ಕೇವಲ 9 ಸೆಕೆಂಡ್ ನಲ್ಲಿ 40 ಮಹಡಿಯ ದೇಶದ ಅತಿದೊಡ್ಡ ಅವಳಿ ಕಟ್ಟಡ ಉಡೀಸ್ !! ಕ್ಷಣಕಾಲ ಕಂಪಿಸಿದ ನೋಯ್ಡಾ ನಗರ, ಕುಸಿದು ಬೀಳುವ ವಿಡಿಯೋ ವೈರಲ್ ! 

28-08-22 05:06 pm       HK News Desk   ದೇಶ - ವಿದೇಶ

ಭಾರೀ ಕುತೂಹಲ ಕೆರಳಿಸಿದ್ದ ನೋಯ್ಡಾ ನಗರದ ದೇಶದ ಅತಿ ಎತ್ತರದ ಅವಳಿ ಕಟ್ಟಡಗಳ ನೆಲಸಮ ಕಾರ್ಯಾಚರಣೆ ಭಾನುವಾರ ನಡೆದಿದೆ. 100 ಮೀಟರ್ ಎತ್ತರದ ಎರಡು ಬೃಹತ್ ಕಟ್ಟಡಗಳನ್ನು 9 ಸೆಕೆಂಡುಗಳಲ್ಲಿ ನೋಡ ನೋಡುತ್ತಿದ್ದಂತೆ ಸ್ಫೋಟಿಸಿ.

ನವದೆಹಲಿ, ಆಗಸ್ಟ್ 28 : ಭಾರೀ ಕುತೂಹಲ ಕೆರಳಿಸಿದ್ದ ನೋಯ್ಡಾ ನಗರದ ದೇಶದ ಅತಿ ಎತ್ತರದ ಅವಳಿ ಕಟ್ಟಡಗಳ ನೆಲಸಮ ಕಾರ್ಯಾಚರಣೆ ಭಾನುವಾರ ನಡೆದಿದೆ. 100 ಮೀಟರ್ ಎತ್ತರದ ಎರಡು ಬೃಹತ್ ಕಟ್ಟಡಗಳನ್ನು 9 ಸೆಕೆಂಡುಗಳಲ್ಲಿ ನೋಡ ನೋಡುತ್ತಿದ್ದಂತೆ ಸ್ಫೋಟಿಸಿ.  ನೆಲಸಮ ಮಾಡಲಾಗಿದೆ. ಇದರೊಂದಿಗೆ ಕಟ್ಟಡ ನಿರ್ಮಾಣಕಾರರ ಭ್ರಷ್ಟಾಚಾರಗಳು, ಅಕ್ರಮಗಳನ್ನು ನಡೆಸುವ ರಿಯಲ್ ಎಸ್ಟೇಟ್ ಕಂಪೆನಿಗಳು ಹಾಗೂ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಕಡೆಯಿಂದ ಸ್ಪಷ್ಟ ಸಂದೇಶ ರವಾನೆಯಾದಂತಾಗಿದೆ.

ಮೊದಲೇ ನಿಗದಿಪಡಿಸಿದ್ದಂತೆ ಭಾನುವಾರ ಮಧ್ಯಾಹ್ನ 2.30ಕ್ಕೆ ಅವಳಿ ಕಟ್ಟಡಗಳಲ್ಲಿನ ಅಂತಸ್ತುಗಳ ಪಿಲ್ಲರ್‌ಗಳಲ್ಲಿ ಹುದುಗಿಸಿದ್ದ ಸ್ಫೋಟಕಗಳು ಒಮ್ಮೆಗೆ ಸ್ಫೋಟಿಸಿವೆ. ಇದರಿಂದ ಭಾರಿ ಪ್ರಮಾಣದ ಧೂಳನ್ನು ಎಬ್ಬಿಸುತ್ತಾ ಸೂಪರ್ ಟೆಕ್ ಕಂಪನಿಗೆ ಸೇರಿದ್ದ ಎರಡೂ ಕಟ್ಟಡಗಳು ನೆಲಕ್ಕುರುಳಿವೆ. 

