ಸುಕೇಶ್ ಚಂದ್ರಶೇಖರ್ ಬಹುಕೋಟಿ ಹಗರಣ ; ಪ್ರಕರಣದಲ್ಲಿ ತಗ್ಲಾಕ್ಕೊಂಡ ಬಾಲಿವುಡ್ ನಟಿ ಜಾಕ್ವೆಲಿನ್

17-08-22 05:59 pm       HK News Desk   ದೇಶ - ವಿದೇಶ

ಶ್ರೀಲಂಕಾದಿಂದ ಬಂದು ಬಾಲಿವುಡ್ಡಿನಲ್ಲಿ ನೆಲೆ ಕಂಡುಕೊಂಡು ಖ್ಯಾತಿ ಪಡೆದಿರುವ ಜಾಕ್ವೆಲಿನ್ ಫೆರ್ನಾಂಡಿಸ್ ಹೆಸರು ಬಹುಕೋಟಿ ಹಗರಣದ ಸೂತ್ರಧಾರ ಸುಕೇಶ್ ಚಂದ್ರಶೇಖರ್ ಪ್ರಕರಣದಲ್ಲಿ ತಗ್ಲಾಕ್ಕೊಂಡಿದೆ.

ನವದೆಹಲಿ, ಆಗಸ್ಟ್ 17: ಶ್ರೀಲಂಕಾದಿಂದ ಬಂದು ಬಾಲಿವುಡ್ಡಿನಲ್ಲಿ ನೆಲೆ ಕಂಡುಕೊಂಡು ಖ್ಯಾತಿ ಪಡೆದಿರುವ ಜಾಕ್ವೆಲಿನ್ ಫೆರ್ನಾಂಡಿಸ್ ಹೆಸರು ಬಹುಕೋಟಿ ಹಗರಣದ ಸೂತ್ರಧಾರ ಸುಕೇಶ್ ಚಂದ್ರಶೇಖರ್ ಪ್ರಕರಣದಲ್ಲಿ ತಗ್ಲಾಕ್ಕೊಂಡಿದೆ. ಇಡಿ ಅಧಿಕಾರಿಗಳು ಪಾಟಿಯಾಲ ಹೌಸ್ ಕೋರ್ಟಿಗೆ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಜಾಕ್ವೆಲಿನ್ ಫೆರ್ನಾಂಡಿಸ್ ಅವರನ್ನೂ ಆರೋಪಿಯಾಗಿ ತೋರಿಸಿದ್ದಾರೆ.

36 ವರ್ಷದ ಜಾಕ್ವೆಲಿನ್ ಇತ್ತೀಚೆಗೆ ಬಿಡುಗಡೆಯಾದ ವಿಕ್ರಾಂತ್ ರೋಣ ಸಿನಿಮಾದಲ್ಲಿ ನಾಯಕಿ ನಟಿಯಾಗಿ ಕಾಣಿಸಿಕೊಂಡಿದ್ದಳು. ಜಾಕ್ವೆಲಿನ್ ಅವರನ್ನು ಕಳೆದ ಜೂನ್ ತಿಂಗಳಲ್ಲಿ ಇಡಿ ಅಧಿಕಾರಿಗಳು ಕೊನೆಯ ಬಾರಿಗೆ ವಿಚಾರಣೆ ನಡೆಸಿದ್ದರು. ಅಲ್ಲದೆ, 7.27 ಕೋಟಿ ರೂ. ಮೌಲ್ಯದ ಜಾಕ್ವೆಲಿನ್ ಆಸ್ತಿಯನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಒಳಗೊಳಿಸಿದ್ದಲ್ಲದೆ, ಇದೀಗ ಚಾರ್ಜ್ ಶೀಟ್ ನಲ್ಲಿ ಆರೋಪಿಯನ್ನಾಗಿ ಗುರುತಿಸಿದೆ.

ಏನಿದು ಸುಕೇಶ್ ಚಂದ್ರಶೇಖರ್ ಪ್ರಕರಣ

Conman Sukesh Chandrashekhar introduced himself as PMO official to extort  money: Report

