ನೂಪುರ್ ಶರ್ಮಾ ಕೊಲ್ಲಲು ಟಾರ್ಗೆಟ್ ಇಟ್ಕೊಂಡಿದ್ದ ಜೈಶೆ ಮಹಮ್ಮದ್ ಉಗ್ರ ಬಂಧನ

12-08-22 08:51 pm       HK News Desk   ದೇಶ - ವಿದೇಶ

ಸ್ವಾತಂತ್ರ್ಯೋತ್ಸವಕ್ಕೆ ಎರಡೇ ದಿನ ಇರುವಾಗ ಉತ್ತರ ಪ್ರದೇಶ ಪೊಲೀಸರು ಜೈಶ್- ಇ-ಮಹಮ್ಮದ್ ಉಗ್ರವಾದಿ ಸಂಘಟನೆಗೆ ಸೇರಿದ ಉಗ್ರನನ್ನು ಪಶ್ಚಿಮ ಉತ್ತರ ಪ್ರದೇಶದ ಸಹರಾಣ್ ಪುರ್ ಎಂಬಲ್ಲಿ ಬಂಧಿಸಿದ್ದಾರೆ.

ನವದೆಹಲಿ, ಆಗಸ್ಟ್ 12: ಸ್ವಾತಂತ್ರ್ಯೋತ್ಸವಕ್ಕೆ ಎರಡೇ ದಿನ ಇರುವಾಗ ಉತ್ತರ ಪ್ರದೇಶ ಪೊಲೀಸರು ಜೈಶ್- ಇ-ಮಹಮ್ಮದ್ ಉಗ್ರವಾದಿ ಸಂಘಟನೆಗೆ ಸೇರಿದ ಉಗ್ರನನ್ನು ಪಶ್ಚಿಮ ಉತ್ತರ ಪ್ರದೇಶದ ಸಹರಾಣ್ ಪುರ್ ಎಂಬಲ್ಲಿ ಬಂಧಿಸಿದ್ದಾರೆ. ಇತ್ತೀಚೆಗೆ ಪೈಗಂಬರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ನಾಯಕಿ ನೂಪುರ್ ಶರ್ಮಾ ಕೊಲ್ಲುವ ಗುರಿ ಇಟ್ಟುಕೊಂಡಿದ್ದ ಅನ್ನುವ ಸ್ಫೋಟಕ ಮಾಹಿತಿಯನ್ನು ಪೊಲೀಸರು ಹೊರಗೆಡವಿದ್ದಾರೆ.

ಬಂಧಿತನನ್ನು ಮೊಹಮ್ಮದ್ ನದೀಂ ಎಂದು ಗುರುತಿಸಲಾಗಿದ್ದು, ಉತ್ತರ ಪ್ರದೇಶದ ಆಂಟಿ ಟೆರರಿಸ್ಟ್ ಸ್ಕ್ವಾಡ್ ಸಿಬಂದಿ ಸೆರೆ ಹಿಡಿದಿದ್ದಾರೆ. ಆತನಿಗೆ ನೂಪುರ್ ಶರ್ಮಾನನ್ನು ಹುಡುಕಿ ಕೊಲ್ಲುವುದನ್ನೇ ಪ್ರಮುಖ ಟಾರ್ಗೆಟ್ ಆಗಿ ನೀಡಲಾಗಿತ್ತು. ಜೈಶೆ ಮಹಮ್ಮದ್ ಮತ್ತು ತೆಹ್ರೀಕ್ ಇ-ತಾಲಿಬಾನ್ ಉಗ್ರವಾದಿ ಸಂಘಟನೆಗಳ ಜೊತೆ ಲಿಂಕ್ ಹೊಂದಿದ್ದ. 2018ರಿಂದ ನಿರಂತರವಾಗಿ ಪಾಕಿಸ್ಥಾನದ ಉಗ್ರರ ಜೊತೆ ಸಂಪರ್ಕದಲ್ಲಿದ್ದ ಅನ್ನುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

Emerging star to 'fringe element': The steep rise and sudden fall of Nupur  Sharma

ಮೊಹಮ್ಮದ್ ನದೀಂ ವಿವಿಧ ಸಾಮಾಜಿಕ ಜಾಲತಾಣಗಳನ್ನು ನಕಲಿ ಐಡಿ ಬಳಸಿ ಕಾರ್ಯಾಚರಿಸುತ್ತಿದ್ದು, ಅದರಲ್ಲಿಯೇ ಪಾಕಿಸ್ಥಾನದ ಉಗ್ರರ ಜೊತೆಗೆ ಸಂಪರ್ಕ ಮಾಡುತ್ತಿದ್ದ. ಪಾಕಿಸ್ಥಾನದ ಕಡೆಯ ಉಗ್ರರು ನೂಪುರ್ ಶರ್ಮಾಳನ್ನು ಕೊಲ್ಲುವ ಟಾರ್ಗೆಟ್ ಕೊಟ್ಟಿದ್ದರು. ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ದೇಶಾದ್ಯಂತ ಪೊಲೀಸರು ಅಲರ್ಟ್ ಇರುವಂತೆ ಸೂಚಿಸಲಾಗಿದೆ. ಸ್ವಾತಂತ್ರ್ಯದ ಸಂದರ್ಭದಲ್ಲಿ ಉಗ್ರರು ವಿಧ್ವಂಸಕ ಕೃತ್ಯಕ್ಕೆ ಯೋಜನೆ ಹಾಕುತ್ತಾರೆಂದು ಪೊಲೀಸರು ಸೇರಿದಂತೆ ವಿವಿಧ ಭದ್ರತಾ ಏಜನ್ಸಿಗಳು ಅಲರ್ಟ್ ಆಗಿರುತ್ತವೆ. ಇದೇ ವೇಳೆ, ಉತ್ತರ ಪ್ರದೇಶದಲ್ಲಿ ಉಗ್ರವಾದಿ ಲಿಂಕ್ ಇರುವ ವ್ಯಕ್ತಿ ಸಿಕ್ಕಿಬಿದ್ದಿದ್ದಾನೆ. 

Ahead of Independence Day, police claimed to have busted a major terror plot on Friday as it arrested an alleged operative of Jaish-e-Mohammad and Tehreek-e-Taliban from western Uttar Pradesh’s Saharanpur. The accused was tasked with killing former BJP leader Nupur Sharma, police added.