ಎರಡೂ ಕಟ್ಟಡಗಳು ಏಕಕಾಲಕ್ಕೆ ಸ್ಫೋಟಗೊಂಡು, ನಿಂತ ಜಾಗದಲ್ಲಿಯೇ ಪುಡಿ ಪುಡಿಯಾಗಿ ಕುಸಿದು ಬೀಳುವ ದೃಶ್ಯ ಜಾಲತಾಣದಲ್ಲಿ ವೈರಲ್ ಆಗಿದೆ. ಕಟ್ಟಡ ಸ್ಫೋಟ ಆಗುವುದಕ್ಕೂ ಮುನ್ನ ಆಸುಪಾಸಿನಲ್ಲಿ ಜನರನ್ನು ತೆರವು ಮಾಡಲಾಗಿತ್ತು. ‌ಭಾನುವಾರ ಬೆಳಗ್ಗಿನಿಂದಲೇ ವಾಹನ, ಜನರನ್ನು ನಿಷೇಧಿಸಿ ಪೊಲೀಸರು ಕ್ರಮ ಕೈಗೊಂಡಿದ್ದರು. ಕಟ್ಟಡಗಳು ಬೀಳುವಾಗ ವಾಲಿದ್ದರೆ ಅಕ್ಕಪಕ್ಕದ ಕಟ್ಟಡಗಳಿಗೆ ಭಾರಿ ಹಾನಿಯಾಗುವ ಅಪಾಯವಿದ್ದರಿಂದ ಲಂಬವಾಗಿ ಕಟ್ಟಡ ಕುಸಿಯುವಂತೆ ತಂತ್ರಜ್ಞಾನ ರೂಪಿಸಲಾಗಿತ್ತು. 

ನೋಯ್ಡಾದ ಸೆಕ್ಟರ್ 93 ಬಿಯಲ್ಲಿನ ಕಟ್ಟಡಗಳ ನೆಲಸಮದಿಂದ ಸಿಮೆಂಟ್ ಮತ್ತು ಮಣ್ಣು ಮಿಶ್ರಿತ ದಟ್ಟವಾದ ಧೂಳು ಎದ್ದಿದ್ದು ಹಲವು ಕಿಲೋಮೀಟರ್‌ಗಳ ವರೆಗೂ ಹರಡಿದೆ. ಇದರಿಂದ ನೋಯ್ಡಾದಲ್ಲಿ ವಾಯುಮಾಲಿನ್ಯವು ಅಪಾಯಕಾರಿ ಮಟ್ಟಕ್ಕೆ ತಲುಪಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ಸ್ಫೋಟದ ತೀವ್ರತೆಗೆ ಹಲವು ಮೀಟರ್‌ಗಳಷ್ಟು ದೂರದ ವರೆಗೂ ಭೂಕಂಪನದ ರೀತಿ ನೆಲ ಕಂಪಿಸಿದೆ. ಅಕ್ಕಪಕ್ಕದ ಕಟ್ಟಡಗಳಿಗೆ ಹಾನಿ ಉಂಟಾಗದಂತೆ ಸೂಕ್ತ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿತ್ತು. ಕಟ್ಟಡಗಳು ಧ್ವಂಸವಾಗುತ್ತಿದ್ದಂತೆಯೇ ನೆರೆದಿದ್ದ ಜನಸಮೂಹ ಹರ್ಷೋದ್ಗಾರ ಮಾಡಿತು. ನಿಯಮ ಉಲ್ಲಂಘಿಸಿ ಕಟ್ಟಿದ ಕಟ್ಟಡಗಳನ್ನು ತೆರವುಗೊಳಿಸಲು ದಶಕದವರೆಗೂ ಹೋರಾಟ ನಡೆಸಿದ್ದ ನಿವಾಸಿಗಳಿಗೆ ಇದು ಖುಷಿ ನೀಡಿದೆ.

ಅವಳಿ ಕಟ್ಟಡದಲ್ಲಿ ಒಟ್ಟು 915 ಫ್ಲಾಟ್ ಗಳಿದ್ದವು. 633  ಫ್ಲಾಟ್ ಬುಕ್ ಆಗಿದ್ದು ಸೂಪರ್ ಟೆಕ್ ಕಂಪನಿ ಆರಂಭಿಕವಾಗಿ 180 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಕಟ್ಟಡ ಉರುಳಿಸಿದ ಬಳಿಕ ನೋಯ್ಡಾ ಅಧಿಕಾರಿಗಳಿಗೆ ಅದರ ಅವಶೇಷಗಳನ್ನು ತೆರವುಗೊಳಿಸುವುದು ಸವಾಲಾಗಿದೆ. ಬೆಟ್ಟದಷ್ಟು ಪ್ರಮಾಣದ ಸಿಮೆಂಟ್, ಕಲ್ಲು, ಕಬ್ಬಿಣ ಸೇರಿ ಸುಮಾರು 55,000 ಟನ್ ಅವಶೇಷ ಉಂಟಾಗಲಿದೆ ಎಂದು ಅಂದಾಜಿಸಲಾಗಿದೆ. ಕಟ್ಟಡ ನಾಶದಿಂದ ಸೂಪರ್ ಟೆಕ್ ಕಂಪನಿಗೆ ಅಂದಾಜು 900 ಕೋಟಿ ನಷ್ಟವಾಗಲಿದೆ.

Noida Twin Tower Demolition Today The Supertech's illegal twin towers in Uttar Pradesh's Noida -have been demolished. The 100-metre-tall structures were reduced to dust within seconds. According to the demolition firm Edifice Engineering, over 3,500 kg of explosives were used to raze the twin towers. Over 5,000 people from Emerald Court and ATS Village societies were evacuated as the impact of the demolition was likely to be maximum in and around these areas.