ಬ್ರೇಕಿಂಗ್ ನ್ಯೂಸ್
15-07-22 03:27 pm HK News Desk ದೇಶ - ವಿದೇಶ
ಕೊಲಂಬೋ, ಜುಲೈ 15: ಮಾಲ್ದೀವ್ಸ್ ಬಳಿಕ ಸಿಂಗಾಪುರಕ್ಕೆ ಹಾರಿರುವ ಲಂಕಾ ಅಧ್ಯಕ್ಷ ಗೊಟಬಾಯ ರಾಜಪಕ್ಸ ಅಂತೂ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ,. ರಾಜಿನಾಮೆ ಪತ್ರವನ್ನು ಸಂಸತ್ತಿನ ಸ್ಪೀಕರ್ ಅಂಗೀಕರಿಸಿದ್ದು, ಹೊಸ ಅಧ್ಯಕ್ಷರ ನೇಮಕ ಆಗೋ ವರೆಗೂ ಹಂಗಾಮಿ ಅಧ್ಯಕ್ಷರಾಗಿ ರನಿಲ್ ವಿಕ್ರಮಸಿಂಘೆ ಅವರನ್ನೇ ಮುಂದುವರಿಯುವಂತೆ ಸೂಚಿಸಿದ್ದಾರೆ. ರಾಜಪಕ್ಸ ರಾಜಿನಾಮೆ ನೀಡುತ್ತಿದ್ದಂತೆ ಕೊಲಂಬೋಲ್ಲಿ ಬೀದಿಗಿಳಿದಿದ್ದ ಪ್ರತಿಭಟನಾಕಾರರು ಹರ್ಷ ವ್ಯಕ್ತಪಡಿಸಿದ್ದಾರೆ.
ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಜುಲೈ 20ರಂದು ನಡೆಯಲಿದೆ ಎಂದು ಸಂಸತ್ತಿನ ಮೂಲಗಳು ತಿಳಿಸಿವೆ. ಇದರೊಂದಿಗೆ ನೂರು ದಿನಗಳ ಪರ್ಯಂತ ನಡೆದ ಪ್ರತಿಭಟನೆ ಅಂತ್ಯವಾಗಿದ್ದು, ದೇಶದ ಆರ್ಥಿಕ ಬಿಕ್ಕಟ್ಟು ಪರಿಹಾರಕ್ಕೆ ಸರ್ವಪಕ್ಷಗಳ ಸರಕಾರ ಅಸ್ತಿತ್ವಕ್ಕೆ ತರಲು ವೇದಿಕೆ ಸಜ್ಜಾಗಿದೆ. ಅಧ್ಯಕ್ಷರ ಸ್ಥಾನಕ್ಕೇರಲು ಆಡಳಿತ ಮತ್ತು ವಿಪಕ್ಷಗಳಿಂದ ಹಲವರು ಕಸರತ್ತು ನಡೆಸುತ್ತಿದ್ದಾರೆ. ಆದರೆ, ಹಿರಿತನ ಮತ್ತು ಅನುಭವದ ಆಧಾರದಲ್ಲಿ ಹಾಲಿ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರೇ ಅಧ್ಯಕ್ಷರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇವರಲ್ಲದೆ, ಹಿರಿಯ ಸಚಿವ ಸಜಿತ್ ಪ್ರೇಮದಾಸ, ಮಾಜಿ ಸಚಿವ ದುಲ್ಲಾಸ್ ಅಲ್ಲಾಹಪೆರುಮಾ, ಜೆವಿಪಿ ಪಕ್ಷದ ನಾಯಕ ಅನುರಾ ಕುಮಾರ ನಾಯಕ ಹೆಸರು ಕೂಡ ಮುಂಚೂಣಿಯಲ್ಲಿ ಕೇಳಿಬರುತ್ತಿದೆ.
ಈ ನಡುವೆ, ಸ್ಪೀಕರ್ ಅಭಯವರ್ದನ ಜುಲೈ 16ರಂದು ಸಂಸತ್ತಿನ ಸಭೆ ಕರೆದಿದ್ದು, ಎಲ್ಲ ಪಕ್ಷಗಳ ಸಂಸದರು ಪಾಲ್ಗೊಳ್ಳುವಂತೆ ಸೂಚಿಸಿದ್ದಾರೆ. ಮುಂದಿನ ಅಧ್ಯಕ್ಷ ಮತ್ತು ಪ್ರಧಾನಿ ಆಯ್ಕೆ ಬಗ್ಗೆ ಸಂಸತ್ತಿನ ಅಭಿಪ್ರಾಯ ಆಲಿಸಲು ತಯಾರಿ ನಡೆಸಿದ್ದಾರೆ. ಈ ನಡುವೆ, ಗೊಟಬಾಯ ರಾಜಪಕ್ಸ ಲಂಕಾದಿಂದ ಎಸ್ಕೇಪ್ ಆಗಲು ಭಾರತದ ಹೈಕಮಿಷನ್ ಸಹಾಯ ಮಾಡಿದೆ ಎನ್ನುವ ವದಂತಿ ಹಬ್ಬಿದ್ದು, ರಾಯಭಾರ ಕಚೇರಿ ಅಂತಹ ವದಂತಿಯನ್ನು ಅಲ್ಲಗಳೆದಿದೆ. ಗೊಟಬಾಯ ರಾಜಿನಾಮೆಯೊಂದಿಗೆ ರಾಜಪಕ್ಸ ಕುಟುಂಬದ ಸುದೀರ್ಘ ಕಾಲದ ಸರ್ವಾಧಿಕಾರದ ಆಡಳಿತ ಕೊನೆಯಾಗಿದ್ದು, ಪ್ರಧಾನಿ, ಅಧ್ಯಕ್ಷ ಪದವಿಯನ್ನೂ ಕಳಕೊಂಡಿದ್ದಾರೆ. ಮೂರು ತಿಂಗಳ ಹಿಂದಿನ ವರೆಗೂ ಇದೇ ಕುಟುಂಬದ ಸದಸ್ಯರು ಅಧ್ಯಕ್ಷ, ಪ್ರಧಾನಿ, ಸಚಿವ ಸ್ಥಾನದಲ್ಲಿದ್ದರು.
