ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ ; ಪ್ರವಾಹ, ಭೂಕುಸಿತಕ್ಕೆ ಸಿಲುಕಿ 22 ಜನರು ಸಾವು, ಹಲವರು ಕೊಚ್ಚಿ ಹೋಗಿರುವ ಶಂಕೆ

21-08-22 12:03 pm       HK News Desk   ದೇಶ - ವಿದೇಶ

ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಗೆ ಭೀಕರ ಪ್ರವಾಹ, ಭೂಕುಸಿತ ಉಂಟಾಗಿದ್ದು, 22 ಜನರು ಸಾವಿಗೀಡಾಗಿದ್ದಾರೆ. ಈ ಪೈಕಿ ಒಂದೇ ಕುಟುಂಬದ ಎಂಟು ಮಂದಿ ಸೇರಿದ್ದಾರೆ.

ನವದೆಹಲಿ, ಆಗಸ್ಟ್ 21: ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಗೆ ಭೀಕರ ಪ್ರವಾಹ, ಭೂಕುಸಿತ ಉಂಟಾಗಿದ್ದು, 22 ಜನರು ಸಾವಿಗೀಡಾಗಿದ್ದಾರೆ. ಈ ಪೈಕಿ ಒಂದೇ ಕುಟುಂಬದ ಎಂಟು ಮಂದಿ ಸೇರಿದ್ದಾರೆ. ಹಲವರು ನಾಪತ್ತೆಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಶುಕ್ರವಾರದಿಂದ ತೊಡಗಿ ಭಾರೀ ಮಳೆಯಾಗುತ್ತಿದ್ದು, ಬೆಟ್ಟ ಪ್ರದೇಶಗಳಲ್ಲಿ ವ್ಯಾಪಕ ಭೂಕುಸಿತ ಉಂಟಾಗಿದೆ.

ಮಾಂಡಿ, ಕಾಂಗ್ರಾ ಮತ್ತು ಚಂಬಾ ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಪ್ರವಾಹ ಮತ್ತು ಭೂಕುಸಿತ ಕಾಣಿಸಿಕೊಂಡಿದೆ. ರಸ್ತೆಗಳಲ್ಲಿ ಸಾಗುತ್ತಿದ್ದ ವಾಹನಗಳ ಮೇಲೆ ಬೆಟ್ಟಗಳು ಕುಸಿದಿದ್ದು, ವಾಹನಗಳಲ್ಲಿದ್ದವರು ಸಾವಿಗೀಡಾಗಿದ್ದಾರೆ. ಮಾಂಡಿಯಿಂದ ಸಾಗುವ ಮನಾಲಿ- ಚಂಡೀಗಢ ರಾಷ್ಟ್ರೀಯ ಹೆದ್ದಾರಿ ಮತ್ತು ಶಿಮ್ಲಾ- ಚಂಡೀಗಢ ರಾಷ್ಟ್ರೀಯ ಹೆದ್ದಾರಿ ಶೋಘಿ ಎಂಬಲ್ಲಿ ಕುಸಿತಕ್ಕೊಳಗಾಗಿದ್ದು ಸಂಚಾರ ಬಂದ್ ಮಾಡಲಾಗಿದೆ.

Himachal Pradesh Rains: 22 Killed, 6 Missing in Flash Floods, Landslides; Rly  Bridge Washes Away

Himachal Pradesh: 22 dead in flash floods, landslides - India News

19 people killed, 6 missing due to flash floods and landslides in Himachal  - in.gacialisdtiyk.com

Himachal Pradesh: 22 dead, five missing in flash floods, landslides - LIVE  - GONEWSON