ಮೂಲತಃ ಬೆಂಗಳೂರಿನ ಸುಕೇಶ್ ಚಂದ್ರಶೇಖರ್ ಚೆನ್ನೈನಲ್ಲಿದ್ದುಕೊಂಡೇ ಹಲವಾರು ಖ್ಯಾತನಾಮರನ್ನು ವಂಚಿಸಿ ನೂರಾರು ಕೋಟಿ ಆಸ್ತಿಯನ್ನು ಮಾಡಿದ್ದಾನೆ. ನೂರಕ್ಕೂ ಹೆಚ್ಚು ಹೈಪ್ರೊಫೈಲ್ ವ್ಯಕ್ತಿಗಳ ಹೆಸರಲ್ಲಿ ಫೋನ್ ಕರೆ ಮಾಡಿ, ವಂಚಿಸಿ ಕೋಟ್ಯಂತರ ಹಣವನ್ನು ಗಳಿಸಿದ್ದ. ಫೋರ್ಟಿಸ್ ಹೆಲ್ತ್ ಕೇರ್ ಕಂಪನಿಯ ಪ್ರಮೋಟರ್ ಶಿವೇಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಅವರಿಗೆ ತಾನು ಕೇಂದ್ರ ಗೃಹ ಇಲಾಖೆಯ ಕಾರ್ಯದರ್ಶಿ ಎಂದು ಹೇಳಿಕೊಂಡು ಅವರಿಗೆ ಸಹಾಯ ಮಾಡುವ ನೆಪದಲ್ಲಿ ಕೋಟ್ಯಂತರ ರೂಪಾಯಿ ಹಣವನ್ನು ಪಡೆದಿದ್ದ. ಈ ಬಗ್ಗೆ ಪ್ರಕರಣ ದಾಖಲಾಗಿ ಪೊಲೀಸರು 2021ರ ಆಗಸ್ಟ್ ತಿಂಗಳಲ್ಲಿ ದೆಹಲಿಯಲ್ಲಿ ಸುಕೇಶನ್ನು ಬಂಧಿಸಿದ್ದರು.

ED's scope of probe under PMLA increased 2.5 times in six years | Business  Standard News

ಈ ನಡುವೆ, ಸುಕೇಶ್ ಚಂದ್ರಶೇಖರ್ ಹಲವು ಬಾಲಿವುಟ್ ನಟ-ನಟಿಯರಿಗೆ ಗಿಫ್ಟ್ ನೀಡಿರುವುದು ತನಿಖೆಯಲ್ಲಿ ತಿಳಿದುಬಂದಿತ್ತು. ಜಾಕ್ವೆಲಿನ್ ಫೆರ್ನಾಂಡಿಸ್ ಜೊತೆಗೆ ನಿಕಟ ಸಂಪರ್ಕ ಇರಿಸಿಕೊಂಡಿದ್ದು ತನಿಖೆಯಲ್ಲಿ ಕಂಡುಬಂದಿದ್ದಲ್ಲದೆ, ಅವರಿಬ್ಬರು ಹತ್ತಿರದ ಸಂಬಂಧ ಇಟ್ಟುಕೊಂಡಿದ್ದೂ ಬೆಳಕಿಗೆ ಬಂದಿತ್ತು. ಅದಕ್ಕೆ ಸಾಕ್ಷಿ ಎನ್ನುವಂತೆ ಸುಕೇಶ್ ಚಂದ್ರಶೇಖರ್ ನನ್ನು ಅಪ್ಪಿಕೊಂಡು ಜಾಕ್ವೆಲಿನ್ ಮುದ್ದಾಡುವ ಫೋಟೋಗಳು ವೈರಲ್ ಆಗಿದ್ದವು. ಹೀಗಾಗಿ ಕಳೆದ ಒಂದು ವರ್ಷದಲ್ಲಿ ಜಾಕ್ವೆಲಿನ್ ಳನ್ನು ಹಲವು ಬಾರಿ ಇಡಿ ಅಧಿಕಾರಿಗಳು ವಿಚಾರಣೆಗೆ ಕರೆದು ಮಾಹಿತಿ ಸಂಗ್ರಹಿಸಿದ್ದರು. ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್ ಸೇರಿದಂತೆ ಆತನ ಪತ್ನಿ ಲೀನಾ ಮರಿಯಾ ಪೌಲ್, ಪಿಂಕಿ ಇರಾನಿ ಸೇರಿ ಹಲವರನ್ನು ಬಂಧನಕ್ಕೊಳಗಾಗಿದ್ದಾರೆ. ಸುಕೇಶ್ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾನೆ. ಈಗಾಗಲೇ ಪ್ರಕರಣದಲ್ಲಿ 200 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಅಕ್ರಮ ಆಗಿರುವುದು ಕಂಡುಬಂದಿದ್ದು, 15ಕ್ಕೂ ಹೆಚ್ಚು ಎಫ್ಐಆರ್ ದಾಖಲಾಗಿದೆ. ಮೂರು ಚಾರ್ಜ್ ಶೀಟ್ ಗಳು ಕೋರ್ಟಿಗೆ ಸಲ್ಲಿಕೆಯಾಗಿವೆ.

Bollywood actor Jacqueline Fernandez has been named as an accused in the Enforcement Directorate's (ED) supplementary charge sheet filed in the Rs 200 crore money laundering case involving conman Sukesh Chandrashekar, claim sources.The ED is likely to file a second supplementary prosecution complaint against the actress before the Patiala House Court on Wednesday. Jacqueline and Nora Fatehi, also a Bollywood actress, have already recorded their statement as witness in the case.