ಸೇಬು ತೋಟದಲ್ಲಿ ಕಾಶ್ಮೀರಿ ಪಂಡಿತನ ಹತ್ಯೆ ; ಗ್ರೆನೇಡ್ ಎಸೆದು ತಪ್ಪಿಸಿದ ಉಗ್ರ, ಮನೆ ಜಪ್ತಿ, ಸಂಬಂಧಿಕರ ಸೆರೆಹಿಡಿದ ಪೊಲೀಸರು 

17-08-22 02:12 pm       HK News Desk   ದೇಶ - ವಿದೇಶ

​​​​​ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಛೋಟಿಪುರದಲ್ಲಿ ಕಾಶ್ಮೀರಿ ಪಂಡಿತ ಸಮುದಾಯದ ಸುನೀಲ್ ಕುಮಾರ್ ಅವರನ್ನು ಉಗ್ರರು ಗುಂಡಿಟ್ಟು ಹತ್ಯೆಗೈದ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಜಮ್ಮು-ಕಾಶ್ಮೀರ ಸರ್ಕಾರ ಮುಂದಾಗಿದೆ. 

ಶ್ರೀನಗರ, ಆಗಸ್ಟ್ 17 : ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಛೋಟಿಪುರದಲ್ಲಿ ಕಾಶ್ಮೀರಿ ಪಂಡಿತ ಸಮುದಾಯದ ಸುನೀಲ್ ಕುಮಾರ್ ಅವರನ್ನು ಉಗ್ರರು ಗುಂಡಿಟ್ಟು ಹತ್ಯೆಗೈದ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಜಮ್ಮು-ಕಾಶ್ಮೀರ ಸರ್ಕಾರ ಮುಂದಾಗಿದೆ. 

ಕಾಶ್ಮೀರಿ ಪಂಡಿತ ಸುನೀಲ್ ಕುಮಾರ್ ಭಟ್ ಅವರ ಹತ್ಯೆ ಪ್ರಕರಣದಲ್ಲಿ ಶಾಮೀಲಾಗಿರುವ ಉಗ್ರ ಅದಿಲ್ ವಾನಿಯ ಮನೆಯನ್ನು ಜಪ್ತಿ ಮಾಡುವ ಪ್ರಕ್ರಿಯೆಯನ್ನು ಪೊಲೀಸರು ಆರಂಭಿಸಿದ್ದಾರೆ.‌ ಮಂಗಳವಾರ ಶೋಪಿಯಾನ್ ನಲ್ಲಿ ತಮ್ಮ ಸೇಬಿನ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸುನೀಲ್ ಕುಮಾರ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದರು. ಅವರ ಸಹೋದರ ಪಿಂಟು ಕುಮಾರ್ ಘಟನೆಯಲ್ಲಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕಾಶ್ಮೀರಿ ಪಂಡಿತರ ಮೇಲಿನ ದಾಳಿಯನ್ನು ಖಂಡಿಸಿ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಜಮ್ಮು ಕಾಶ್ಮೀರ ಪೊಲೀಸರು ಭಯೋತ್ಪಾದಕ ಅದಿಲ್ ವಾನಿಯ ತಂದೆ ಮತ್ತು ಆತನ ಮೂವರು ಸಹೋದರರನ್ನು ಬಂಧಿಸಿದ್ದಾರೆ.‌

ಕಾಶ್ಮೀರಿ ಪಂಡಿತರ ಮೇಲೆ ದಾಳಿ ನಡೆಸಿದ ನಂತರ ವಾನಿ ಕುಟಾಪೋರಾ ಪ್ರದೇಶದ ಮನೆಯಲ್ಲಿ ಆಶ್ರಯ ಪಡೆದಿದ್ದ. ಈ ಬಗ್ಗೆ ಮಾಹಿತಿ ಪಡೆದ ಭದ್ರತಾ ಪಡೆ ಶೋಧ ಕಾರ್ಯ ನಡೆಸುತ್ತಿದ್ದ ಸಂದರ್ಭದಲ್ಲಿ ವಾನಿ ಭದ್ರತಾ ಪಡೆ ಮೇಲೆ ಗ್ರೆನೇಡ್ ಎಸೆದು ಪರಾರಿಯಾಗಿರುವುದಾಗಿ ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ವರದಿ ಮಾಡಿದೆ.

The latest targeted killing of a Kashmir Pandit by militants in south Kashmir’s Shopian district on Tuesday has sparked a fresh wave of fears among the minority community members in the Kashmiri Valley, who feel increasingly scared and insecure. Sunil Kumar Nath, 45, and his brother Pintoo Kumar, 43, were shot at by motor-cycle borne militants when they were working in their orchard in Chotigam village of Shopian. While Nath died on the spot, Kumar is in hospital with critical bullet wounds.