ಬಿಜೆಪಿ ನಾಯಕಿ, ಬಿಗ್ ಬಾಸ್ ಮಾಜಿ ಸ್ಪರ್ಧಿ ಸೋನಾಲಿ ಪೋಗಾಟ್ ಹೃದಯಾಘಾತದಿಂದ ಸಾವು ! 

23-08-22 03:06 pm       HK News Desk   ದೇಶ - ವಿದೇಶ

ಬಿಜೆಪಿ ನಾಯಕಿ, ಟಿಕ್ ಟಾಕ್ ಸ್ಟಾರ್, ಬಿಗ್ ಬಾಸ್ ಮಾಜಿ ಸ್ಪರ್ಧಿ ಹರ್ಯಾಣದ ಸೋನಾಲಿ ಪೋಗಾಟ್ (42) ಮಂಗಳವಾರ ಗೋವಾದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 

ನವದೆಹಲಿ,ಆಗಸ್ಟ್ 23: ಬಿಜೆಪಿ ನಾಯಕಿ, ಟಿಕ್ ಟಾಕ್ ಸ್ಟಾರ್, ಬಿಗ್ ಬಾಸ್ ಮಾಜಿ ಸ್ಪರ್ಧಿ ಹರ್ಯಾಣದ ಸೋನಾಲಿ ಪೋಗಾಟ್ (42) ಮಂಗಳವಾರ ಗೋವಾದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 

ವರದಿಯ ಪ್ರಕಾರ, ಸೋನಾಲಿ ಪೋಗಾಟ್ ಜನಪ್ರಿಯ ಟಿಕ್ ಟಾಕ್ ಸ್ಟಾರ್ ಆಗಿದ್ದು, ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ವರದಿ ಹೇಳಿದೆ. ತೀವ್ರವಾಗಿ ನಿತ್ರಾಣಗೊಂಡಿದ್ದ ಸೋನಾಲಿ ಅವರನ್ನು ಸೋಮವಾರ ರಾತ್ರಿ ಉತ್ತರ ಗೋವಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

Haryana Chief Minister Manohar Lal Khattar Praises Neeraj Chopra: He Made  Haryana Proud

ಆದರೆ ಆಕೆ ಆಸ್ಪತ್ರೆಗೆ ತರುವ ಮೊದಲೇ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿರುವುದಾಗಿ ಡೆಪ್ಯುಟಿ ಪೊಲೀಸ್ ವರಿಷ್ಠಾಧಿಕಾರಿ ಜಿವ್ಬಾ ದಳ್ವಿ ತಿಳಿಸಿದ್ದಾರೆ. ಗೋವಾ ಮೆಡಿಕಲ್ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಸೋನಾಲಿ ಪೋಗಾಟ್ ನಿಧನಕ್ಕೆ ಹರ್ಯಾಣ ಮುಖ್ಯಮಂತ್ರಿ ಎಂಎಲ್ ಖಟ್ಟರ್ ಸಂತಾಪ ವ್ಯಕ್ತಪಡಿಸಿದ್ದಾರೆ. 

ಕೊನೇ ಇನ್ಸ್ಟಾ ಪೋಸ್ಟ್

ಸಾಯುವ ಕೆಲವೇ ಗಂಟೆಗಳ ಮೊದಲು, ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಿಂದ ಪಿಂಕ್  ಪೇಟ ಧರಿಸಿ ಮೊಹಮ್ಮದ್ ರಫಿ ಅವರ ಹಾಡು ‘ರೂಖ್ ಸೆ ಜರಾ ನಿಕಾಬ್ ತೋ ಹಟಾ ದೋ ಮೇರೆ ಹಜೂರ್…’ ಹಿನ್ನೆಲೆಯಲ್ಲಿ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಅದೇ ಉಡುಪಿನಲ್ಲಿ ತನ್ನ ಟ್ವಿಟರ್ ಪ್ರೊಫೈಲ್ ಚಿತ್ರವನ್ನು ಕೂಡ ಅವರು ಬದಲಿಸಿದ್ದರು.

BJP leader and TikTok celebrity Sonali Phogat dies at 42

ಜೂನ್ 2020 ರಲ್ಲಿ ಬಾಲ್ಸಾಮಂಡ್ ಮಾರುಕಟ್ಟೆ ಕಾರ್ಯದರ್ಶಿ ಸುಲ್ತಾನ್ ಸಿಂಗ್ ಅವರ ಸದಸ್ಯನನ್ನು ಥಳಿಸಿದಾಗ ಸೋನಾಲಿ ಫೋಗಟ್ ಒಮ್ಮೆ ಭಾರಿ ವಿವಾದಕ್ಕೆ ಸಿಲುಕಿದ್ದರು. ಆತ ತನ್ನನ್ನು ನಿಂದಿಸಿದ್ದಾನೆ  ಎಂದು ಆರೋಪಿಸಿ ಸೋನಾಲಿ ಚಪ್ಪಲಿಯಿಂದ ಥಳಿಸಿದ್ದಾರೆ ಎಂದು ವರದಿಯಾಗಿದೆ. ಘಟನೆಯ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸೋನಾಲಿ ಮತ್ತು ಹಾಗೂ ಕಾರ್ಯದರ್ಶಿ ಇಬ್ಬರೂ ಪರಸ್ಪರ ದೂರು ದಾಖಲಿಸಿಕೊಂಡಿದ್ದರು.

Sonali Phogat, a Bharatiya Janata Party (BJP) leader from Haryana and an ex-Bigg Boss contestant, died due to a heart attack aged 42 in Goa, police said on Tuesday (August 23, 2022). Sonali Phogat, who was also a huge TikTok star, complained of uneasiness while she was at 'Curlies' restaurant in Anjuna from where she was taken to the hospital, Goa Director General of Police Jaspal Singh told news agency PTI. "There are no external injury marks on the body," Singh was quoted as saying by PTI. There is no foul play in the case, he said, and added that the postmortem report will reveal the exact cause of the death.