ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ ಉಪ ರಾಷ್ಟ್ರಪತಿ ಎನ್ ಡಿಎ ಅಭ್ಯರ್ಥಿ ; ಸುಪ್ರೀಂ ಕೋರ್ಟ್ ವಕೀಲ, ಸಂಸದರಾಗಿದ್ದ ಧಂಕರ್ ! 

16-07-22 09:51 pm       HK News Desk   ದೇಶ - ವಿದೇಶ

ರಾಷ್ಟ್ರಪತಿ ಚುನಾವಣೆಗೆ ಕದನ ಕುತೂಹಲ ಏರ್ಪಟ್ಟಿರುವ ನಡುವೆಯೇ, ಭಾರತೀಯ ಜನತಾ ಪಕ್ಷ (ಬಿಜೆಪಿ) ಸಂಸದೀಯ ಮಂಡಳಿ ಸಭೆ ಶನಿವಾರ ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್ ಡಿಎ ಅಭ್ಯರ್ಥಿಯಾಗಿ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ ಅವರನ್ನು ಆಯ್ಕೆ ಮಾಡಿದೆ. 

ನವದೆಹಲಿ, ಜುಲೈ 16 : ರಾಷ್ಟ್ರಪತಿ ಚುನಾವಣೆಗೆ ಕದನ ಕುತೂಹಲ ಏರ್ಪಟ್ಟಿರುವ ನಡುವೆಯೇ, ಭಾರತೀಯ ಜನತಾ ಪಕ್ಷ (ಬಿಜೆಪಿ) ಸಂಸದೀಯ ಮಂಡಳಿ ಸಭೆ ಶನಿವಾರ ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್ ಡಿಎ ಅಭ್ಯರ್ಥಿಯಾಗಿ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ ಅವರನ್ನು ಆಯ್ಕೆ ಮಾಡಿದೆ. 

ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್ ಡಿಎ ಅಭ್ಯರ್ಥಿಯಾಗಿ ಜಗದೀಪ್ ಧಂಕರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಜೆಪಿ ನಡ್ಡಾ, ಕೇಂದ್ರ ಸಚಿವರಾದ ಅಮಿತ್ ಶಾ, ನಿತಿನ್ ಗಡ್ಕರಿ, ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮತ್ತು ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಬಿಜೆಪಿ ನಾಯಕರು ಸೇರಿದ್ದ ಸಭೆಯಲ್ಲಿ ಈ ನಿರ್ಣಯ ಮಾಡಲಾಗಿದೆ.‌

BJP - J.P. Nadda's Bengal tour from Wednesday - Telegraph India

CM Shivraj Singh Chouhan unveils three-year roadmap for Aatmanirbhar MP |  India News,The Indian Express

ಬಲಾಬಲದಲ್ಲಿ ಎನ್ ಡಿಎಗೆ ಮೇಲುಗೈ 

2 leaders of ruling NDA shot dead in a day in Bihar

ದೇಶದ ಮುಂದಿನ ಉಪ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. ಉಪಾಧ್ಯಕ್ಷ ಸ್ಥಾನಕ್ಕೆ ನಾಮಮಪತ್ರ ಸಲ್ಲಿಕೆಗೆ ಜುಲೈ 19 ಕೊನೆಯ ದಿನಾಂಕವಾಗಿದ್ದು, ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿ ಉಳಿದರೆ, ಆಗಸ್ಟ್ 6 ರಂದು ಚುನಾವಣೆ ನಡೆಯಲಿದೆ ಮತ್ತು ಅದೇ ದಿನ ಫಲಿತಾಂಶ ಘೋಷಣೆಯೂ ಆಗಲಿದೆ. ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹತೆ ಹೊಂದಿರುತ್ತಾರೆ. ಸಂಖ್ಯಾಬಲದಲ್ಲಿ ಎನ್ ಡಿಎ ಮೈತ್ರಿಕೂಟವು ಮೇಲುಗೈ ಹೊಂದಿದೆ. 

ಜಗದೀಪ್ ಧಂಖರ್ 18 ಮೇ, 1951ರಂದು ರಾಜಸ್ಥಾನದ ಕಿತಾನ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದ್ದರು. ಶಾಲಾ ಶಿಕ್ಷಣವನ್ನು ಚಿತ್ತೋರ್‌ಗಢದ ಸೈನಿಕ ಶಾಲೆಯಲ್ಲಿ ಪೂರ್ಣಗೊಳಿಸಿದ್ದು ಜೈಪುರದ ರಾಜಸ್ಥಾನ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದರು. ರಾಜ್ಯಪಾಲರಾಗೋದಕ್ಕೂ ಮುನ್ನ ಜಗದೀಪ್ ಧಂಖರ್ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. 2019ರಲ್ಲಿ ಪಶ್ಚಿಮ ಬಂಗಾಳ ರಾಜ್ಯಪಾಲರಾಗಿ ನೇಮಕಗೊಂಡಿದ್ದರು. ಅದಕ್ಕೂ ಹಿಂದೆ ಸುಪ್ರೀಂ ಕೋರ್ಟ್‌ ವಕೀಲರಾಗಿದ್ದರು. 1989- 91ರಲ್ಲಿ ಲೋಕಸಭೆ ಸದಸ್ಯರಾಗಿ ರಾಜಕೀಯ ಜೀವನ ಆರಂಭ. ರಾಜಸ್ಥಾನದ ಜುಂಜುನು ಕ್ಷೇತ್ರದಿಂದ ಜನತಾ ದಳದಿಂದ ಮೊದಲ ಬಾರಿಗೆ ಸಂಸದರಾಗಿ ಆಯ್ಕೆ ಆಗಿದ್ದರು.

The Bharatiya Janata Party (BJP) on Saturday announced the name of West Bengal Governor Jagdeep Dhankhar as the National Democratic Alliance (NDA) candidate for the Vice Presidential election.“NDA’s candidate for the post of Vice President of India will be Jagdeep Dhankhar. Kisan Putra Jagdeep Dhankhar has been in public life for more than three decades. Jagdeep Dhankhar’s life story reflects the spirit of new India – overcoming innumerable social and economic hurdles and achieving one’s goals,” said BJP chief JP Nadda.