ಕೇರಳದಲ್ಲಿ ರಾಹುಲ್ ಗಾಂಧಿ ಕಚೇರಿ ಮೇಲೆ ಅಟ್ಯಾಕ್ ;  ತಮ್ಮದೇ ಪಕ್ಷದ ಕಾರ್ಯಕರ್ತರಿಂದ ಗಾಂಧಿ ಫೋಟೋ ಧ್ವಂಸ, ನಾಲ್ವರ ಬಂಧನ ! 

19-08-22 09:51 pm       HK News Desk   ದೇಶ - ವಿದೇಶ

ಖುದ್ದು ಕಾಂಗ್ರೆಸ್ಸಿಗರೇ ಗಾಂಧಿಯವರ ಫೋಟೋ ಧ್ವಂಸಗೊಳಿಸಿರುವ ಖುದ್ದು ಸಂಸದ ರಾಹುಲ್​ಗಾಂಧಿ ಪ್ರತಿನಿಧಿಸುತ್ತಿರುವ ಕೇರಳದ ವಯನಾಡಿನಲ್ಲಿ ನಡೆದಿದೆ. 

ಕೇರಳ,ಆಗಸ್ಟ್ 19: ಖುದ್ದು ಕಾಂಗ್ರೆಸ್ಸಿಗರೇ ಗಾಂಧಿಯವರ ಫೋಟೋ ಧ್ವಂಸಗೊಳಿಸಿರುವ ಖುದ್ದು ಸಂಸದ ರಾಹುಲ್​ಗಾಂಧಿ ಪ್ರತಿನಿಧಿಸುತ್ತಿರುವ ಕೇರಳದ ವಯನಾಡಿನಲ್ಲಿ ನಡೆದಿದೆ. 

ಘಟನೆಗೆ ಸಂಬಂಧಿಸಿದಂತೆ ರಾಹುಲ್​ಗಾಂಧಿ ಆಪ್ತ ಸಹಾಯಕ ಸೇರಿದಂತೆ ನಾಲ್ವರನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ.ಆಗಿದ್ದೇನೆಂದರೆ, ರಾಹುಲ್ ಗಾಂಧಿ ಅವರ ಕಚೇರಿಯ ಮೇಲೆ ಇತ್ತೀಚೆಗೆ ಎಸ್‌ಎಫ್‌ಐ ಕಾರ್ಯಕರ್ತರು ದಾಳಿ ನಡೆಸಿದ್ದರು. ಈ ಕ್ಷೇತ್ರದಿಂದ ಗೆಲುವು ಸಾಧಿಸಿ ಸಂಸದರಾದ ಮೇಲೆ ಕ್ಷೇತ್ರದತ್ತ ಗಮನವನ್ನೇ ಹರಿಸುತ್ತಿಲ್ಲ, ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿಲ್ಲ ಎನ್ನುವ ಕಾರಣಕ್ಕೆ ಆಕ್ರೋಶಗೊಂಡಿದ್ದ ಎಸ್‌ಎಫ್‌ಐ ಕಾರ್ಯಕರ್ತರು ಗಲಾಟೆ ನಡೆಸಿದ್ದರು. ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್​ ಕಾರ್ಯಕರ್ತರು ಗಲಾಟೆ ಶುರು ಮಾಡಿದ್ದರು.

Rahul Gandhi office vandalism case: 4 Congress workers arrested |  www.lokmattimes.com

ಇದಾದ ನಂತರ ನೋಡಿದಾಗ ಅಲ್ಲಿರುವ ಪೀಠೋಪಕರಣಗಳು ಧ್ವಂಸಗೊಂಡಿದ್ದವು, ಮಾತ್ರವಲ್ಲದೇ ಗಾಂಧಿಯವರ ಫೋಟೋ ಕೂಡ ಧ್ವಂಸಗೊಂಡಿತ್ತು. ಇದನ್ನು ಮಾಡಿದ್ದು ತಾವೇ ಎಂದು ತಿಳಿದಿದ್ದರೂ ರಾಹುಲ್​ಗಾಂಧಿ ಆಪ್ತ ಸಹಾಯಕ ರತೀಶ್ ಕುಮಾರ್ ಸೇರಿದಂತೆ ಕಾಂಗ್ರೆಸ್​ ಕಾರ್ಯಕರ್ತರು, ಎಸ್​ಎಫ್​ಐ ಕಾರ್ಯಕರ್ತರೇ ಇದನ್ನು ಮಾಡಿರುವುದಾಗಿ ಆರೋಪಿಸಿದರು. ಇದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಗಲಾಟೆ ಶುರುವಾಗಿತ್ತು. ಗಾಂಧಿಯವರ ಫೋಟೋ ತಾವು ಧ್ವಂಸಗೊಳಿಸಲಿಲ್ಲ, ಬದಲಿಗೆ ಕಾಂಗ್ರೆಸ್ಸಿಗರೇ ಮಾಡಿರುವುದಾಗಿ ಎಸ್​ಎಫ್​ಐ ಕಾರ್ಯಕರ್ತರು ತನಿಖೆ ವೇಳೆ ಬಹಿರಂಗಪಡಿಸಿದ್ದಾರೆ. 

