ಬ್ರೇಕಿಂಗ್ ನ್ಯೂಸ್
19-07-22 06:45 pm HK News Desk ದೇಶ - ವಿದೇಶ
ನವದೆಹಲಿ, ಜುಲೈ 19: ಕಳೆದು ಎಂಟು ವರ್ಷಗಳಲ್ಲಿ ಅಮೆರಿಕದ ಡಾಲರ್ ಎದುರು ಭಾರತೀಯ ಕರೆನ್ಸಿ ರೂಪಾಯಿ 25 ಶೇಕಡಾದಷ್ಟು ಕುಸಿತ ಕಂಡಿದೆ. ಸಂಸತ್ತಿನಲ್ಲಿ ಈ ಬಗ್ಗೆ ಹಣಕಾಸು ಸಚಿವಾಲಯ ಅಧಿಕೃತ ಮಾಹಿತಿ ನೀಡಿದ್ದು, ಕಳೆದ ಎಂಟು ವರ್ಷಗಳಲ್ಲಿ 16.08 ರೂಪಾಯಿ ಕುಸಿತ ಕಂಡಿದೆ ಎಂದು ಮಾಹಿತಿ ನೀಡಿದೆ.
2014ರಲ್ಲಿ ಒಂದು ಡಾಲರ್ ಗೆ ಆರ್ ಬಿಐ ಮಾಹಿತಿ ಪ್ರಕಾರ ರೂಪಾಯಿ ಮೌಲ್ಯ 63.33 ರೂಪಾಯಿ ಇತ್ತು. ಆದರೆ, 2022ರ ಜುಲೈ 11ರಂದು 79.41 ರೂಪಾಯಿ ಆಗಿದೆ. ಇದರಂತೆ, ಎಂಟು ವರ್ಷಗಳಲ್ಲಿ ಒಟ್ಟು 25 ಶೇಕಡಾ ರೂಪಾಯಿ ಮೌಲ್ಯ ಕುಸಿತ ಆಗಿದೆ. 2019ರ ಡಿಸೆಂಬರ್ 31ರಂದು ರೂಪಾಯಿ ಮೌಲ್ಯ 70ರ ಗಡಿ ದಾಟಿತ್ತು. ಆದರೆ ಕೋವಿಡ್ ಸಂದರ್ಭದಲ್ಲಿ ರೂಪಾಯಿ ದರ 70ರ ಗಡಿಯಲ್ಲೇ ನಿಂತಿತ್ತು ಎಂದು 2014ರಿಂದ 2022ರ ವರೆಗಿನ ಅಂಕಿ ಅಂಶಗಳನ್ನು ಹಣಕಾಸು ಸಚಿವೆ ನೀಡಿದ್ದಾರೆ.

ಸಂಸದರಾದ ದೀಪಕ್ ಬೈಜ್ ಮತ್ತು ವಿಜಯ್ ವಸಂತ್ ಅವರ ಪ್ರಶ್ನೆಗುತ್ತರವಾಗಿ ಸಂಸತ್ತಿನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಮಾಹಿತಿ ನೀಡಿದ್ದಾರೆ. ರಷ್ಯಾ – ಉಕ್ರೇನ್ ಸಂಘರ್ಷದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಏರಿಕೆ ಆಗಿರುವುದು, ಅದರಿಂದಾಗಿ ಜಾಗತಿಕ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದರಿಂದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುವಂತಾಗಿತ್ತು. ಇದಲ್ಲದೆ, ಭಾರತೀಯ ಈಕ್ವಿಟಿ ಮಾರುಕಟ್ಟೆಯಲ್ಲಿ ವಿದೇಶಿ ಹೂಡಿಕೆದಾರರು ದಿಢೀರ್ ಆಗಿ 14 ಬಿಲಿಯನ್ ಡಾಲರ್ ನಷ್ಟು ಹಿಂಪಡೆದಿರುವುದು ಕೂಡ ರೂಪಾಯಿ ಮೌಲ್ಯ ಕುಸಿಯಲು ಕಾರಣವಾಯ್ತು ಎಂದು ನಿರ್ಮಲಾ ಸಂಸತ್ತಿನಲ್ಲಿ ಸಮಜಾಯಿಷಿ ನೀಡಿದ್ದಾರೆ.

ಜಾಗತಿಕವಾಗಿ ನೋಡಿದರೆ, ಡಾಲರ್ ಎದುರು ಭಾರತದ ಕರೆನ್ಸಿ ಮಾತ್ರ ಕುಸಿದಿದ್ದಲ್ಲ. ಜಾಗತಿಕ ಬಿಕ್ಕಟ್ಟಿನ ಪರಿಣಾಮ ಬ್ರಿಟನ್ ಪೌಂಡ್, ಜಪಾನ್ ದೇಶದ ಯೆನ್ ಮತ್ತು ಯೂರೋ ಕೂಡ ಡಾಲರ್ ಎದುರು ಕುಸಿತ ಕಂಡಿದೆ. ಅವೆಲ್ಲ ರೂಪಾಯಿಗಿಂತಲೂ ಹೆಚ್ಚು ಕುಸಿತ ಆಗಿದೆ. ಅವುಗಳಿಗೆ ಹೋಲಿಸಿದರೆ, 2022ರಲ್ಲಿ ಭಾರತದ ರೂಪಾಯಿ ಬಲಗೊಂಡಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
The Union government on Monday admitted in Parliament that the value of the Indian rupee against the dollar has fallen by Rs 16.08 (25.39 per cent) in the last eight years.The finance ministry informed Parliament that in 2014, as per the Reserve Bank of India (RBI), the exchange rate was Rs 63.33 to a dollar. By July 11, 2022, it had fallen to Rs 79.41.On December 31, 2014, the exchange rate of the Indian rupee against the dollar was Rs 63.33. On December 31, 2018, the rate shot up to 69.79 and breached the 70 mark on December 31, 2019. After Covid pandemic, the exchange rate has remained in the 70s.
19-12-25 10:03 pm
HK News Desk
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
19-12-25 02:40 pm
HK News Desk
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
19-12-25 09:46 pm
Mangalore Correspondent
ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಖಾಯಮಾತಿಗೆ ಆಗ್ರಹ ;...
19-12-25 08:22 pm
APK File, RTO challan Scam, Mangalore: ಟ್ರಾಫಿ...
19-12-25 04:43 pm
11 ವರ್ಷ ಹಿಂದಿನ ಅಪಘಾತ ಕೇಸಿನಲ್ಲಿ ಆರೋಪಿಗೆ ಸಜೆ, 2...
18-12-25 10:51 pm
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm