ಪಕ್ಷ ವಿರೋಧಿ ಹೆಸರಲ್ಲಿ ಸಂಸದರ ಉಚ್ಚಾಟನೆ ; ಮಹಾರಾಷ್ಟ್ರದಲ್ಲಿ ಶಿವಸೇನೆ ಎರಡು ಹೋಳು ! ಪಕ್ಷ ನಿಯಂತ್ರಣಕ್ಕೆ ಶಿಂಧೆ- ಠಾಕ್ರೆ ಹೊಯ್ದಾಟ ! 

18-07-22 10:36 pm       HK News Desk   ದೇಶ - ವಿದೇಶ

ಬಾಳಾ ಠಾಕ್ರೆ ಕಟ್ಟಿದ ಪಕ್ಷದ ನಿಯಂತ್ರಣಕ್ಕಾಗಿ ಏಕನಾಥ್ ಶಿಂಧೆ ಜೊತೆ ಸಂಘರ್ಷದಲ್ಲಿ ತೊಡಗಿರುವ ಶಿವಸೇನೆಯ ಉದ್ಧವ್ ಠಾಕ್ರೆ ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಹಲವಾರು ಪ್ರಮುಖ ನಾಯಕರನ್ನು ಪಕ್ಷದಿಂದ ವಜಾಗೊಳಿಸಿದ್ದಾರೆ.

ಮುಂಬೈ, ಜುಲೈ 18 : ಬಾಳಾ ಠಾಕ್ರೆ ಕಟ್ಟಿದ ಪಕ್ಷದ ನಿಯಂತ್ರಣಕ್ಕಾಗಿ ಏಕನಾಥ್ ಶಿಂಧೆ ಜೊತೆ ಸಂಘರ್ಷದಲ್ಲಿ ತೊಡಗಿರುವ ಶಿವಸೇನೆಯ ಉದ್ಧವ್ ಠಾಕ್ರೆ ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಹಲವಾರು ಪ್ರಮುಖ ನಾಯಕರನ್ನು ಪಕ್ಷದಿಂದ ವಜಾಗೊಳಿಸಿದ್ದಾರೆ. ಆಮೂಲಕ ಮಹಾರಾಷ್ಟ್ರದಲ್ಲಿ ಶಿವಸೇನೆ ಎರಡಾಗಿ ವಿಭಜನೆಗೊಳ್ಳುವುದು ಖಾತ್ರಿಯಾಗಿದೆ. 

ಏಕನಾಥ ಶಿಂಧೆ ಅಘಾಡಿ ಸರ್ಕಾರವನ್ನು ಉರುಳಿಸಿದ ನಂತರ ಠಾಕ್ರೆ ಹಲವು ನಾಯಕರನ್ನು ಪಕ್ಷದಿಂದ ವಜಾಗೊಳಿಸಿದ್ದಾರೆ. ಮಾಜಿ ಸಚಿವ ವಿಜಯ್ ಶಿವತಾರೆ, ಹಿಂಗೋಲಿ ಜಿಲ್ಲಾಧ್ಯಕ್ಷ ಸ್ಥಾನದಿಂದ ವಜಾಗೊಂಡ ಶಾಸಕ ಸಂತೋಷ್ ಬಂಗಾರ್, ಥಾಣೆ ಜಿಲ್ಲಾ ಮುಖ್ಯಸ್ಥ ನರೇಶ್ ಮ್ಹಾಸ್ಕೆ ಅವರನ್ನು ಠಾಕ್ರೆ ತಂಡ ಪಕ್ಷದಿಂದ ವಜಾಗೊಳಿಸಿದೆ. ಠಾಕ್ರೆ ಅವರು ಥಾಣೆ, ಪಾಲ್ಘರ್, ಅಮರಾವತಿ ಮತ್ತು ಯವತ್ಮಾಲ್ ಜಿಲ್ಲೆಗಳಲ್ಲಿ 100ಕ್ಕೂ ಹೆಚ್ಚು ಹೊಸ ಪದಾಧಿಕಾರಿಗಳನ್ನು ನೇಮಿಸಿದ್ದಾರೆ. ಹೊಸ ಪದಾಧಿಕಾರಿಗಳು ಬಂಡುಕೋರರು ಬಿಟ್ಟುಹೋದ ಖಾಲಿ ಹುದ್ದೆಗಳಿಗೆ ಎರಡನೇ ಹಂತದ ನಾಯಕರಾಗಿದ್ದಾರೆ.

