ಮಮತಾ ಬ್ಯಾನರ್ಜಿ ಆಪ್ತ, ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಇಡಿ ಬಲೆಗೆ ; ಶಿಕ್ಷಕರ ನೇಮಕಾತಿ ಹಗರಣದಲ್ಲಿ ಬಂಗಾಳಿ ನಟಿಯನ್ನೂ ಬಂಧಿಸಿದ ಅಧಿಕಾರಿಗಳು 

23-07-22 01:10 pm       HK News Desk   ದೇಶ - ವಿದೇಶ

ಶಿಕ್ಷಕರ ನೇಮಕಾತಿಯಲ್ಲಿ ಹಗರಣ ನಡೆಸಿದ ಆರೋಪಕ್ಕೀಡಾಗಿರುವ ಪಶ್ಚಿಮ ಬಂಗಾಳ ಸರಕಾರದ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.

ಕೊಲ್ಕತ್ತಾ, ಜುಲೈ 23: ಶಿಕ್ಷಕರ ನೇಮಕಾತಿಯಲ್ಲಿ ಹಗರಣ ನಡೆಸಿದ ಆರೋಪಕ್ಕೀಡಾಗಿರುವ ಪಶ್ಚಿಮ ಬಂಗಾಳ ಸರಕಾರದ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. 

ಸುದೀರ್ಘ 26 ಗಂಟೆಗಳ ನಿರಂತರ ವಿಚಾರಣೆ ಬಳಿಕ ಶನಿವಾರ ಬೆಳಗ್ಗೆ ಹತ್ತು ಗಂಟೆಗೆ ಪಾರ್ಥ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಶುಕ್ರವಾರ ಬೆಳಗ್ಗೆ ಅಧಿಕಾರಿಗಳ ತಂಡ ಪಾರ್ಥ ಅವರ ಕೊಲ್ಕತ್ತಾದ ಮನೆಗೆ ಹೊಕ್ಕಿತ್ತು. ಅಲ್ಲಿಂದ ಪಾರ್ಥ ಅವರನ್ನು ಮನೆಯಲ್ಲೇ ನಿರಂತರ ಡ್ರಿಲ್ ಮಾಡಿದ್ದರು. ಭಾರೀ ಭದ್ರತೆಯಲ್ಲಿ ವಿಚಾರಣೆ ನಡೆಸಿದ್ದು ಅಲ್ಲಿಯೇ ರಾತ್ರಿ ಕಳೆದಿದ್ದರು.  ಪ್ರಕರಣದಲ್ಲಿ ಪಾರ್ಥ ಚಟರ್ಜಿ ಸಾಕಷ್ಟು ಹಣದ ವ್ಯವಹಾರ ನಡೆಸಿದ್ದಾರೆಂಬ ಆರೋಪಗಳಿದ್ದವು. ಹಗರಣ ಹೊರಬಂದ ಬಳಿಕ ಪಾರ್ಥ ಚಟರ್ಜಿ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. 

DHFL-Yes Bank case: ED takes Pune businessman Avinash Bhosle in custody |  Business Standard News

ತನಿಖೆಯ ಸಂದರ್ಭದಲ್ಲಿ ಪಾರ್ಥ ಚಟರ್ಜಿ ಯಾವುದೇ ಸಹಕಾರ ನೀಡಿಲ್ಲ. ಹಾಗಾಗಿ ಅವರನ್ನು ಬಂಧಿಸಲಾಗಿದೆ. ಇಂದು ನೇರವಾಗಿ ಕೋರ್ಟಿಗೆ ಹಾಜರುಪಡಿಸಿ ಕಸ್ಟಡಿ ಪಡೆಯುತ್ತೇವೆ ಎಂದು ಇಡಿ ಅಧಿಕಾರಿಯೊಬ್ಬರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಇದೇ ವೇಳೆ, ಪಾರ್ಥ ಚಟರ್ಜಿ ಅವರ ಆಪ್ತೆಯಾಗಿ ಗುರುತಿಸಿಕೊಂಡಿದ್ದ ಬಂಗಾಳಿ ನಟಿ ಅರ್ಪಿತಾ ಮುಖರ್ಜಿ ಅವರನ್ನೂ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ದಾಳಿ ಸಂದರ್ಭದಲ್ಲಿ ಅರ್ಪಿತಾ ಮನೆಯಲ್ಲಿ 21 ಕೋಟಿ ರು. ನಗದು ಪತ್ತೆಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

UP Polls: Mamata Banerjee Likely to Visit Varanasi, Support Akhilesh Yadav

ಎರಡು ಸಾವಿರ ಮತ್ತು 500 ಮುಖ ಬೆಲೆಯ ನೋಟುಗಳ ಕಂತೆ ಅರ್ಪಿತಾ ಮನೆಯಲ್ಲಿ ಪತ್ತೆಯಾಗಿದ್ದು ಈ ಬಗ್ಗೆ ಪಾರ್ಥ ಚಟರ್ಜಿ ಅವರನ್ನು ಪ್ರಶ್ನೆ ಮಾಡಲಾಗಿತ್ತು.‌ ಅಲ್ಲದೆ, 20 ಮೊಬೈಲ್ ಫೋನ್ ಗಳು ಪತ್ತೆಯಾಗಿದ್ದವು. ಪಾರ್ಥ ಅವರ ಮನೆಗೆ ಸಿಆರ್ ಪಿಎಫ್ ಭದ್ರತಾ ಪಡೆ ಸುತ್ತುವರಿದಿದ್ದು ಎರಡು ದಿನಗಳಿಂದ ವಿಚಾರಣೆ ನಡೆಸುತ್ತಿದ್ದರು. ಪಾರ್ಥ ಚಟರ್ಜಿ, ಸಿಎಂ ಮಮತಾ ಬ್ಯಾನರ್ಜಿಯವರ ಆಪ್ತನಾಗಿದ್ದು ಈ ಬಂಧನ ಬ್ಯಾನರ್ಜಿ ಪಾಲಿಗೆ ಹಿನ್ನಡೆಯಾಗಿದೆ.

On Saturday, former Education Minister of Bengal, Partha Chatterjee, was arrested by Enforcement Directorate (ED) after more than 26-hour of interrogation. Not just Partha, model and actress, Arpita Mukherjee, who is known to be close to him, has also been arrested. ED officers came to Partha's Naktala house at 7.30 am yesterday (Friday, July 22) morning and today at 10 am, the ED officers led Partha out.