ಮಾಂಡಿ ಜಿಲ್ಲೆ ಒಂದರಲ್ಲೇ 13 ಮಂದಿ ಸಾವೀಗೀಡಾಗಿದ್ದು, ಆರು ಮಂದಿ ನಾಪತ್ತೆಯಾಗಿದ್ದಾರೆ. ಪ್ರವಾಹದಲ್ಲಿ ಸಿಲುಕಿ ನಾಪತ್ತೆಯಾದವರು ಸಾವಿಗೀಡಾದ ಶಂಕೆಯಿದೆ ಎಂದು ಜಿಲ್ಲಾಧಿಕಾರಿ ಅರಿಂಧಮ್ ಚೌಧರಿ ತಿಳಿಸಿದ್ದಾರೆ. ಎಸ್ ಡಿ ಆರ್ ಎಫ್ ಮತ್ತು ಎನ್ ಡಿಆರ್ ಎಫ್ ಪಡೆಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಪ್ರವಾಹದಲ್ಲಿ ಸಿಕ್ಕಿಬಿದ್ದ ಜನರನ್ನು ಸ್ಥಳಾಂತರ ಕಾರ್ಯ ಮಾಡುತ್ತಿದೆ. ಕಾಂಗ್ರಾ ಜಿಲ್ಲೆಯಲ್ಲಿ ಹಾದು ಹೋಗುವ ಚಕ್ಕಿ ಹೊಳೆಯ ಸೇತುವೆ ಶನಿವಾರ ಕುಸಿದು ಬಿದ್ದಿದ್ದು, ಅಲ್ಲಿನ ರಸ್ತೆ ಸಂಚಾರ ಬಂದ್ ಮಾಡಲಾಗಿದೆ. ಇದರ ವಿಡಿಯೋವನ್ನು ಎಎನ್ಐ ಟ್ವೀಟ್ ಮಾಡಿದೆ.

Himachal Pradesh Rains: 22 Killed, 6 Missing in Flash Floods, Landslides; Rly  Bridge Washes Away

Monsoon Fury 31 Killed Across Four States Himachal Uttarakhand On Alert  After Major Landslides Floods

22 killed, several injured due to rain-triggered landslides in Himachal  Pradesh

6 Killed, 13 Feared Dead In Separate Incidents Of Flash Flood, Landslide In  Himachal Pradesh

ಹಿಮಾಚಲ ಪ್ರದೇಶದಲ್ಲಿ ಇನ್ನೂ ಐದು ದಿನಗಳ ಕಾಲ ಆಗಸ್ಟ್ 24ರ ವರೆಗೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಆರೆಂಜ್ ಅಲರ್ಟ್ ನೀಡಲಾಗಿದ್ದು, ಹಿಮಾಚಲ ಪ್ರದೇಶಕ್ಕೆ ಪ್ರವಾಸ ಹೋಗುವುದನ್ನು ನಿಷೇಧ ಮಾಡಲಾಗಿದೆ. ಚಂಬಾ ಜಿಲ್ಲೆಯ ಚೊವಾರಿ ಎಂಬ ಗ್ರಾಮದಲ್ಲಿ ಮನೆಯೊಂದು ರಾತ್ರಿ ವೇಳೆ ಕುಸಿದು ಬಿದ್ದು ಅದರಲ್ಲಿದ್ದ ಮೂವರು ಸಾವಿಗೀಡಾಗಿದ್ದಾರೆ. ಬಾಘಿ ಮತ್ತು ಓಲ್ಡ್ ಕಟೋಲಾ ಪ್ರದೇಶದಲ್ಲಿ ಮೇಘ ಸ್ಫೋಟ ಉಂಟಾಗಿದ್ದು, ಹಲವರು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಆರು ಮಂದಿಯ ಕುಟುಂಬದ ಬಾಲಕಿಯೊಬ್ಬಳ ಶವ ಅರ್ಧ ಕಿಮೀ ದೂರದಲ್ಲಿ ಪತ್ತೆಯಾಗಿದ್ದರೆ, ಐವರು ನಾಪತ್ತೆಯಾಗಿದ್ದಾರೆ. ದಿಢೀರ್ ಮಳೆಯಿಂದಾಗಿ ಮಾಂಡಿ ಜಿಲ್ಲೆಯಲ್ಲಿ ಹಲವು ಗ್ರಾಮಗಳು ಜಲಾವೃತ ಆಗಿದ್ದು, ಮನೆಗಳಿಗೆ ನೀರು ನುಗ್ಗಿ ಜನರು ಸಿಕ್ಕಿಬಿದ್ದಿದ್ದಾರೆಂಬ ಮಾಹಿತಿಗಳಿವೆ. 

Twenty-two people, including eight members of a family, were killed and six feared dead in incidents of landslide and flash flood triggered by heavy rainfall in Himachal Pradesh since Friday, officials said.Ten people were injured, state Disaster Management Department Director Sudesh Kumar Mokhta said on Saturday. The maximum damage has been reported from Mandi, Kangra and Chamba districts, he said, adding that so far 36 weather-related incidents have been reported from the state.