ರಸ್ತೆಯಲ್ಲಿ ಸಿಕ್ತು 45 ಲಕ್ಷ ರೂ.  ಹಣದ ಬ್ಯಾಗ್ ; ಠಾಣೆಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದ ಟ್ರಾಫಿಕ್ ಪೊಲೀಸ್, ಹಿರಿಯ ಅಧಿಕಾರಿಗಳಿಂದ ಸೆಲ್ಯೂಟ್ ! 

25-07-22 10:05 pm       HK News Desk   ದೇಶ - ವಿದೇಶ

ಹಣ ಅಂದರೆ ಹೆಣ ಕೂಡ ಬಾಯಿ ತೆರೆಯುತ್ತೆ ಅಂತಾರೆ. ಅದರಲ್ಲೂ ರಸ್ತೆ ಮೇಲೆ 10 ರೂಪಾಯಿ ಸಿಕ್ಕಿದ್ರೂ ಎತ್ತಿ ಜೇಬಲ್ಲಿ ಹಾಕಿ ಕೊಳ್ಳುವವರೇ ಜಾಸ್ತಿ. ಅಂಥದ್ರಲ್ಲಿ ಟ್ರಾಫಿಕ್ ಪೊಲೀಸ್ ಒಬ್ಬರು ಬರೋಬ್ಬರಿ 45 ಲಕ್ಷ ರೂಪಾಯಿ ಹಣವನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಛತ್ತೀಸ್‌ಗಢ, ಜುಲೈ 25: ಹಣ ಅಂದರೆ ಹೆಣ ಕೂಡ ಬಾಯಿ ತೆರೆಯುತ್ತೆ ಅಂತಾರೆ. ಅದರಲ್ಲೂ ರಸ್ತೆ ಮೇಲೆ 10 ರೂಪಾಯಿ ಸಿಕ್ಕಿದ್ರೂ ಎತ್ತಿ ಜೇಬಲ್ಲಿ ಹಾಕಿ ಕೊಳ್ಳುವವರೇ ಜಾಸ್ತಿ. ಅಂಥದ್ರಲ್ಲಿ ಟ್ರಾಫಿಕ್ ಪೊಲೀಸ್ ಒಬ್ಬರು ಬರೋಬ್ಬರಿ 45 ಲಕ್ಷ ರೂಪಾಯಿ ಹಣವನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಛತ್ತೀಸ್‌ಗಢ್ ರಾಜ್ಯದ ರಾಜಧಾನಿ ರಾಯ್‌ಪುರದಲ್ಲಿ ಟ್ರಾಫಿಕ್ ಪೊಲೀಸ್‌ ಅಧಿಕಾರಿಯೊಬ್ಬರು 45 ಲಕ್ಷ ಹಣ ಇರುವ ಬ್ಯಾಗನ್ನು ಸ್ಥಳೀಯ ಪೊಲೀಸ್ ಠಾಣೆಗೆ ಹಸ್ತಾಂತರಿಸುವ ಮೂಲಕ ಪ್ರಾಮಾಣಿಕತೆಯನ್ನು ಪ್ರದರ್ಶಿಸಿದ್ದಾರೆ.

Exemplary honesty! Rs 45 lakh in a bag lying on roadside, Chha...

ರಸ್ತೆಯಲ್ಲಿ ಬಿದ್ದಿತ್ತು ಕಂತೆ ಕಂತೆ ಹಣ ; 

ನವ ರಾಯ್‌ಪುರದ ಕಯಾಬಂಧ ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಟ್ರಾಫಿಕ್ ಕಾನ್‌ಸ್ಟೆಬಲ್ ನಿಲಂಬರ್ ಸಿನ್ಹಾ ಅವರು ಮಾನಾ ಪೊಲೀಸ್ ಠಾಣಾ ವ್ಯಾಪ್ತಿಯ ರಸ್ತೆಯೊಂದರಲ್ಲಿ ಬ್ಯಾಗ್ ಅನ್ನು ಕಂಡುಕೊಂಡಿದ್ದಾರೆ. ಬ್ಯಾಗ್ ಪರಿಶೀಲಿಸಿದಾಗ ಅದರೊಳಗೆ 2000 ಮತ್ತು 500 ರೂ. ನೋಟುಗಳ ಕಂತೆ ಕಂಡುಬಂದಿದೆ. ಈ ಬ್ಯಾಗ್​ನಲ್ಲಿ ಒಟ್ಟು 45 ಲಕ್ಷ ರೂಪಾಯಿ ಪತ್ತೆಯಾಗಿದ್ದು, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಿವಿಲ್ ಲೈನ್ಸ್ ಠಾಣೆಗೆ ಬ್ಯಾಗ್ ಅನ್ನು ಹಸ್ತಾಂತರಿಸಿದ್ದಾರೆ.

ಪೊಲೀಸನ ಪ್ರಾಮಾಣಿಕತೆಗೆ ಬಹುಮಾನ ;

ಹಿರಿಯ ಅಧಿಕಾರಿಗಳು ಇವರ ಪ್ರಾಮಾಣಿಕತೆಯನ್ನು ಮೆಚ್ಚಿ, ಹಾಡಿ ಹೊಗಳಿದ್ದಾರೆ. ಹಣ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ನಿಲಂಬಸ್ ಸಿನ್ಹಾಗೆ ಬಹುಮಾನವನ್ನು ಘೋಷಿಸಿದ್ದಾರೆ. 

ನಗದು ಮೂಲವನ್ನು ಕಂಡುಹಿಡಿಯಲು ಸಿವಿಲ್ ಲೈನ್ಸ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Traffic constable Nilamber Sinha, attached to the Kayabandha post in Nava Raipur, found the bag in the morning on a stretch of road under the Mana police station limits, said Additional Superintendent of Police Sukhnandan Rathore."After checking the bag and finding ₹ 45 lakh in 2000 and 500 notes inside, he informed senior officials and deposited the bag at the Civil Lines police station," the Additional SP said. Senior officials announced a reward for Sinha, he added.