ರಾಯಗಢ ಕಡಲ ತೀರದಲ್ಲಿ ಶಂಕಿತ ಬೋಟ್ ಪತ್ತೆ ; ಉಗ್ರರ ಜಾಡು ಶಂಕೆ, ಮುಂಬೈನಲ್ಲಿ ಹೈ ಎಲರ್ಟ್

18-08-22 03:58 pm       HK News Desk   ದೇಶ - ವಿದೇಶ

ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಸಮುದ್ರ ತೀರದಲ್ಲಿ ಶಂಕಿತ ಬೋಟ್ ಕಂಡುಬಂದಿದ್ದು, ಅದರಲ್ಲಿ ಎಕೆ 47 ರೈಫಲ್ಸ್, ಮದ್ದುಗುಂಡುಗಳು ಹಾಗೂ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ. ಇದರ ಬೆನ್ನಲ್ಲೇ ಮಂಬೈ ನಗರ ಸೇರಿದಂತೆ ಮಹಾರಾಷ್ಟ್ರದಾದ್ಯಂತ ಹೈಎಲರ್ಟ್ ಮಾಡಲಾಗಿದೆ.

ಮುಂಬೈ, ಆಗಸ್ಟ್ 18: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಸಮುದ್ರ ತೀರದಲ್ಲಿ ಶಂಕಿತ ಬೋಟ್ ಕಂಡುಬಂದಿದ್ದು, ಅದರಲ್ಲಿ ಎಕೆ 47 ರೈಫಲ್ಸ್, ಮದ್ದುಗುಂಡುಗಳು ಹಾಗೂ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ. ಇದರ ಬೆನ್ನಲ್ಲೇ ಮಂಬೈ ನಗರ ಸೇರಿದಂತೆ ಮಹಾರಾಷ್ಟ್ರದಾದ್ಯಂತ ಹೈಎಲರ್ಟ್ ಮಾಡಲಾಗಿದೆ.

ರಾಯಗಢ ಜಿಲ್ಲೆಯ ಹರಿಹರೇಶ್ವರ ಎಂಬಲ್ಲಿನ ಸಮುದ್ರ ತೀರದಲ್ಲಿ ಬೋಟ್ ಪತ್ತೆಯಾಗಿದ್ದು, ಉಗ್ರರ ಜಾಡಿನ ಬಗ್ಗೆ ಶಂಕೆ ವ್ಯಕ್ತವಾಗಿದೆ. ರಾಯಗಢ ಎಸ್ಪಿ ಅಶೋಕ್ ಧುಡೆ, ಬೋಟಿನಲ್ಲಿ ಎಕೆ 47 ರೈಫಲ್ ಪತ್ತೆಯಾಗಿರುವುದನ್ನು ದೃಢಪಡಿಸಿದ್ದು, ಬೋಟ್ ಯಾವ ರೀತಿಯದ್ದು ಅನ್ನುವ ಬಗ್ಗೆ ಮಾಹಿತಿ ನೀಡಿಲ್ಲ. ಮುಂಬೈನಿಂದ 200 ಕಿಮೀ ದೂರದಲ್ಲಿ ಬೋಟ್ ಪತ್ತೆಯಾಗಿದ್ದು, ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Maharashtra: Boat with three AK-47 rifles, live bullets found at  Harihareshwar beach in Raigad | Navi Mumbai News - Times of India

ಬೋಟಿನಲ್ಲಿದ್ದ ಬಾಕ್ಸ್ ಒಂದರಲ್ಲಿ ಮೂರು ಎಕೆ 47 ರೈಫಲ್ ಮತ್ತು ಮದ್ದುಗುಂಡುಗಳು ಪತ್ತೆಯಾಗಿವೆ. ಬೋಟ್ ಆಸ್ಟ್ರೇಲಿಯಾ ನಿರ್ಮಿತ ಎನ್ನುವ ಮಾಹಿತಿಗಳಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಟಿಎಸ್ ಮುಖ್ಯಸ್ಥ ವಿನೀತ್ ಅಗರ್ವಾಲ್, ಉಗ್ರರಿಗೆ ಸಂಬಂಧಪಟ್ಟ ಶಸ್ತ್ರಾಸ್ತ್ರಗಳೇ ಅನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಬೋಟ್ ಮೇಲ್ನೋಟಕ್ಕೆ ಒಮಾನಲ್ಲಿ ರಿಜಿಸ್ಟರ್ ಆಗಿರುವಂತೆ ಕಂಡುಬಂದಿದೆ ಎಂದು ತಿಳಿಸಿದ್ದಾರೆ. ಬೋಟ್ ಅನಾಥ ಸ್ಥಿತಿಯಲ್ಲಿ ಕಂಡುಬಂದಿದೆ. ಆದರೆ, ಹೊರ ದೇಶದ ಬೋಟ್ ಆಗಿರುವುದರಿಂದ ಉಗ್ರರ ಕೆಲಸ ಆಗಿರಬಹುದು ಅನ್ನುವ ಶಂಕೆ ಇದೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅಗರ್ವಾಲ್ ತಿಳಿಸಿದ್ದಾರೆ.

Maharashtra police on Thursday found a suspected terror boat near Harihareshwar shore in Raigad district of the state carrying AK 47, some rifles and bullets. Following the recovery, police has issued a “high alert” in the district.SP Raigad Mr Ashok Dhudhe confirmed about AK 47 being found in boat near Harihareshwar beach. The place is about 200 km from Mumbai and 170 km from Pune.