ಬೂಕರ್ ಪ್ರಶಸ್ತಿ ವಿಜೇತ, ಇಸ್ಲಾಂ ಬಗ್ಗೆ ಟೀಕಿಸಿದ್ದ ಲೇಖಕ ಸಲ್ಮಾನ್ ರಶ್ದಿಗೆ ನ್ಯೂಯಾರ್ಕಿನಲ್ಲಿ ಅಟ್ಯಾಕ್, ಕುತ್ತಿಗೆಗೆ ಚೂರಿ ಹಾಕಿದ ಆಗಂತುಕ

13-08-22 11:29 am       HK News Desk   ದೇಶ - ವಿದೇಶ

ಭಾರತೀಯ ಮೂಲದ ಲೇಖಕ, ಕಳೆದ 20 ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದ ಸಲ್ಮಾನ್ ರಶ್ದಿ ಅವರ ಮೇಲೆ ವ್ಯಕ್ತಿಯೊಬ್ಬ ದಾಳಿ ನಡೆಸಿದ್ದು, ಚೂರಿಯಿಂದ ಇರಿದಿರುವ ಘಟನೆ ನ್ಯೂಯಾರ್ಕಿನಲ್ಲಿ ನಡೆದಿದೆ.

ನ್ಯೂಯಾರ್ಕ್, ಆಗಸ್ಟ್ 13: ಭಾರತೀಯ ಮೂಲದ ಲೇಖಕ, ಕಳೆದ 20 ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದ ಸಲ್ಮಾನ್ ರಶ್ದಿ ಅವರ ಮೇಲೆ ವ್ಯಕ್ತಿಯೊಬ್ಬ ದಾಳಿ ನಡೆಸಿದ್ದು, ಚೂರಿಯಿಂದ ಇರಿದಿರುವ ಘಟನೆ ನ್ಯೂಯಾರ್ಕಿನಲ್ಲಿ ನಡೆದಿದೆ.

ಸಲ್ಮಾನ್ ರಶ್ದಿ ಉಪನ್ಯಾಸ ನೀಡುವುದಕ್ಕಾಗಿ ಆಗಮಿಸಿದ್ದರು. ವೇದಿಕೆಯಲ್ಲಿದ್ದಾಗಲೇ ವ್ಯಕ್ತಿಯೊಬ್ಬ ದಾಳಿ ನಡೆಸಿದ್ದು, ಕುತ್ತಿಗೆಯ ಮೇಲೆ ಇರಿದಿದ್ದಾನೆ. ಕೂಡಲೇ 75 ವರ್ಷದ ಸಲ್ಮಾನ್ ರಶ್ದಿ ನೆಲಕ್ಕೆ ಬಿದ್ದಿದ್ದಾರೆ. ನ್ಯೂಯಾರ್ಕ್ ನಗರದಿಂದ ನೂರು ಕಿಮೀ ದೂರದ ಗ್ರಾಮಾಂತರ ಪ್ರದೇಶದಲ್ಲಿ ಘಟನೆ ನಡೆದಿದೆ. ಚೌಟಾಕಾ ಇನ್ಸ್ ಟ್ಯೂಶನ್ನಲ್ಲಿ ಸರಣಿ ಉಪನ್ಯಾಸ ಪ್ರಯುಕ್ತ ರಶ್ದೀ ಅವರನ್ನು ಆಹ್ವಾನಿಸಲಾಗಿತ್ತು. ದಾಳಿ ಎಸಗಿದ ವ್ಯಕ್ತಿಯನ್ನು ನ್ಯೂಯಾರ್ಕ್ ಪೊಲೀಸರು ಬಂಧಿಸಿದ್ದಾರೆ.

rushdie: Salman Rushdie on ventilator, likely to lose an eye, liver stabbed  and damaged: Report - The Economic Times

1980ರ ದಶಕದಲ್ಲಿ ಇಸ್ಲಾಮ್ ಬಗ್ಗೆ ಬರೆದಿದ್ದ ಪುಸ್ತಕ ವ್ಯಾಪಕ ವಿರೋಧಕ್ಕೆ ಕಾರಣವಾಗಿತ್ತು. ಇರಾನ್ ದೇಶದ ಕೆಲವು ನಾಯಕರು ಸಲ್ಮಾನ್ ರಶ್ದಿ ಬಗ್ಗೆ ಫತ್ವಾ ಹೊರಡಿಸಿದ್ದರು. ರಶ್ದೀ ತಲೆ ತೆಗೆದವರಿಗೆ ಬಹುಮಾನವನ್ನೂ ಘೋಷಿಸಲಾಗಿತ್ತು. ಆಬಳಿಕ ಬ್ರಿಟನ್ ತೆರಳಿ ಅಲ್ಲಿಯೇ ಉಳಿದುಕೊಂಡಿದ್ದ ಸಲ್ಮಾನ್ ರಶ್ದೀ ಅವರು ಅಲ್ಲಿಂದಲೇ ಹಲವು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. 1981ರಲ್ಲಿ ಪ್ರಕಟವಾದ ಮಿಡ್ ನೈಟ್ ಚಿಲ್ಡ್ರನ್ ಎನ್ನುವ ಪುಸ್ತಕಕ್ಕೆ ಬೂಕರ್ ಪ್ರಶಸ್ತಿ ಲಭಿಸಿತ್ತು. ವಿವಾದ ಕೇಳಿಬಂದ ಬಳಿಕ ಸಲ್ಮಾನ್ ರಶ್ದಿ ಹೊರಗೆ ಕಾಣಿಸಿಕೊಳ್ಳುವುದನ್ನು ಕಡಿಮೆ ಮಾಡಿದ್ದರು.

Salman Rushdie in surgery after being stabbed in the neck at event in New  York

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಾಂಗ್ಲಾ ದೇಶ ಮೂಲದ ಲೇಖಕಿ ತಸ್ಲೀಮಾ ನಸ್ರೀನ್, ಇಸ್ಲಾಂ ಬಗ್ಗೆ ಟೀಕಿಸುವ ಯಾವುದೇ ವ್ಯಕ್ತಿ ದಾಳಿಗೆ ಒಳಗಾಗುತ್ತಾನೆ. ಇದನ್ನು ಕೇಳಿ ಶಾಕ್ ಆಗಿದ್ದೇನೆ. ಇಸ್ಲಾಂ ಬಗ್ಗೆ ಟೀಕಿಸುವ ಯಾರು ಕೂಡ ದಾಳಿಗೆ ಒಳಗಾಗಬಹುದು ಎಂದು ಹೇಳಿದ್ದಾರೆ.

Author Salman Rushdie was stabbed in the neck at an event in New York, US, on Friday. Details were scarce about his condition and the attacker, who has been detained. The 75-year-old author's writings have in the past led to threats.