 ಪೊಲೀಸರು ಅಲ್ಲಿದ್ದ ಸಿಸಿಟಿವಿ ಪರೀಕ್ಷೆ ಮಾಡಿದಾಗ ಸತ್ಯಾಂಶ ಬಯಲುಗೊಂಡಿದೆ. ಗಾಂಧಿ ಫೋಟೋ ಅನ್ನು ಖುದ್ದು ರಾಹುಲ್​ ಗಾಂಧಿ ಅವರ ಆಪ್ತ ಸಹಾಯಕ ರತೀಶ್ ಕುಮಾರ್ ಸೇರಿದಂತೆ ಕಚೇರಿ ಸಿಬ್ಬಂದಿ ರಾಹುಲ್​​ ಎಸ್. ರವಿ, ಕಾಂಗ್ರೆಸ್ ಕಾರ್ಯಕರ್ತರಾದ ನೌಶಾದ್ ಮತ್ತು ಮುಜೀಬ್​ ಧ್ವಂಸಗೊಳಿಸಿರುವುದು ತಿಳಿದುಬಂದಿದೆ.

Kerala: 4 Congress Workers Arrested For Vandalising Mahatma Gandhi's  Picture In Rahul's Wayanad Office

ಘಟನೆಗೆ ಸಂಬಂಧಿಸಿದಂತೆ ಈ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಖುದ್ದು ಕಾಂಗ್ರೆಸ್ ಕಾರ್ಯಕರ್ತ ರತೀಶ್ ಖುದ್ದಾಗಿ ಸಾಕ್ಷಿ ನುಡಿದಿದ್ದು, ಸತ್ಯಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಿದೆ.

Kerala: 4 including Rahul's staff arrested for vandalizing Mahatma Gandhi's  picture | Dailyindia.net

ಎಸ್​​ಎಫ್​ಐ ಕಾರ್ಯಕರ್ತರು ಕಚೇರಿ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಗಾಂಧಿಯವರ ಭಾವಚಿತ್ರಕ್ಕೆ ಯಾವುದೇ ರೀತಿಯ ಹಾನಿಯಾಗಿರಲಿಲ್ಲ ಎನ್ನುವುದು ವಿಡಿಯೋದಿಂದ ಸ್ಪಷ್ಟವಾಗಿ ಗೋಚರಿಸುತ್ತಿದೆ. ಆದರೆ ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್​​ ಈ ವಿಚಾರವನ್ನಿಟ್ಟುಕೊಂಡು ವ್ಯಾಪಕವಾಗಿ ಪ್ರಚಾರ ಮಾಡಿ ಗಾಂಧಿ ಅವರ ಭಾವಚಿತ್ರಕ್ಕೆ ಎಸ್​​ಎಫ್​ಐ ಹಾನಿ ಉಂಟು ಮಾಡಿದೆ ಎಂದಿತ್ತು. ಆದರೆ ಇದೀಗ ಸತ್ಯ ಸಾಕ್ಷಿ ಸಹಿತ ಬಯಲುಗೊಂಡಿದೆ

Four Congress workers, including Rahul Gandhi's personal assistant in Wayanad Ratheesh, have been arrested by the police in connection with vandalism of Mahatma Gandhi’s photo in Rahul Gandhi's office in June.The grand old party had alleged that the photo was broken when the workers of the Students’ Federation of India, or SFI - the student wing of the Left, vandalized the party office in Wayanad.The Indian Youth Congress, in a tweet back then, had said that “the goons held the flags of SFI” as they scaled the walls of Rahul Gandhi's Wayanad office and vandalised it.