ಬ್ರೇಕಿಂಗ್ ನ್ಯೂಸ್
21-07-22 05:32 pm HK News Desk ದೇಶ - ವಿದೇಶ
ನವದೆಹಲಿ, ಜುಲೈ 21: ಭಾರತದ ಅತ್ಯುನ್ನತ ಸ್ಥಾನಕ್ಕೆ ಮೊಟ್ಟಮೊದಲ ಬಾರಿಗೆ ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬರು ಆಯ್ಕೆಯಾಗಿದ್ದಾರೆ. ಒಡಿಸ್ಸಾ ಮೂಲದ ಬುಡಕಟ್ಟು ಜನಾಂಗದ ಮಹಿಳೆ ದ್ರೌಪದಿ ಮುರ್ಮು, ದೇಶದ ಶಾಸಕರು ಮತ್ತು ಸಂಸದರ ಮೂರನೇ ಎರಡರಷ್ಟು ಮತಗಳನ್ನು ಪಡೆದು ರಾಷ್ಟ್ರಪತಿ ಸ್ಥಾನಕ್ಕೇರಿದ್ದಾರೆ.
ರಾಷ್ಟ್ರಪತಿ ಸ್ಥಾನಕ್ಕೆ ಜುಲೈ 18ರಂದು ನಡೆದ ಚುನಾವಣೆಯ ಮತ ಎಣಿಕೆ ನಡೆದಿದ್ದು, ಕೆಲವೇ ಹೊತ್ತಿನಲ್ಲಿ ಅಧಿಕೃತ ಘೋಷಣೆಯಾಗಲಿದೆ. ಅದಕ್ಕೂ ಮುನ್ನ ರಾಜ್ಯಸಭೆ ಕಾರ್ಯದರ್ಶಿ ಪಿಸಿ ಮೋದಿ, ಮತ ಗಳಿಕೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಪರವಾಗಿ 3.78 ಲಕ್ಷ ಮತ ಮೌಲ್ಯದ 540 ಮತಗಳು ಪ್ರಾಪ್ತವಾಗಿದ್ದರೆ, ವಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ ಪರವಾಗಿ 1,45,600 ಮತ ಮೌಲ್ಯದ 208 ಮತಗಳಷ್ಟೇ ದೊರೆತಿದೆ. ಈ ನಡುವೆ, 15 ಸಂಸದರ ಮತಗಳು ಅಸಿಂಧು ಆಗಿವೆ ಎಂದು ಪಿಸಿ ಮೋದಿ ಹೇಳಿದ್ದಾರೆ.
ಲೋಕಸಭೆ ಮತ್ತು ರಾಜ್ಯಸಭೆಯ ಒಟ್ಟು 771 ಸಂಸದರು (ಐದು ಸ್ಥಾನ ಖಾಲಿ ಇದೆ) ಮತ್ತು ಎಲ್ಲ ರಾಜ್ಯಗಳ 4025 ವಿಧಾನಸಭೆ ಶಾಸಕರ (ಆರು ಸ್ಥಾನ ಖಾಲಿ, ಇಬ್ಬರು ಅನರ್ಹ) ಪೈಕಿ 99.18 ರಷ್ಟು ಮತದಾನ ಆಗಿತ್ತು. 60 ಶೇಕಡಾ ಮತದಾರರು ಎನ್ ಡಿಎ ಅಭ್ಯರ್ಥಿ ಪರವಾಗಿ ಮತ ಚಲಾಯಿಸಿದ್ದಾರೆ ಎನ್ನಲಾಗಿತ್ತು. ಅದರಂತೆ, ಇಂದು ಫಲಿತಾಂಶ ಪ್ರಕಟವಾಗಿದ್ದು ನಿರೀಕ್ಷೆಯಂತೆ ಮೂರನೇ ಎರಡರಷ್ಟು ಮತ ಪಡೆದು ದ್ರೌಪದಿ ಮುರ್ಮು ಗೆಲುವಿನ ನಗೆ ಬೀರಿದ್ದಾರೆ.