ಲಂಕಾ ದಿವಾಳಿ ಮಾಡಿದ್ದ ರಾಜಪಕ್ಸ ಕುಟುಂಬ
ಆರ್ಥಿಕ ಬಿಕ್ಕಟ್ಟು ಎದುರಾಗಿ ಜನರು ಬೀದಿಗಿಳಿಯುತ್ತಲೇ ಮೊದಲಿಗೆ ಸಚಿವ ಸ್ಥಾನದಲ್ಲಿದ್ದ ಪ್ರಧಾನಿಯ ಪುತ್ರನೇ ರಾಜಿನಾಮೆ ನೀಡಿದ್ದ. ಆನಂತರ, ತೀವ್ರ ವಿರೋಧ ಎದುರಾದ ಬಳಿಕ ಪ್ರಧಾನಿ ಸ್ಥಾನಕ್ಕೆ ಮಹಿಂದಾ ರಾಜಪಕ್ಸ ರಾಜಿನಾಮೆ ನೀಡಿದ್ದರು. ಇದೀಗ ಅಧ್ಯಕ್ಷ ಸ್ಥಾನಕ್ಕೆ ಮಹಿಂದಾ ಅವರ ಸೋದರ ಗೊಟಬಾಯ ಅವರೂ ರಾಜಿನಾಮೆ ನೀಡಿದ್ದಾರೆ. ಸುದೀರ್ಘ ನಲ್ವತ್ತು ವರ್ಷಗಳಿಂದಲೂ ರಾಜಪಕ್ಸ ಕುಟುಂಬದ ಸದಸ್ಯರೇ ಲಂಕಾದಲ್ಲಿ ಅಧಿಕಾರ ಹೊಂದಿದ್ದು, ಪ್ರತಿ ಬಾರಿ ಆಯ್ಕೆಯಾಗಿ ಬರಲು ದೇಶದ ಜನರಿಗೆ ಅಗ್ಗದ ತಂತ್ರಗಳಿಗೆ ಮೊರೆ ಹೋಗಿದ್ದರು. ಇದೇ ನೀತಿಯಿಂದಾಗಿ ಲಂಕಾದಲ್ಲಿ ಆರ್ಥಿಕತೆ ದಿಕ್ಕೆಟ್ಟು ಹೋಗಿದ್ದು, ಸರಕಾರ ದಿವಾಳಿಯಾಗಿತ್ತು. ಪೆಟ್ರೋಲ್ ಸೇರಿದಂತೆ ದಿನಾವಶ್ಯಕ ಸಾಮಗ್ರಿಗಳ ಬೆಲೆ ಗಗನಕ್ಕೇರಿತ್ತು. ಕೊನೆಯಲ್ಲಿ ಪೆಟ್ರೋಲ್ ಖರೀದಿಸುವುದಕ್ಕೂ ಸರಕಾರದ ಬಳಿ ಹಣ ಇರಲಿಲ್ಲ. ಇದರ ಪರಿಣಾಮ ಜನರು ಕಳೆದ ಮೂರು ತಿಂಗಳಿಂದ ಬೀದಿಗಿಳಿದು ಹೋರಾಟ ಆರಂಭಿಸಿದ್ದರು. ಹಿಂಸೆಗೆ ಇಳಿಯದಿದ್ದರೂ, ಜನರು ರಾಜಪಕ್ಸ ಆಡಳಿತ ಕೊನೆಗೊಳಿಸುವಂತೆ ಆಗ್ರಹ ಮುಂದಿಟ್ಟಿದ್ದರು. ಭ್ರಷ್ಟಾಚಾರ, ಸ್ವಜನ ಪಕ್ಷಪಾತ ನಡೆಸಿಕೊಂಡು ಬಂದಿದ್ದ ರಾಜಪಕ್ಸ ಅಂತೂ ರಾಜ್ಯವನ್ನೇ ಬಿಟ್ಟು ಹೊರನಡೆದಿದ್ದಾರೆ.
Exhausted and drained after nearly 100 days of protests, a small crowd gathered its remaining strength Thursday to celebrate the resignation of Sri Lanka’s leader at the seaside headquarters of their campaign to oust him.A stone’s throw from what had days earlier been the office of President Gotabaya Rajapaksa, people smiled wearily at their compatriots as they danced,handed out sweets, embraced each other or waved the national flag.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm