ಬ್ರೇಕಿಂಗ್ ನ್ಯೂಸ್
14-08-22 07:29 pm HK News Desk ದೇಶ - ವಿದೇಶ
ನವದೆಹಲಿ, ಆಗಸ್ಟ್ 14: ದೇಶ 75ನೇ ಸ್ವಾತಂತ್ರ್ಯೋತ್ಸವದ ಸಡಗರದಲ್ಲಿರುವಾಗಲೇ 38 ವರ್ಷಗಳ ಹಿಂದೆ ಸಿಯಾಚಿನ್ ಯುದ್ಧ ಭೂಮಿಯಲ್ಲಿ ಮಡಿದಿದ್ದ ಲ್ಯಾನ್ಸ್ ನಾಯಕ್ ಚಂದ್ರಶೇಖರ್ ಅವರ ಅಸ್ಥಿಗಳು ಪತ್ತೆಯಾಗಿವೆ. ಸಿಯಾಚಿನ್ ಗ್ಲೇಸಿಯರ್ ನಡುವೆ ನಾಪತ್ತೆಯಾಗಿದ್ದ ಉತ್ತರಾಖಂಡ ಮೂಲದ ಯೋಧನಿಗಾಗಿ ಪತ್ನಿ ಮತ್ತು ಇಬ್ಬರು ಹೆಣ್ಮಕ್ಕಳ ಸುದೀರ್ಘ ಕಾಯುವಿಕೆಗೆ ಕಡೆಗೂ ಸಾಕ್ಷ್ಯ ಸಿಕ್ಕಿದೆ.
1984ರಲ್ಲಿ ಆಪರೇಶನ್ ಮೇಘದೂತ್ ಅನ್ನುವ ಕಾರ್ಯಾಚರಣೆ ನಡೆದಿತ್ತು. ಪಾಕಿಸ್ಥಾನಿ ಸೇನೆಯು ಕಬಳಿಸಿದ್ದ 5965 ಹೆಸರಿನ ಗಿರಿ ಶಿಖರವನ್ನು ಮರಳಿ ವಾಪಸ್ ಪಡೆಯುವುದು ಕಾರ್ಯಾಚರಣೆ ಉದ್ದೇಶವಾಗಿತ್ತು. ಈ ವೇಳೆ, 18 ಮಂದಿ ಇದ್ದ ಸೇನಾ ಶಿಬಿರ ಹಿಮದ ಕುಸಿತದಿಂದಾಗಿ ಹುದುಗಿ ಹೋಗಿತ್ತು. 18 ಮಂದಿಯಲ್ಲಿ 14 ಮಂದಿಯ ಶವ ಪತ್ತೆಯಾಗಿದ್ದರೆ, ಐದು ಮಂದಿ ಕಣ್ಮರೆಯಾಗಿದ್ದರು. ಲ್ಯಾನ್ಸ್ ನಾಯ್ಕ್ ಚಂದ್ರಶೇಖರ್ ಕೂಡ ಕಣ್ಮರೆಯಾದವರಲ್ಲಿ ಒಬ್ಬರು. 1984ರ ಮೇ 29ರಂದು ಘಟನೆ ನಡೆದಿತ್ತು. ಆನಂತರ, ಆಪರೇಶನ್ನಲ್ಲಿ ಸಿಯಾಚಿನ್ ಗ್ಲೇಸಿಯರನ್ನು ಭಾರತೀಯ ಸೇನೆ ಮರಳಿ ವಶಕ್ಕೆ ಪಡೆದಿತ್ತಾದರೂ, ಐವರು ಯೋಧರ ಕುರುಹು ಸಿಕ್ಕಿರಲಿಲ್ಲ.

16 ಸಾವಿರ ಅಡಿ ಎತ್ತರದಲ್ಲಿ ಹಿಮ ಶಿಖರಗಳ ನಡುವೆ ಯೋಧ ಕಣ್ಮರೆಯಾಗಿದ್ದರಿಂದ ಹುಡುಕಾಟವೂ ಸಾಧ್ಯವಾಗಿರಲಿಲ್ಲ. ಆಗ ಚಂದ್ರಶೇಖರ್ ಅವರ ನಾಲ್ಕು ವರ್ಷ ಹಾಗೂ ಎಂಟು ವರ್ಷದವರಿದ್ದ ಇಬ್ಬರು ಹೆಣ್ಮಕ್ಕಳು ಈಗ ದೊಡ್ಡವರಾಗಿದ್ದಾರೆ. ಯೋಧನ ಪತ್ನಿಗೆ 65 ವರ್ಷವಾಗಿದ್ದು, 38 ವರ್ಷಗಳ ಹಿಂದಿನ ಘಟನೆಯನ್ನು ನೆನಪಿಟ್ಟುಕೊಂಡಿದ್ದಾರೆ. ಆದರೆ ಮಕ್ಕಳಿಗೆ ಆಗಿಹೋದ ದುರಂತದ ನೆನಪು ಇದ್ದಿರಲಿಕ್ಕಿಲ್ಲ. ಆಗಸ್ಟ್ 13ರಂದು ಸಿಯಾಚಿನ್ ಗ್ಲೇಸಿಯರ್ ನಡುವೆ ಹಳೆಯ ಬಂಕರ್ ಅಡಿಯಲ್ಲಿ ಅಸ್ಥಿಪಂಜರ ಪತ್ತೆಯಾಗಿದೆ. ಇದರ ಜೊತೆ ಯೋಧರು ಧರಿಸುವ ಡಿಸ್ಕ್ ಕೂಡ ಪತ್ತೆಯಾಗಿದ್ದು, ಅದರ ನಂಬರ್ ಆಧಾರದಲ್ಲಿ ಅದು ಲ್ಯಾನ್ಸ್ ನಾಯ್ಕ್ ಚಂದ್ರಶೇಖರ್ ಅವರದ್ದೆಂದು ಸೇನೆ ಪತ್ತೆ ಮಾಡಿದೆ.
As the nation celebrates 75 years of Independence and remembers the sacrifices of those who were part of the freedom struggle, a family in Haldwani, Uttarakhand will have quiet closure after a long wait of 38 years.The mortal remains of Lance Naik Chandra Shekhar, who was part of the 1984 Operation Meghdoot in Sachen, were found in an old bunker at the glacier on August 13.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
26-07-26 04:30 pm
HK News Staffer
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿಯಿಂದ ಬ್ಲ...
24-07-26 08:57 pm
ಪಿಡಿಓ ಹುದ್ದೆ ಕೊಡಿಸುವುದಾಗಿ ಹೇಳಿ 26 ಲಕ್ಷ ಪೀಕಿಸಿ...
24-07-26 08:31 pm