ಬ್ರೇಕಿಂಗ್ ನ್ಯೂಸ್
21-07-22 10:12 pm HK News Desk ದೇಶ - ವಿದೇಶ
ಟೆಲ್ ಅವೀವ್, ಜುಲೈ 21: ಮುಸ್ಲಿಮರ ಪವಿತ್ರ ಕೇಂದ್ರವಾಗಿರುವ ಮೆಕ್ಕಾದಲ್ಲಿ ಮುಸ್ಲೀಮೇತರ ವ್ಯಕ್ತಿಗಳಿಗೆ ಪ್ರವೇಶವಿಲ್ಲ. ಮುಸ್ಲಿಂ ಹೊರತಾದ ವ್ಯಕ್ತಿಗಳನ್ನು ತಡೆಯಲು ಅಲ್ಲಿ ಅತ್ಯಾಧುನಿಕ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸುದೀರ್ಘ ಕಾಲದಿಂದ ಇಂಥದ್ದೊಂದು ಸಂಪ್ರದಾಯ ಬೆಳೆಸಿಕೊಂಡು ಬರಲಾಗಿದೆ. ಹಾಗಿದ್ದರೂ ಇಸ್ರೇಲ್ ಪತ್ರಕರ್ತ ಗಿಲ್ ತಮರಿ ಮೆಕ್ಕಾ ಪ್ರವೇಶಿಸಿದ್ದು ಜಗತ್ತಿನ ಮುಸ್ಲಿಮರ ಆಕ್ರೋಶಕ್ಕೆ ಕಾರಣವಾಗಿದೆ.
ತಾನು ಮೆಕ್ಕಾ ಭೇಟಿ ಕೊಟ್ಟಿದ್ದರ ವಿಡಿಯೋವನ್ನು ಪತ್ರಕರ್ತ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ ಬೆನ್ನಲ್ಲೇ ವಿಶ್ವದಾದ್ಯಂತ ಮುಸ್ಲಿಮರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಸ್ರೇಲ್‌ನ ಚಾನೆಲ್ 13 ಸೋಮವಾರ ತನ್ನ ವರ್ಲ್ಡ್ ನ್ಯೂಸ್ ಎಡಿಟರ್ ಗಿಲ್ ತಮರಿಯನ್ನು ಒಳಗೊಂಡ ವರದಿಯನ್ನು ಪ್ರಸಾರ ಮಾಡಿತ್ತು. ಪವಿತ್ರ ನಗರದ ಸುತ್ತಲೂ ತಮರಿ ವಾಹನ ಚಾಲನೆ ಮಾಡಿದ್ದು, ಮೆಕ್ಕಾ ನಗರದ ಮನಮೋಹಕ ದೃಶ್ಯಗಳು ಹಾಗೂ ಆಕರ್ಷಕ ಪ್ರದೇಶಗಳನ್ನು ಹೊರ ಜಗತ್ತಿಗೆ ತೋರಿಸಿದ್ದಾರೆ. ತಮರಿ ಅವರು ಕಮಾನಿನ ರೀತಿಯಲ್ಲಿರುವ ಮೆಕ್ಕಾ ಗೇಟ್‌ನ ಒಳಹೋಗುತ್ತಿರುವ ವಿಡಿಯೋವನ್ನು ಮಾಡಿದ್ದಾರೆ. ಇದು ಮೆಕ್ಕಾ ನಗರದ ಪ್ರವೇಶವನ್ನು ಖಚಿತಪಡಿಸುವ ಸ್ಥಳವಾಗಿದೆ. ಇಸ್ಲಾಂನ ಪವಿತ್ರ ಪ್ರದೇಶವಾಗಿರುವ ಕಾರಣ ಈ ಕಮಾನಿನ ಒಳಗೆ ಮುಸ್ಲೀಮೇತರ ವ್ಯಕ್ತಿಗಳಿಗೆ ಪ್ರವೇಶ ಇರುವುದಿಲ್ಲ. ಅಲ್ಲದೆ, ವಿಡಿಯೋ ಮಾಡುವುದಕ್ಕೂ ನಿಷೇಧ ವಿಧಿಸಲಾಗಿದೆ.