Supreme Court: Latest news, Updates, Photos, Videos and more.

ಏಕನಾಥ್ ಶಿಂಧೆಯವರ ಬಂಡಾಯದ ನಂತರ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿತ್ತು. ಆಬಳಿಕ ಹೊಸ ಸರ್ಕಾರ ಸ್ಥಾಪನೆಯ ನಂತರ ಸುಪ್ರೀಂ ಕೋರ್ಟ್‌ನ ನಿರ್ಣಾಯಕ ವಿಚಾರಣೆಯ ನಡುವಲ್ಲೇ ಹೊಸ ಬೆಳವಣಿಗೆ ಉಂಟಾಗಿದೆ. ಮುಂದಿನ ಬುಧವಾರ ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ಎರಡೂ ಕಡೆಯ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ. ಪಕ್ಷಕ್ಕೆ ಸೇರಿದ 55 ಶಾಸಕರ ಪೈಕಿ 53 ಮಂದಿ ಅನರ್ಹತೆ ಪಟ್ಟಿಯಲ್ಲಿದ್ದಾರೆ. ಶಿಂಧೆ ಸೇರಿದಂತೆ ಏಕನಾಥ ಶಿಂಧೆ ಬಣದ 16 ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಠಾಕ್ರೆ ಪ್ರತಿಪಾದಿಸಿದ್ದಾರೆ. 

ಟೀಮ್ ಠಾಕ್ರೆ ತನ್ನ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ನಡೆಸಿದ ವಾರಗಳ ನಂತರ ಶಿಂಧೆ ಅವರ ಬಣ ಇಂದು ತನ್ನದೇ ಆದ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ನಡೆಸಿದೆ. ಜೂನ್ 25 ರ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಠಾಕ್ರೆ ತಂಡವು ಆರು ಪ್ರಮುಖ ನಿರ್ಣಯಗಳನ್ನು ಅಂಗೀಕರಿಸಿತ್ತು. ಉದ್ಧವ್ ಠಾಕ್ರೆ ಅವರನ್ನು ಸೇನಾ ಮುಖ್ಯಸ್ಥ ಎಂದು ಘೋಷಿಸಿತ್ತು. ಅಲ್ಲದೆ, ಪಕ್ಷದ ಕುರಿತು ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವರಿಗೆ ಅಧಿಕಾರ ನೀಡಿತ್ತು.

172 private members' bills to be introduced in Lok Sabha today | Latest  News India - Hindustan Times

ಇದೇ ವೇಳೆ, ಲೋಕಸಭೆಯಲ್ಲಿ ಪ್ರತ್ಯೇಕ ಗುಂಪು ರಚಿಸಲು ಶಿವಸೇನೆಯ 12 ಸಂಸದರು ಸಜ್ಜಾಗಿದ್ದು, ಸ್ಪೀಕರ್ ಭೇಟಿಗೆ ಮುಂದಾಗಿದ್ದಾರೆ. ಶಿವಸೇನೆಯ 19 ಸಂಸದರ ಪೈಕಿ ಕನಿಷ್ಠ 12 ಮಂದಿ ಲೋಕಸಭೆಯಲ್ಲಿ ಪ್ರತ್ಯೇಕ ಗುಂಪನ್ನು ರಚಿಸಿಕೊಂಡು ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ಔಪಚಾರಿಕ ಪತ್ರವನ್ನು ಸಲ್ಲಿಸಲಿದ್ದಾರೆ ಎಂದು ಮಹಾರಾಷ್ಟ್ರದ ಶಿವಸೇನೆ ಸಂಸದರೊಬ್ಬರು ತಿಳಿಸಿದ್ದಾರೆ.

After the Shiv Sena's division in Maharashtra assembly, its parliamentary party was also staring at a split with several MPs set to petition Lok Sabha Speaker Om Birla to recognise them as a separate group.A Shiv Sena Lok Sabha member claimed that at least 12 of the 18 Shiv Sena members will meet Birla to submit a formal letter to recognise it as a separate group.Kalaben Delkar, the Lok Sabha member from Dadra & Nagar Haveli, has pledged her allegiance to the Shiv Sena, but had not contested the election on the party symbol.