ಬ್ರೇಕಿಂಗ್ ನ್ಯೂಸ್
22-07-22 09:47 pm HK News Desk ದೇಶ - ವಿದೇಶ
ವಯನಾಡ್, ಜುಲೈ 22: ಕೇರಳದಲ್ಲಿ ಒಂದೆಡೆ ಮಂಕಿ ಪಾಕ್ಸ್ ಭೀತಿ ಮೂಡಿಸಿದ್ದರೆ, ಮತ್ತೊಂದೆಡೆ ವಯನಾಡ್ ಜಿಲ್ಲೆಯಲ್ಲಿ ಆಫ್ರಿಕನ್ ಹಂದಿ ಜ್ವರವೂ ಕಾಣಿಸಿಕೊಂಡಿದೆ. ರೋಗದ ಬಗ್ಗೆ ಸ್ಯಾಂಪಲನ್ನು ಭೋಪಾಲದ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿಂದ ಆಫ್ರಿಕನ್ ಹಂದಿ ಜ್ವರ ಖಚಿತವಾಗಿರುವ ಬಗ್ಗೆ ಮಾಹಿತಿ ನೀಡಲಾಗಿದೆ.
ಕಳೆದ ವಾರ ಹಂದಿ ಫಾರ್ಮ್ ನಲ್ಲಿ ಐದು ಹಂದಿಗಳು ದಿಢೀರ್ ಆಗಿ ಸಾವು ಕಂಡಿದ್ದರಿಂದ ಪಶು ಚಿಕಿತ್ಸಾಲಯದ ವೈದ್ಯರು ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿದ್ದರು. ಇದೀಗ ಹಂದಿ ಜ್ವರ ಖಚಿತವಾಗುತ್ತಲೇ ಎರಡು ಕಿಮೀ ಸುತ್ತಲಿನ ಹಂದಿ ಫಾರ್ಮ್ ಗಳಲ್ಲಿರುವ ಎಲ್ಲ ಹಂದಿಗಳನ್ನು ಕೊಲ್ಲಲು ಆರೋಗ್ಯ ಇಲಾಖೆ ಸೂಚಿಸಿದೆ. ಆಸುಪಾಸಿನಲ್ಲಿ ಮೂರು ಫಾರ್ಮ್ ಗಳಿದ್ದು ಅದರಲ್ಲಿ 300ರಷ್ಟು ಹಂದಿಗಳಿದ್ದು ಅವನ್ನು ಶುಕ್ರವಾರವೇ ಕೊಂದು ಮುಗಿಸಲು ಆದೇಶ ಮಾಡಲಾಗಿದೆ.
ಹಂದಿ ಜ್ವರ ಮಾನವನಿಗೆ ಹರಡುವುದು ಅಪರೂಪ. ಆದರೆ, ಕೆಲವು ಸಂದರ್ಭಗಳಲ್ಲಿ ಜ್ವರ ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ ವಯನಾಡ್ ಮತ್ತು ಕೋಝಿಕ್ಕೋಡ್ ಜಿಲ್ಲೆಯಲ್ಲಿ ಎಲರ್ಟ್ ಮಾಡಲಾಗಿದೆ. ರೋಗದ ಶಂಕೆಯಲ್ಲಿ ಎರಡು ವಾರಗಳ ಹಿಂದೆಯೇ ಹಂದಿ ಮಾಂಸ ಹೊರ ರಾಜ್ಯಗಳಿಗೆ ಸಾಗಾಟ ಮಾಡುವುದಕ್ಕೆ ರಾಜ್ಯ ಸರಕಾರ ನಿಷೇಧ ವಿಧಿಸಿತ್ತು. ಆರೋಗ್ಯ ಇಲಾಖೆ ಅಧಿಕಾರಿಗಳು ಹಂದಿ ಮತ್ತು ಬೀಫ್ ಮಾಂಸವನ್ನು ಆಹಾರವಾಗಿ ಬಳಸುವ ಮೊದಲು ಚೆನ್ನಾಗಿ ಬೇಯಿಸಬೇಕು ಎಂದು ಜನರಿಗೆ ಸೂಚನೆ ನೀಡಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಹಂದಿ ಜ್ವರವು ಪ್ರಾಣಿಗಳಲ್ಲಿ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಮನುಷ್ಯನಿಗೆ ಹರಡಿ ಸಮಸ್ಯೆ ಆಗುವುದಕ್ಕಿಂತಲೂ ಹಂದಿಯಿಂದ ಇತರ ಪ್ರಾಣಿಗಳಿಗೆ ಹರಡಿ ದೊಡ್ಡ ಮಟ್ಟದಲ್ಲಿ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. ಹಂದಿ ಫಾರ್ಮ್ ಗಳಿಗೆ ಇದರಿಂದ ದೊಡ್ಡ ಹೊಡೆತ ಬೀಳುತ್ತದೆ ಎಂದು ಹೇಳಿದೆ.
African swine fever found in Kerala’s Wayanad, mass culling of pigs soonTwo districts of north Kerala have been put on high alert after African swine fever was detected in pigs in Wayanad on Friday, health officials said.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am