು ಶೇಕಡಾ ಇದ್ದರೂ, ಹೇಡಿ ಬಹುಸಂಖ್ಯಾತರನ್ನು ಸದೆಬಡಿದು ಮರಳಿ ಅಧಿಕಾರ ಸ್ಥಾಪಿಸಲು ಶಕ್ತರಿದ್ದೇವೆ. ದೇಶದಲ್ಲಿ ಅಧಿಕಾರ ಸ್ಥಾಪಿಸುವ ಬಗ್ಗೆ ಪಿಎಫ್ಐ ಪೂರ್ಣ ವಿಶ್ವಾಸ ಹೊಂದಿದೆ. ಇದಕ್ಕಾಗಿ ನಾವು ಮುಸ್ಲಿಂ ರಾಷ್ಟ್ರಗಳಿಂದ ಬೆಂಬಲವನ್ನೂ ಪಡೆಯಬೇಕಾಗಿದೆ. ಇತ್ತೀಚಿನ ವರ್ಷಗಳಲ್ಲಿ ಮುಸ್ಲಿಂ ರಾಷ್ಟ್ರ ಟರ್ಕಿಯಿಂದ ಬೆಂಬಲ ಗಳಿಸುವಲ್ಲಿ ಪಿಎಫ್ಐ ಯಶಸ್ಸು ಕಂಡಿದೆ ಎಂದೆಲ್ಲ ಬರಹಗಳನ್ನು ಬರೆದಿರುವುದು ಪೊಲೀಸರಿಗೆ ಲಭಿಸಿದ್ದಾಗಿ ಇಂಡಿಯಾ ಟಿವಿ ತನ್ನ ವೆಬ್ ಸೈಟ್ ನಲ್ಲಿ ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
Prime Minister Narendra Modi's visit to Bihar on July 12 was on target of terrorists. Bihar Police have busted a "potential terror module indulging in anti-India activities" by arresting three people, including a retired Jharkhand police officer, with alleged links to extremist outfit Popular Front of India (PFI). The accused were arrested in the Phulwari Sharif area of Patna late on Wednesday. "The arrested persons have been identified as Mohammad Jallauddin, a retired Jharkhand police officer, and Athar Parvez. They have links with PFI. Jallauddin was earlier associated with the Students' Islamic Movement of India (SIMI)," Phulwari Sharif Assistant Superintendent of Police (ASP) Manish Kumar said.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
16-09-25 02:46 pm
HK News Desk
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 07:12 pm
HK News Desk
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm