ಮಂಕಿಪಾಕ್ಸ್ 4ನೇ ಪ್ರಕರಣ ದೆಹಲಿಯಲ್ಲಿ ಪತ್ತೆ ; ವಿದೇಶ ಪ್ರಯಾಣ ಹಿನ್ನೆಲೆ ಇಲ್ಲದ ವ್ಯಕ್ತಿಗೂ ಸೋಂಕು

24-07-22 01:33 pm       HK News Desk   ದೇಶ - ವಿದೇಶ

ದೇಶದಲ್ಲಿ ಮಂಕಿ ಪಾಕ್ಸ್ ನಾಲ್ಕನೇ ಪ್ರಕರಣ ರಾಜಧಾನಿ ದೆಹಲಿಯಲ್ಲಿ ಪತ್ತೆಯಾಗಿದೆ. ಈ ಹಿಂದೆ ಮೂರು ಪ್ರಕರಣಗಳು ವಿದೇಶದಿಂದ ಕೇರಳಕ್ಕೆ ಆಗಮಿಸಿದ್ದ ಮೂವರಲ್ಲಿ ಪತ್ತೆಯಾಗಿದ್ದರೆ, ಈಗ ಯಾವುದೇ ವಿದೇಶ ಪ್ರಯಾಣದ ಹಿನ್ನೆಲೆ ಇಲ್ಲದ 24 ವರ್ಷದ ವ್ಯಕ್ತಿಗೆ ವೈರಾಣು ಸೋಂಕು ಪತ್ತೆಯಾಗಿದೆ.

ನವದೆಹಲಿ, ಜುಲೈ 24: ದೇಶದಲ್ಲಿ ಮಂಕಿ ಪಾಕ್ಸ್ ನಾಲ್ಕನೇ ಪ್ರಕರಣ ರಾಜಧಾನಿ ದೆಹಲಿಯಲ್ಲಿ ಪತ್ತೆಯಾಗಿದೆ. ಈ ಹಿಂದೆ ಮೂರು ಪ್ರಕರಣಗಳು ವಿದೇಶದಿಂದ ಕೇರಳಕ್ಕೆ ಆಗಮಿಸಿದ್ದ ಮೂವರಲ್ಲಿ ಪತ್ತೆಯಾಗಿದ್ದರೆ, ಈಗ ಯಾವುದೇ ವಿದೇಶ ಪ್ರಯಾಣದ ಹಿನ್ನೆಲೆ ಇಲ್ಲದ 24 ವರ್ಷದ ವ್ಯಕ್ತಿಗೆ ವೈರಾಣು ಸೋಂಕು ಪತ್ತೆಯಾಗಿದೆ.

ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಯನ್ನು ಮಂಕಿ ಪಾಕ್ಸ್ ಜ್ವರದ ಲಕ್ಷಣಗಳಿದ್ದರಿಂದ ದೆಹಲಿಯ ಮೌಲಾನಾ ಆಜಾದ್ ಮೆಡಿಕಲ್ ಆಸ್ಪತ್ರೆಗೆ ಮೂರು ದಿನಗಳ ಹಿಂದೆ ಸೇರಿಸಲಾಗಿತ್ತು. ಆತನ ರಕ್ತದ ಸ್ಯಾಂಪಲನ್ನು ಪುಣೆಯ ವೈರಾಲಜಿ ಕೇಂದ್ರಕ್ಕೆ ಕಳುಹಿಸಿ, ರೋಗ ಪತ್ತೆ ಮಾಡಲಾಗಿದೆ. ಶನಿವಾರ ವರದಿ ಪಾಸಿಟಿವ್ ಬಂದಿದ್ದು, ಯಾವುದೇ ವಿದೇಶ ಪ್ರಯಾಣದ ಹಿನ್ನೆಲೆ ಇಲ್ಲದಿದ್ದರೂ ರೋಗ ಪತ್ತೆಯಾಗಿರುವುದು ಆರೋಗ್ಯ ಅಧಿಕಾರಿಗಳಲ್ಲಿ ಅಚ್ಚರಿ ಮೂಡಿಸಿದೆ. ದೆಹಲಿಯಲ್ಲಿ ನೆಲೆಸಿರುವ ಈ ವ್ಯಕ್ತಿ ಇತ್ತೀಚೆಗೆ ಹಿಮಾಚಲ ಪ್ರದೇಶದ ಮನಾಲಿಗೆ ಹೋಗಿ ಬಂದಿದ್ದ ಅನ್ನುವ ಮಾಹಿತಿ ಕಲೆಹಾಕಲಾಗಿದೆ.

ಇದೇ ವೇಳೆ, ಮಂಕಿ ಪಾಕ್ಸ್ ರೋಗವು ಜಗತ್ತಿನಲ್ಲಿ 75 ದೇಶಗಳಲ್ಲಿ ಹರಡಿರುವುದರಿಂದ ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ಜಗತ್ತಿನಲ್ಲಿ ಭಾರತ ಸೇರಿದಂತೆ 75 ದೇಶಗಳಲ್ಲಿ 16 ಸಾವಿರ ಮಂದಿಗೆ ರೋಗ ದೃಢಪಟ್ಟಿದ್ದು, ಐವರು ಮೃತಪಟ್ಟಿದ್ದಾರೆ. ಆಫ್ರಿಕಾ ದೇಶಗಳಲ್ಲಿ ಮಾತ್ರ ಇದ್ದ ಮಂಕಿ ಪಾಕ್ಸ್ ಈಗ ಯುರೋಪ್, ಉತ್ತರ ಅಮೆರಿಕಾ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಕಾಣಿಸಿಕೊಂಡಿದೆ. ಮೇ ತಿಂಗಳ ನಂತರ ಇದರ ಹರಡುವಿಕೆ ಹೆಚ್ಚಿದ್ದು, ಹೀಗಾಗಿ ಆರೋಗ್ಯ ತುರ್ತುಸ್ಥಿತಿ ಘೋಷಿಸಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

A case of monkeypox has been detected for the first time in Delhi in a man who has no history of international travel, said health officials Sunday, taking the infections of the viral disease in India to four.