ಶಾಲಾ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ; ಆರೋಪಿ ಶಿಕ್ಷಕನಿಗೆ 79 ವರ್ಷಗಳ ಕಠಿಣ ಶಿಕ್ಷೆ ! 

04-08-22 08:35 pm       HK News Desk   ದೇಶ - ವಿದೇಶ

ಐವರು ಶಾಲಾ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಎಸಗಿದ್ದ ಶಿಕ್ಷಕನಿಗೆ 79 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಕೇರಳದ ಪೋಕ್ಸೋ ನ್ಯಾಯಾಲಯ ಆದೇಶಿಸಿದೆ.

ಕೊಯಮತ್ತೂರು, ಆಗಸ್ಟ್ 4 : ಐವರು ಶಾಲಾ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಎಸಗಿದ್ದ ಶಿಕ್ಷಕನಿಗೆ 79 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಕೇರಳದ ಪೋಕ್ಸೋ ನ್ಯಾಯಾಲಯ ಆದೇಶಿಸಿದೆ.

ಕಣ್ಣೂರು ಜಿಲ್ಲೆಯ ಪಯ್ಯನ್ನೂರಿನ ಆಲಪಡಂಬು ನಿವಾಸಿ ಪಿ.ಇ.ಗೋವಿಂದನ್ ನಂಬೂದರಿ ಎಂಬಾತನಿಗೆ ಕೋರ್ಟ್​ ಶಿಕ್ಷೆ ವಿಧಿಸಿದೆ. ಜತೆಗೆ ಈತನಿಗೆ 2.70 ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದೆ.

2013- 14ರ ಅವಧಿಯಲ್ಲಿ ಈತ ತರಗತಿಯಲ್ಲಿಯೇ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ವಿದ್ಯಾರ್ಥಿನಿಯೊಬ್ಬಳ ಪಾಲಕರು ಮಗಳ ನಡವಳಿಕೆಯಿಂದ ಸಂದೇಹಗೊಂಡಾಗ ವಿಷಯ ಬಹಿರಂಗವಾಗಿದೆ.

ಬಳಿಕ ಶಿಕ್ಷಕ ಸೇರಿದಂತೆ ಶಾಲೆಯ ಮುಖ್ಯೋಪಾಧ್ಯಾಯಿನಿ ಮತ್ತು ಹೆಲ್ಪ್ ಡೆಸ್ಕ್ ಪ್ರಭಾರಿ ಅವರ ವಿರುದ್ಧ ಕೇಸ್​ ದಾಖಲಾಗಿತ್ತು. ಘಟನೆ ಬೆಳಕಿಗೆ ಬಂದ ನಂತರ ಗೋವಿಂದನ್ ಅವರನ್ನು ಶಿಕ್ಷಕ ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಶಿಕ್ಷಕನ ವಿರುದ್ಧ ಶಿಕ್ಷೆಯಾಗಿದ್ದರೆ, ಶಾಲೆಯ ಮುಖ್ಯೋಪಾಧ್ಯಾಯಿನಿ ಮತ್ತು ಹೆಲ್ಪ್ ಡೆಸ್ಕ್ ಪ್ರಭಾರಿ ಅವರನ್ನು ಕೋರ್ಟ್​ ಬಿಡುಗಡೆ ಮಾಡಿದೆ.

A 50-year-old teacher in Kerala’s Kannur was sentenced to 79 years of strict imprisonment for sexually assaulting minor girls at a lower primary school. A fast-track POCSO court that was hearing the case also slapped a fine of up to Rs 2.7 lakh on the accused — 50-year-old Govindan Namboodiri, a maths teacher who sexually assaulted four minors in the school premises. The sentences run concurrently, which means that Namboodiri will spend 20 years in prison.