ಪವಿತ್ರ ಬೆಟ್ಟದಲ್ಲಿ ಪತ್ರಕರ್ತನ ಸೆಲ್ಫಿ
ಅದಲ್ಲದೆ ಮೌಂಟ್ ಅರಾಫತ್ ಬೆಟ್ಟದ ಮೇಲೆ ಸೆಲ್ಫಿ ತೆಗೆದುಕೊಂಡಿದ್ದು ಅದನ್ನು ತನ್ನ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮೆಕ್ಕಾ ಹೊರವಲಯದ ಇದೇ ಪವಿತ್ರ ಬೆಟ್ಟದ ಮೇಲೆ ಪ್ರವಾದಿ ಮೊಹಮದ್ ಪೈಗಂಬರ್ ತಮ್ಮ ಅಂತಿಮ ಧರ್ಮೋಪದೇಶವನ್ನು ನೀಡಿದ್ದರು ಎಂದು ಮುಸ್ಲಿಮರು ನಂಬುತ್ತಾರೆ. ವಾರ್ಷಿಕ ಹಜ್ ಯಾತ್ರೆಯ ಸಮಯದಲ್ಲಿ ಮುಸ್ಲಿಮರು ಸೇರುವ ತಾಣವೂ ಇದೇ ಆಗಿದೆ. ಮೆಕ್ಕಾ ಮಾತ್ರವಲ್ಲ ಮುಸ್ಲಿಮರ ಇನ್ನೊಂದು ಪವಿತ್ರ ನಗರ ಮದೀನಾದ ಕೆಲವು ಭಾಗಗಳಿಗೆ ಮುಸ್ಲಿಮೇತರರು ಪ್ರವೇಶಿಸಲು ನಿಷೇಧ ವಿಧಿಸಲಾಗಿದೆ. ಇಲ್ಲಿಗೆ ಪ್ರವೇಶಿಸುವ ಮುಸ್ಲೀಮೇತರರಿಗೆ ದಂಡ ಹಾಗೂ ಸೌದಿ ಅರೇಬಿಯಾದಿಂದ ಗಡಿಪಾರು ಮಾಡುವ ಶಿಕ್ಷೆಗಳನ್ನು ನೀಡಲಾಗುತ್ತದೆ. ಕಳೆದ ವಾರ ಯುಎಸ್ ಅಧ್ಯಕ್ಷ ಜೋ ಬಿಡೆನ್ ಭಾಗವಹಿಸಿದ್ದ ಪ್ರಾದೇಶಿಕ ಸಮ್ಮೇಳನವನ್ನು ವರದಿ ಮಾಡಲು ಸೌದಿ ಅರೇಬಿಯಾಕ್ಕೆ ಆಗಮಿಸಿದ್ದ ಮೂವರು ಇಸ್ರೇಲಿ ವರದಿಗಾರರಲ್ಲಿ ತಮರಿ ಕೂಡ ಒಬ್ಬರಾಗಿದ್ದರು.
ಇಸ್ರೇಲ್ ಪತ್ರಕರ್ತನ ಭೇಟಿಯನ್ನು ಹಲವಾರು ಮುಸ್ಲಿಂ ಸಾಮಾಜಿಕ ಮಾಧ್ಯಮ ಬಳಕೆದಾರರು "ಜೀವ್ ಇನ್ ದಿ ಹರಾಮ್" ಎಂಬ ಹ್ಯಾಶ್‌ಟ್ಯಾಗ್ ಅನ್ನು ಬಳಸಿ ಖಂಡಿಸಿದ್ದಾರೆ.
An Israeli journalist has sparked controversy after publishing a video of himself sneaking into the Saudi city of Mecca, the holiest city of Islam, flouting a ban on non-Muslims.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am