ಕಾಬೂಲ್​ನಲ್ಲಿ ನಡೆದ ವಾಯುದಾಳಿಗೆ ಅಲ್​ಖೈದಾ ಉಗ್ರ ಸಂಘಟನೆಯ ನಾಯಕ ಖತಂ 

02-08-22 09:52 pm       HK News Desk   ದೇಶ - ವಿದೇಶ

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ನಲ್ಲಿ ನಡೆದ ವಾಯುದಾಳಿಯಲ್ಲಿ ಅಲ್​ಖೈದಾ ಉಗ್ರ ಸಂಘಟನೆಯ ನಾಯಕ ಐಮನ್ ಅಲ್-ಜವಾಹಿರಿನನ್ನು ಹೊಡೆದುರುಳಿಸಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಸೋಮವಾರ ಘೋಷಿಸಿದ್ದಾರೆ.

ವಾಷಿಂಗ್ಟನ್,ಆಗಸ್ಟ್ 2  ​​: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ನಲ್ಲಿ ನಡೆದ ವಾಯುದಾಳಿಯಲ್ಲಿ ಅಲ್​ಖೈದಾ ಉಗ್ರ ಸಂಘಟನೆಯ ನಾಯಕ ಐಮನ್ ಅಲ್-ಜವಾಹಿರಿನನ್ನು ಹೊಡೆದುರುಳಿಸಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಸೋಮವಾರ ಘೋಷಿಸಿದ್ದಾರೆ.

2011ರಲ್ಲಿ ನಡೆದ ದಾಳಿಯಲ್ಲಿ ಮೃತಪಟ್ಟ ಅಲ್​ಖೈದಾ ಸಂಸ್ಥಾಪಕ ಒಸಮಾ ಬಿನ್​ಲಾಡೆನ್​ ಸಾವಿನ ಬಳಿಕ ಉಗ್ರ ಸಂಘಟನೆಯ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದ ನಾಯಕನನ್ನು ಅಮೇರಿಕಾ ಉಡೀಸ್ ಮಾಡಿದೆ. 

ಜವಾಹಿರಿ ಓರ್ವ ಈಜಿಪ್ತಿಯನ್​ ಸರ್ಜನ್​. 2001ರ ಸೆಪ್ಟೆಂಬರ್​ 11ರಂದು ಅಮೆರಿಕದ ಮೇಲೆ ದಾಳಿ ನಡೆದ ದಾಳಿಯಲ್ಲಿ 3000 ಮಂದಿ ಬಲಿಯಾಗಿದ್ದರು. ಈ ದಾಳಿಗೆ ಜವಾಹಿರಿ ನೆರವು ನೀಡಿದ್ದ. ಈ ಹಿನ್ನೆಲೆಯಲ್ಲಿ ಈತನ ತಲೆಗೆ 25 ಯುಎಸ್​ ಡಾಲರ್​ ಬಹುಮಾನ ಘೋಷಣೆ ಮಾಡಲಾಗಿತ್ತು.

Afghanistan: US kills al Qaeda leader Ayman al-Zawahiri in drone strike in  Kabul - CNNPolitics

ಭಾನುವಾರ ಬೆಳಗ್ಗೆ 6.18ರಲ್ಲಿ ಕಾಬೂಲ್​ನಲ್ಲಿ ನಡೆದ ಯುಎಸ್​ ಡ್ರೋನ್​ ದಾಳಿಗೆ ಜವಾಹಿರಿ ಸಾವನ್ನಪ್ಪಿದ್ದಾನೆ. 

ಈ ಬಗ್ಗೆ ಟೆಲಿವೈಸ್ಡ್ ಮೂಲಕ ಸಂದೇಶ ರವಾನಿಸಿದ ಯುಎಸ್​ ಅಧ್ಯಕ್ಷ ಜೋ ಬೈಡೆನ್​, ಈ ಉಗ್ರ ನಾಯಕ ಇನ್ನಿಲ್ಲ, ಎಷ್ಟು ಸಮಯ ತೆಗೆದುಕೊಂಡಿತು ಎಂಬುದು ಮುಖ್ಯವಲ್ಲ, ನೀನು ಎಲ್ಲಿ ಅಡಗಿದ್ದೆ ಎಂಬುದು ವಿಚಾರವಲ್ಲ, ನೀವು ನಮ್ಮ ಜನರಿಗೆ ಬೆದರಿಕೆಯಾಗಿದ್ದರೆ, ಯುನೈಟೆಡ್ ಸ್ಟೇಟ್ಸ್ ನಿಮ್ಮನ್ನು ಹುಡುಕುತ್ತದೆ ಮತ್ತು ನಿಮ್ಮನ್ನು ಹೊರಗೆಳೆದು ಹೊಡೆದು ಹಾಕುತ್ತದೆ ಎಂದು ಬೈಡೆನ್​ ಹೇಳಿದ್ದಾರೆ.

The United States killed al Qaeda leader Ayman al-Zawahiri in a drone strike, President Joe Biden said Monday in a speech from the White House."I authorized a precision strike that would remove him from the battlefield, once and for all," Biden said.Zawahiri, who just turned 71 years old, had remained a visible international symbol of the group, 11 years after the US killed Osama bin Laden. At one point, he acted as bin Laden's personal physician.