ಛತ್ತೀಸ್ ಗಢ, ಗೋವಾ, ಗುಜರಾತ್, ಕರ್ನಾಟಕ, ಹಿಮಾಚಲ ಪ್ರದೇಶ, ಕೇರಳ, ಮಧ್ಯಪ್ರದೇಶ, ಮಣಿಪುರ, ಮಿಜೋರಾಂ, ಸಿಕ್ಕಿಂ, ತಮಿಳುನಾಡು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಎಲ್ಲ ಶಾಸಕ, ಸಂಸದರು ಮತ ಚಲಾಯಿಸಿ ನೂರು ಶೇಕಡಾ ಮತ ಚಲಾವಣೆಯಾಗಿತ್ತು. ಎಲ್ಲ ರಾಜ್ಯಗಳಿಂದ ಬಂದಿದ್ದ ಮತ ಪೆಟ್ಟಿಗೆಗಳು ಸಂಸತ್ತಿನ ಕೊಠಡಿ ಸಂಖ್ಯೆ 63ರಲ್ಲಿ ಭದ್ರ ಮಾಡಲಾಗಿತ್ತು. ಇಂದು ಬೆಳಗ್ಗೆ 11ರಿಂದ ಚುನಾವಣಾಧಿಕಾರಿಗಳು ಮತ ಎಣಿಕೆ ಕೈಗೊಂಡಿದ್ದು ಮಧ್ಯಾಹ್ನ ಮೂರು ಗಂಟೆ ವೇಳೆಗೆ ಪೂರ್ಣವಾಗಿತ್ತು.
ಬುಡಕಟ್ಟು ಮಹಿಳೆಗೆ ಭಾರೀ ಬೆಂಬಲ
ಬುಡಕಟ್ಟು ಜನಾಂಗದ ಮಹಿಳೆಯನ್ನು ಎನ್ ಡಿಎ ಅಭ್ಯರ್ಥಿ ಮಾಡಿದ್ದರಿಂದ ಮಧ್ಯ ಭಾರತದ ಬಹುತೇಕ ರಾಜ್ಯಗಳ ಪಕ್ಷಗಳು ಬೆಂಬಲ ಘೋಷಿಸಿದ್ದವು. ಎನ್ ಡಿಎ ಮೈತ್ರಿಕೂಟ ಹೊರತಾದ ಪಕ್ಷಗಳು ಕೂಡ ಬೆಂಬಲಿಸಿದ್ದರಿಂದ ದ್ರೌಪದಿ ಮುರ್ಮು ಭಾರೀ ಅಂತರದಿಂದ ಗೆಲ್ಲುವುದು ಖಚಿತವಾಗಿತ್ತು. ಮತ ಎಣಿಕೆ ಮುಗಿಯುತ್ತಿದ್ದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಚಿವ ಧರ್ಮೇಂದ್ರ ಪ್ರಧಾನ್, ಯಾವುದೇ ಸಂಶಯ ಇಲ್ಲ. ದೇಶ ಮಹತ್ತರ ಇತಿಹಾಸ ಸೃಷ್ಟಿಸುವಲ್ಲಿ ಹೆಜ್ಜೆ ಇಟ್ಟಿದೆ. ಒಡಿಶಾದ ಸಾಮಾನ್ಯ ಬುಡಕಟ್ಟು ಜನಾಂಗದ ಮಗಳೊಬ್ಬಳು ಈ ದೇಶದ ಅತ್ಯುನ್ನತ ಹುದ್ದೆಗೇರುತ್ತಿದ್ದಾರೆ ಎಂದು ಹೇಳಿದ್ದಾರೆ. ಪ್ರತಿಭಾ ಪಾಟೀಲ್ ಬಳಿಕ ಎರಡನೇ ಮಹಿಳೆ ರಾಷ್ಟ್ರಪತಿ ಸ್ಥಾನಕ್ಕೇರುತ್ತಿದ್ದಾರೆ.
