ನೋಯ್ಡಾದಲ್ಲಿ ಬಿಜೆಪಿ ಕಾರ್ಯಕರ್ತನ ಅಕ್ರಮ ಕಟ್ಟಡಕ್ಕೂ ನುಗ್ಗಿದ ಬುಲ್ಡೋಜರ್ ; ಸಿಎಂ ಯೋಗಿ ಕ್ರಮಕ್ಕೆ ಭಾರೀ ಪ್ರಶಂಸೆ

08-08-22 12:47 pm       HK News Desk   ದೇಶ - ವಿದೇಶ

ಇತ್ತೀಚೆಗೆ ಕಮ್ಯುನಲ್ ಗೂಂಡಾಗಳ ಆಸ್ತಿ ಮುಟ್ಟುಗೋಲು ಹಾಕಿ ಬುಲ್ಡೋಜರ್ ನುಗ್ಗಿಸಿ ದೇಶದ ಗಮನ ಸೆಳೆದಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಕ್ರಮ ನಡೆಸಿದ ಬಿಜೆಪಿ ಕಾರ್ಯಕರ್ತನ ಮನೆಗೇ ಬುಲ್ಡೋಜರ್ ನುಗ್ಗಿಸಿದ್ದಾರೆ.

ನೋಯ್ಡಾ, ಆಗಸ್ಟ್ 8: ಇತ್ತೀಚೆಗೆ ಕಮ್ಯುನಲ್ ಗೂಂಡಾಗಳ ಆಸ್ತಿ ಮುಟ್ಟುಗೋಲು ಹಾಕಿ ಬುಲ್ಡೋಜರ್ ನುಗ್ಗಿಸಿ ದೇಶದ ಗಮನ ಸೆಳೆದಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಕ್ರಮ ನಡೆಸಿದ ಬಿಜೆಪಿ ಕಾರ್ಯಕರ್ತನ ಮನೆಗೇ ಬುಲ್ಡೋಜರ್ ನುಗ್ಗಿಸಿದ್ದಾರೆ. ನೋಯ್ಡಾ ನಗರದಲ್ಲಿ ತನ್ನ ಅಕ್ರಮದ ಬಗ್ಗೆ ಪ್ರಶ್ನೆ ಮಾಡಿದ ಮಹಿಳೆಯ ಮೇಲೆ ಹಲ್ಲೆಗೈದ ಬಿಜೆಪಿ ಕಾರ್ಯಕರ್ತನ ಮನೆಗೆ ಬುಲ್ಡೋಜರ್ ನುಗ್ಗಿಸಿ, ಅಕ್ರಮವಾಗಿ ಕಟ್ಟಿದ್ದ ಮನೆ ಆವರಣವನ್ನು ತೆರವು ಮಾಡಲಾಗಿದೆ.

ತನ್ನನ್ನು ಬಿಜೆಪಿ ಕಾರ್ಯಕರ್ತನೆಂದು ಬಿಂಬಿಸಿಕೊಂಡಿದ್ದಲ್ಲದೆ, ಸಾರ್ವಜನಿಕರ ಮುಂದೆ ಭಾರೀ ಪೋಸು ನೀಡಿದ್ದ ಶ್ರೀಕಾಂತ್ ತ್ಯಾಗಿ ಎಂಬಾತನ ವಿಡಿಯೋ ಕಳೆದ ವಾರ ವೈರಲ್ ಆಗಿತ್ತು. ನೋಯ್ಡಾದ ಹೌಸಿಂಗ್ ಸೊಸೈಟಿ ಕಟ್ಟಡದ ಆವರಣದಲ್ಲಿ ತನ್ನ ಮನೆಯ ಮುಂದಿನ ಜಾಗವನ್ನು ಅತಿಕ್ರಮಿಸಿ ಅಲ್ಲಿ ಹೆಚ್ಚುವರಿ ನಿರ್ಮಾಣಗಳನ್ನು ಮಾಡಿಕೊಂಡಿದ್ದ. ಅಲ್ಲದೆ, ಮುಂದುಗಡೆ ಗಿಡಗಳನ್ನು ನೆಟ್ಟು ತನ್ನದೆಂದು ತೋರಿಸಿಕೊಳ್ಳಲು ಯತ್ನಿಸಿದ್ದ. ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಸೊಸೈಟಿ ಕಟ್ಟಡದ ನಿವಾಸಿ ಮಹಿಳೆಯೊಬ್ಬರು ಪ್ರಶ್ನೆ ಮಾಡಿದ್ದರು. ಈ ವೇಳೆ, ಮಹಿಳೆಯನ್ನು ಅವಾಚ್ಯವಾಗಿ ನಿಂದಿಸಿದ್ದಲ್ಲದೆ, ಆಕೆಯ ಗಂಡನ ಎದುರಲ್ಲೇ ಯುವಕ ಹಲ್ಲೆ ಮಾಡಿದ್ದ. ಇದರ ವಿಡಿಯೋ ವೈರಲ್ ಆಗಿದ್ದಲ್ಲದೆ, ಬಿಜೆಪಿ ಕಾರ್ಯಕರ್ತನ ಗೂಂಡಾಗಿರಿ ಎಂದು ಟೀಕೆ ವ್ಯಕ್ತವಾಗಿತ್ತು.

