ಫೇಸ್‌ಬುಕ್‌ ಪೋಸ್ಟ್ ನೆಪ ; ಬಾಂಗ್ಲಾದೇಶದಲ್ಲಿ ಹಿಂದುಗಳ ಮನೆ, ದೇವಸ್ಥಾನಗಳ ಮೇಲೆ ದಾಳಿ, ಬೆಂಕಿ ಹಚ್ಚಿ ಆಕ್ರೋಶ 

17-07-22 10:54 pm       HK News Desk   ದೇಶ - ವಿದೇಶ

ಫೇಸ್​​ಬುಕ್ ಪೋಸ್ಟ್​​ನಲ್ಲಿ ಇಸ್ಲಾಂ ಬಗ್ಗೆ ಅವಹೇಳನ ಮಾಡಲಾಗಿದೆ ಎಂಬ ಆರೋಪದಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿ ನಡೆದಿದೆ.  

ಢಾಕಾ, ಜುಲೈ 17 : ಫೇಸ್​​ಬುಕ್ ಪೋಸ್ಟ್​​ನಲ್ಲಿ ಇಸ್ಲಾಂ ಬಗ್ಗೆ ಅವಹೇಳನ ಮಾಡಲಾಗಿದೆ ಎಂಬ ಆರೋಪದಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿ ನಡೆದಿದೆ.  

ಹಲವಾರು ಮನೆ, ಅಂಗಡಿ ಮತ್ತು ಹಿಂದು ದೇಗುಲಗಳ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಶುಕ್ರವಾರ ಸಂಜೆ ದಿಗೋಲಿಯಾ ಗ್ರಾಮದಲ್ಲಿ ಮನೆಯೊಂದಕ್ಕೆ ಬೆಂಕಿ ಹಚ್ಚಿದ್ದು ಜನರ ಗುಂಪನ್ನು ಚದುರಿಸಲು ಪೊಲೀಸರು ಎಚ್ಚರಿಕೆ ಗುಂಡು ಹಾರಿಸಿದ್ದಾರೆ. ಇಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದ್ದು , ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ. ಆಕಾಶ್ ಸಾಹಾ ಎಂಬ ಯುವಕ ಫೇಸ್​​ಬುಕ್​​ನಲ್ಲಿ ಪೋಸ್ಟ್ ಹಾಕಿದ್ದು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಮುಸ್ಲಿಮರು ದಾಳಿ ನಡೆಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆಕಾಶ್ ಸಾಹಾ ಮತ್ತು ಅವರ ಅಪ್ಪ ಅಶೋಕ್ ಸಾಹಾ ಅವರನ್ನು ಬಂಧಿಸಿದ್ದಾರೆ. ಆಕಾಶ್ ಸಾಹಾ ಹಜರತ್ ಮುಹಮ್ಮದ್ ಅವರನ್ನು ಅವಹೇಳನ ಮಾಡಿ ಜುಲೈ 14ರಂದು ಫೇಸ್​​ಬುಕ್ ಪೋಸ್ಟೊಂದನ್ನು ಹಾಕಿದ್ದ. ಇದರಿಂದ ಕುಪಿತಗೊಂಡ ಜನರ ಗುಂಪೊಂದು ಅಂದು ಮಧ್ಯಾಹ್ನ ಸಾಹಾ ಮನೆ ಮುಂದೆ ಪ್ರತಿಭಟನೆ ನಡೆಸಿ ಮನೆಗೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

Hindu temple, homes vandalised in Bangladesh over Facebook post: Reports -  Oneindia News

Hindu temple, homes vandalised in Bangladesh over Facebook post: Reports |  udayavani

ಜೂನ್ 18ರಂದು ನಾರೈಲಿಯಲ್ಲಿ ನೂಪುರ್ ಶರ್ಮಾ ಅವರ ಫೋಟೊ ಹಾಕಿ ಬೆಂಬಲಿಸಿದ ವಿದ್ಯಾರ್ಥಿಯೊಬ್ಬನಿಗೆ ಕಾಲೇಜು ಪ್ರಾಂಶುಪಾಲರು ಬೆಂಬಲ ನೀಡಿದ್ದಾರೆ ಎಂಬ ಆರೋಪದಲ್ಲಿ ಅಲ್ಲಿನ ಸ್ಥಳೀಯರು ಪ್ರಾಂಶುಪಾಲರಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ನಡೆಸಿದ್ದ ಘಟನೆ ನಡೆದಿತ್ತು. ಸುದ್ದಿ ವಾಹಿನಿಯ ಚರ್ಚೆ ವೇಳೆ ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್ ಬಗ್ಗೆ ಹೇಳಿದ ಆಕ್ಷೇಪಾರ್ಹ ಹೇಳಿಕೆಗೆ ಜಗತ್ತಿನಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

A mob reportedly attacked a Hindu temple and vandalised several houses belonging to the Hindu community in Bangladesh's Narail district. The violence in Dighalia Upazila took place on Friday evening over a young Hindu boy's Facebook post, local media reported.Dhaka Tribune reported that the mob has grocery stores and several homes of the Hindu community.The angry villagers alleged that the boy hurt their religious sentiments with his social media post.