75ನೇ ಸ್ವಾತಂತ್ರ್ಯೋತ್ಸವ ; ವಾಹನಗಳ ಮೇಲೆ ರಾಷ್ಟ್ರಧ್ವಜ ಹಾಕಿದರೆ ಜೈಲು ಶಿಕ್ಷೆ ! 

13-08-22 11:01 pm       HK News Desk   ದೇಶ - ವಿದೇಶ

75ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಈ ಬಾರಿ 'ಹರ್ ಘರ್ ತಿರಂಗ' ಅಭಿಯಾನದ ಹಮ್ಮಿಕೊಳ್ಳಲಾಗಿದೆ. ಪ್ರತಿ ಮನೆಯಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ನವದೆಹಲಿ, ಆಗಸ್ಟ್ 13 : 75ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಈ ಬಾರಿ 'ಹರ್ ಘರ್ ತಿರಂಗ' ಅಭಿಯಾನದ ಹಮ್ಮಿಕೊಳ್ಳಲಾಗಿದೆ. ಪ್ರತಿ ಮನೆಯಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಆದರೆ ಕಾರು, ಬೈಕ್ ಅಥವಾ ಇತರ ಯಾವುದೇ ವಾಹನದ ಮೇಲೆ ರಾಷ್ಟ್ರ ಧ್ವಜವನ್ನು ಹಾಕುವಂತಿಲ್ಲ. 

ಅದರ ಬದಲು ಆಗಸ್ಟ್ 2 ರಿಂದ 15 ರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರೊಫೈಲ್ ಚಿತ್ರವಾಗಿ 'ತಿರಂಗಾ' ಅನ್ನು ಬಳಸಲು ಪ್ರಧಾನಿ ಮೋದಿ ನಾಗರಿಕರನ್ನು ಕೇಳಿಕೊಂಡಿದ್ದಾರೆ.

Freedom fighter P Gopinathan Nair passes away, PM lauds his unwavering  commitment to Gandhian principles | The Financial Express

ಕೆಲವರು ತಮ್ಮ ಕಾರು, ಬೈಕ್ ಮತ್ತು ಇತರೇ ವಾಹನಗಳ ಮೇಲೆ ಧ್ವಜವನ್ನು ಹಾಕ್ಕೊಳ್ಳುತ್ತಾರೆ. ಆದರೆ ಧ್ವಜ ಸಂಹಿತೆಯ ಪ್ರಕಾರ, ಕಟ್ಟಡದ ಮೇಲ್ಭಾಗ ಅಡ್ಡಲಾಗಿ ಅಥವಾ ಬದಿಗಳಲ್ಲಿ ಅಥವಾ ಹಿಂಭಾಗದಲ್ಲಿ ಅಥವಾ ವಾಹನ, ರೈಲು, ದೋಣಿ ಅಥವಾ ವಿಮಾನ ಅಥವಾ ಯಾವುದೇ ರೀತಿಯ ವಸ್ತುವಿನ ಮೇಲೆ ಭಾರತೀಯ ರಾಷ್ಟ್ರೀಯ ಧ್ವಜವನ್ನು ಹೊದಿಸುವುದು ಭಾರತೀಯ ರಾಷ್ಟ್ರೀಯ ಧ್ವಜಕ್ಕೆ ಅಗೌರವವೆಂದು ಪರಿಗಣಿಸಲಾಗುತ್ತದೆ. ಭಾರತದ ಧ್ವಜ ಸಂಹಿತೆಯ ಪ್ರಕಾರ ಈ ಕಾನೂನಿಗೆ ಬದ್ಧವಾಗಿಲ್ಲದ ರೀತಿಯಲ್ಲಿ ನಡೆದುಕೊಂಡರೆ ಅವರಿಗೆ ಮೂರು ವರ್ಷಗಳ ವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ. ಇದಲ್ಲದೇ, ರಾಷ್ಟ್ರಧ್ವಜವು ಮೂರು ಆಯತಾಕಾರದ ಫಲಕಗಳು ಅಥವಾ ಸಮಾನ ಅಗಲಗಳ ಉಪ-ಫಲಕಗಳಿಂದ ಮಾಡಲ್ಪಟ್ಟ ತ್ರಿವರ್ಣ ಫಲಕವಾಗಿರಬೇಕು ಎಂದು ಕಾಯಿದೆಯು ತಿಳಿಸುತ್ತದೆ.

India is celebrating its 75th Independence Day this year on August 15 and to celebrate the 'Azadi Ka Amrit Mahotsav' Prime Minister Narendra Modi has urged citizens to hoist the Indian national flag at their home as a part of ‘Har Ghar Tiranga’ campaign to mark 75th Independence Day. PM Modi has also asked citizens to use ‘tiranga’ as their profile picture of social media accounts between 2nd to 15th August. “When India completes 75 years of its Independence, all of us are going to witness a glorious and historic moment," PM Modi said in his ‘Mann Ki Baat’.