Bulldozer action against 'BJP worker' who assaulted woman at Noida society  - India News

ಇದರ ಬೆನ್ನಲ್ಲೇ ಪೊಲೀಸರು ಶ್ರೀಕಾಂತ್ ತ್ಯಾಗಿ ವಿರುದ್ಧ ಪ್ರಕರಣ ದಾಖಲಿಸಿದ್ದು ಆರೋಪಿ ವ್ಯಕ್ತಿ ತಲೆಮರೆಸಿಕೊಂಡಿದ್ದಾನೆ. ಮುಖ್ಯಮಂತ್ರಿ ಯೋಗಿ ಸೂಚನೆಯಂತೆ ನೋಯ್ಡಾ ನಗರ ಪ್ರಾಧಿಕಾರದ ಅಧಿಕಾರಿಗಳು ಸೋಮವಾರ ಬೆಳಗ್ಗೆ ಸ್ಥಳಕ್ಕೆ ಬುಲ್ಡೋಜರ್ ನುಗ್ಗಿಸಿದ್ದು, ಅತಿಕ್ರಮಿಸಿ ಕಟ್ಟಿದ್ದ ಕಟ್ಟಡ ಕಾಮಗಾರಿಯನ್ನು ತೆರವು ಮಾಡಿದ್ದಾರೆ. ಬುಲ್ಡೋಜರ್ ತರಿಸಿ, ಕೂಡಲೇ ಕ್ರಮ ಜರುಗಿಸಿದ್ದಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಸ್ಥಳೀಯರು ಸಿಎಂ ಯೋಗಿ ಕ್ರಮಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸೊಸೈಟಿ ಕಾಲನಿಯ ನಿವಾಸಿಗಳು ಸ್ಥಳದಲ್ಲೇ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

2019ರಲ್ಲಿ ಶ್ರೀಕಾಂತ್ ತ್ಯಾಗಿ ಅತಿಕ್ರಮಣ ಮಾಡಿದ್ದನ್ನು ಪ್ರಶ್ನಿಸಿ ಗ್ರಾಂಡ್ ಓಮ್ಯಾಕ್ಸ್ ಅಪಾರ್ಟ್ಮೆಂಟ್ ಅಸೋಸಿಯೇಶನ್ನವರು ನೋಯ್ಡಾ ಆಡಳಿತಕ್ಕೆ ದೂರು ನೀಡಿದ್ದರು. ಪ್ರಾಧಿಕಾರದಿಂದ ಶ್ರೀಕಾಂತ್ ತ್ಯಾಗಿಗೆ ನೋಟೀಸ್ ನೀಡಿ, ಅತಿಕ್ರಮಣ ತೆರವು ಮಾಡುವಂತೆ ಸೂಚಿಸಲಾಗಿತ್ತು. ಆದರೆ ಅತಿಕ್ರಮ ತೆರವು ಆಗಿರಲಿಲ್ಲ. ಇದೀಗ ಮಹಿಳೆಯ ಮೇಲೆ ಕೈಮಾಡಿರುವ ವಿಡಿಯೋ ವೈರಲ್ ಆಗಿದ್ದರಿಂದ ಯೋಗಿ ಸರಕಾರ ತುರ್ತಾಗಿ ಕ್ರಮ ಕೈಗೊಂಡು, ಅಕ್ರಮ ಇದ್ದರೆ ಬುಲ್ಡೋಜರ್ ಬಿಜೆಪಿ ಕಾರ್ಯಕರ್ತನ ಕಟ್ಟಡದ ಮೇಲೂ ಹರಿಸುತ್ತೇವೆ ಎಂದು ಪರೋಕ್ಷ ಸಂದೇಶ ನೀಡಿದೆ. 

Authorities on Monday demolished the encroachment at a Noida housing society by Shrikant Tyagi, the self-proclaimed BJP worker in the news for allegedly abusing and assaulting a woman last week.