ಇತ್ತ ಮತ ಎಣಿಕೆ ಮುಗಿಯುತ್ತಿದ್ದಂತೆ ಒಡಿಶಾದಲ್ಲಿ ಸಂಭ್ರಮ ಕಳೆಗಟ್ಟಿದೆ. ಬುಡಕಟ್ಟು ಜನರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಜನರು ಕರತಾಡನ, ಸಂಭ್ರಮಾಚರಣೆ ಮಾಡಿದ್ದಾರೆ. ದ್ರೌಪದಿ ಅವರ ಹುಟ್ಟೂರು ರಾಯಿರಂಗಾಪುರದಲ್ಲಿ ಬುಡಕಟ್ಟು ಜನರು ದೊಡ್ಡ ಡೋಲನ್ನು ಬಡಿದು ಕುಣಿದು ಕುಪ್ಪಳಿಸಿ ಸಂಭ್ರಮ ಪಟ್ಟಿದ್ದಾರೆ.
Celebrations begin at #Odisha's #Rairangpur village, the native place of NDA's presidential candidate #DroupadiMurmu.
— The Times Of India (@timesofindia) July 21, 2022
The counting of votes for the Presidential election is underway. #PresidentialElections2022
(ANI) pic.twitter.com/p5E6C5KuiW
Presidential election results India on Thursday will know who will succeed incumbent Ram Nath Kovind to become the country's 15th President, as counting of votes for the presidential election is under way at the Parliament House. Ruling NDA's Droupadi Murmu and Opposition's Yashwant Sinha are pitted against each other in the contest, with votes clearly stacked in favour of Murmu, who, if elected, will be the first tribal woman to occupy the top constitutional post in the country. Kovind's tenure is ending on July 24 and the new President will take oath on July 25.
28-11-24 10:41 pm
Bangalore Correspondent
Karkala Drowning, Udupi News; ಕಾರ್ಕಳದ ದುರ್ಗಾ...
28-11-24 09:41 pm
ಲಾಕಪ್ ಡೆತ್ ; ನಾಲ್ವರು ಪೊಲೀಸರಿಗೆ ಏಳು ವರ್ಷ ಜೈಲು...
28-11-24 05:04 pm
MLA Gaviyappa, DK Shivakumar: ಯಾವುದೇ ಕಾರಣಕ್ಕೂ...
26-11-24 10:46 pm
Shivamogga, Monkey fever, Dinesh Gundu Rao: ಮ...
26-11-24 10:23 pm
27-11-24 02:00 pm
HK News Desk
ರಸ್ತೆ ಬದಿ ಮಲಗಿದ್ದ ಅಲೆಮಾರಿ ಗುಂಪಿನ ಮೇಲಿಂದ ಹರಿದ...
27-11-24 12:36 pm
ಕ್ಯುಆರ್ ಕೋಡ್ ಸಹಿತ ಹೊಸ ನಮೂನೆಯ ಪ್ಯಾನ್ 2.0 ಜಾರಿ...
26-11-24 09:43 pm
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
28-11-24 09:58 pm
Mangalore Correspondent
Mangalore, DFYI protest, Anupam Agarwal: ಪೊಲೀ...
28-11-24 06:05 pm
VHP, Mangalore, Bangladesh: ಬಾಂಗ್ಲಾದೇಶದಲ್ಲಿ ಹ...
28-11-24 03:24 pm
Belthangady suicide, Crime, Mangalore; ನಂಬಿಸಿ...
28-11-24 02:13 pm
Mangalore, Anupam Agarwal, Ramanatha Rai: ರಸ್...
28-11-24 01:56 pm
27-11-24 03:36 pm
HK News Desk
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm
Mangalore crime, ACP Dhanya Nayak, Drugs: ಎಸಿ...
26-11-24 03:10 pm
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm