ಬಿಹಾರದಲ್ಲಿ 8ನೇ ಬಾರಿಗೆ ಸಿಎಂ ಸ್ಥಾನಕ್ಕೇರಿದ ನಿತೀಶ್ ; ತೇಜಸ್ವಿ ಯಾದವ್ ಗೆ ಮತ್ತೆ ಡಿಸಿಎಂ ಪಟ್ಟ, ರಾಜ್ಯದೆಲ್ಲೆಡೆ ಬಿಜೆಪಿ ಪ್ರತಿಭಟನೆ

10-08-22 05:50 pm       HK News Desk   ದೇಶ - ವಿದೇಶ

ಬಿಹಾರದಲ್ಲಿ ಎಂಟನೇ ಬಾರಿಗೆ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅತ್ತ ಬಿಜೆಪಿ ಸಖ್ಯ ತೊರೆದು ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿದ ಒಂದೇ ದಿನದಲ್ಲಿ ಇತ್ತ ಆರ್ ಜೆಡಿ, ಕಾಂಗ್ರೆಸ್ ಇನ್ನಿತರ ಏಳು ಪಕ್ಷಗಳ ಬೆಂಬಲದೊಂದಿಗೆ ಮತ್ತೆ ಸರಕಾರ ರಚಿಸಿದ್ದಾರೆ.

ಪಾಟ್ನಾ, ಆಗಸ್ಟ್ 10: ಬಿಹಾರದಲ್ಲಿ ಎಂಟನೇ ಬಾರಿಗೆ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅತ್ತ ಬಿಜೆಪಿ ಸಖ್ಯ ತೊರೆದು ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿದ ಒಂದೇ ದಿನದಲ್ಲಿ ಇತ್ತ ಆರ್ ಜೆಡಿ, ಕಾಂಗ್ರೆಸ್ ಇನ್ನಿತರ ಏಳು ಪಕ್ಷಗಳ ಬೆಂಬಲದೊಂದಿಗೆ ಮತ್ತೆ ಸರಕಾರ ರಚಿಸಿದ್ದಾರೆ.

ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ರಾಜಭವನದಲ್ಲಿ ನಿತೀಶ್ ಕುಮಾರ್ ದಾಖಲೆಯ ಎಂಟನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದೇ ವೇಳೆ, ಆರ್ ಜೆಡಿ ನಾಯಕ, ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಅವರ ಪುತ್ರ ತೇಜಸ್ವಿ ಯಾದವ್ ಡಿಸಿಎಂ ಆಗಿ ಪ್ರಮಾಣ ಸ್ವೀಕರಿಸಿದ್ದಾರೆ. ಒಂದು ವಾರ ಕಾಲ ಬಿಜೆಪಿ ನಾಯಕರ ಜೊತೆಗಿನ ಮುನಿಸಿನ ಬಳಿಕ ಬಿಜೆಪಿ- ಜೆಡಿಯು ಮೈತ್ರಿ ಸರಕಾರವನ್ನೇ ವಿಸರ್ಜಿಸಿ, ಒಂದೇ ದಿನದಲ್ಲಿ ವಿರೋಧ ಪಕ್ಷಗಳಾಗಿದ್ದ ಆರ್ ಜೆಡಿ, ಕಾಂಗ್ರೆಸ್ ಬೆಂಬಲ ಪಡೆದು ಮತ್ತೆ ಅಧಿಕಾರಕ್ಕೇರಿದ್ದು ವಿಶೇಷ.

Bihar Politics: Ahead of Nitish Kumar's swearing-in, BJP stages protest in  Bihar | Watch - Hindustan Times

Bihar: BJP stages protest in Patna ahead of Nitish Kumar's swearing-in  ceremony - Lagatar English

Nitish Kumar sworn in as Bihar CM for eighth time, asks BJP to 'worry'  about 2024 polls | Cities News,The Indian Express

Stung by Nitish Kumar's 'betrayal', BJP stages protest in Bihar

ಆಮೂಲಕ 71 ವರ್ಷದ ನಿತೀಶ್ ಕುಮಾರ್, ಮತ್ತೆ ಹಳೆಯ ಮಹಾಘಟಬಂಧನ್ ಮೈತ್ರಿಕೂಟವನ್ನು ರಚಿಸುವ ಸುಳಿವು ನೀಡಿದ್ದಾರೆ. ಎನ್ ಡಿಎ ಒಕ್ಕೂಟ ತೊರೆದು ಮರಳಿ ಮಹಾ ಒಕ್ಕೂಟ ಸೇರುತ್ತಿದ್ದಂತೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರೇ ಪ್ರಧಾನಿ ಅಭ್ಯರ್ಥಿಯಾಗಲಿದ್ದಾರೆ ಅನ್ನುವ ರೀತಿ ಬಿಂಬಿತಗೊಂಡಿದ್ದಾರೆ. ಇದೇ ವೇಳೆ, ನಿತೀಶ್ ಕುಮಾರ್ ದ್ರೋಹ ಎಸಗಿದ್ದಾರೆಂದು ಕಿಡಿಕಾರಿರುವ ಬಿಜೆಪಿ ನಾಯಕರು, ರಾಜ್ಯದಾದ್ಯಂತ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ. ಬಿಹಾರದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದ್ದು, ಅದಕ್ಕೆ ತಯಾರಿ ನಡೆಸುತ್ತಿದ್ದಾಗಲೇ ಬಿಜೆಪಿ ವಿರುದ್ಧ ಮುನಿಸಿಕೊಂಡು ಪ್ರತ್ಯೇಕ ಸರಕಾರ ರಚಿಸಿದ್ದು ಮಹತ್ವದ ಬೆಳವಣಿಗೆಯಾಗಿದೆ.

Stripped of power in Bihar, the BJP today staged a massive demonstration condemning the "betrayal" of Chief Minister Nitish Kumar, whose similar volte face five years ago had helped it join the government through the proverbial "back door".