ವಿಶ್ವದ 3ನೇ ಸಿರಿವಂತ ಗೌತಮ್ ಅದಾನಿ ; ಕೆಲವೇ ವರ್ಷಗಳಲ್ಲಿ ಟಾಟಾ, ಅಂಬಾನಿ ಹಿಂದಿಕ್ಕಿ ಜಗತ್ತಿನೆತ್ತರಕ್ಕೆ ಏರಿದ ಅದಾನಿ ಗ್ರೂಪ್ ! 

30-08-22 02:01 pm       HK News Desk   ದೇಶ - ವಿದೇಶ

ಭಾರತದ ಖ್ಯಾತ ಉದ್ಯಮಿ ಹಾಗೂ ಅದಾನಿ ಗ್ರೂಪ್​ ಅಧ್ಯಕ್ಷ ಗೌತಮ್ ಅದಾನಿ ವಿಶ್ವದ ಮೂರನೇ ಅತಿದೊಡ್ಡ ಶ್ರೀಮಂತನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮುಂಬೈ, ಆಗಸ್ಟ್ 30: ಭಾರತದ ಖ್ಯಾತ ಉದ್ಯಮಿ ಹಾಗೂ ಅದಾನಿ ಗ್ರೂಪ್​ ಅಧ್ಯಕ್ಷ ಗೌತಮ್ ಅದಾನಿ ವಿಶ್ವದ ಮೂರನೇ ಅತಿದೊಡ್ಡ ಶ್ರೀಮಂತನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

‘ಬ್ಲೂಮ್​ಬರ್ಗ್​ ಬಿಲೇನಿಯರ್ಸ್​ ಇಂಡೆಕ್ಸ್​’ ಎಂಬ ಸಂಸ್ಥೆಯು ವಿಶ್ವದ ಸಿರಿವಂತರ ಪಟ್ಟಿ ಬಿಡುಗಡೆ ಮಾಡಿದ್ದು ಫ್ರಾನ್ಸ್​ ಉದ್ಯಮಿ ಬರ್ನಾರ್ಡ್ ಅರ್ನೌಲ್ಟ್​ ಅವರನ್ನು ಹಿಂದಿಕ್ಕಿ ಅದಾನಿ ಮೂರನೇ ಸ್ಥಾನಕ್ಕೇರಿದ್ದಾರೆಂದು ಹೇಳಿದೆ. ಅದಾನಿ ಅವರ ಒಟ್ಟು ಸಂಪತ್ತು 137.4 ಶತಕೋಟಿ ಅಮೆರಿಕನ್ ಡಾಲರ್​ ಮೌಲ್ಯ ತಲುಪಿದೆ. ಇದು ಅರ್ನೌಲ್ಟ್​ ಕಂಪನಿಯ ಅಧ್ಯಕ್ಷ ಲೂಯಿಸ್ ವುಟ್ಟನ್ ಅವರ ಸಂಪತ್ತಿಗಿಂತಲು ಹೆಚ್ಚು. ಅದಾನಿ ಅವರು ಟೆಸ್ಲಾ ಕಂಪನಿಯ ಎಲಾನ್ ಮಸ್ಕ್ ಮತ್ತು ಅಮೆಜಾನ್​ನ ಜೆಫ್ ಬೆಜೋಸ್​ ಅವರ ನಂತರದ ಸ್ಥಾನದಲ್ಲಿದ್ದಾರೆ. 

Why Mukesh Ambani's Companies Are Faltering On Corporate Governance To  Attract SEBI's Ire

What Jack Ma's increasing public appearances tell about China's changing  stance on businesses

ವಿಶ್ವದ ಅತಿ ಶ್ರೀಮಂತರ ಪಟ್ಟಿಯಲ್ಲಿ ಏಷ್ಯಾದ ಉದ್ಯಮಿ ಸ್ಥಾನ ಪಡೆದಿರುವುದು ಇದೇ ಮೊದಲು. ರಿಲಯನ್ಸ್​ನ ಮುಕೇಶ್​ ಅಂಬಾನಿ, ಚೀನಾದ ಜ್ಯಾಕ್ ಮಾ ಸಹ ಈ ಹಂತಕ್ಕೆ ತಲುಪಿರಲಿಲ್ಲ. ಈ ಪಟ್ಟಿಯಲ್ಲಿ ಅದಾನಿ ಅವರು 11ನೇ ಸ್ಥಾನದಲ್ಲಿದ್ದಾರೆ. ಅವರ ಸಂಪತ್ತಿನ ಒಟ್ಟು ಮೌಲ್ಯವು 91.9 ಅಮೆರಿಕನ್ ಡಾಲರ್ ಇದೆ. ಈ ಸೂಚ್ಯಂಕವು ಪ್ರತಿದಿನ ಏರಿಳಿತ ಆಗುತ್ತಿದ್ದು ಅದರ ಆಧಾರದಲ್ಲಿ ಸಂಸ್ಥೆಯು ಪ್ರತಿದಿನ ವಿಶ್ವದ ಅತಿ ಶ್ರೀಮಂತ ವ್ಯಕ್ತಿಗಳನ್ನು ಘೋಷಿಸುತ್ತದೆ. ಪ್ರತಿ ಶತ ಕೋಟ್ಯಾಧೀಶರ ವ್ಯಕ್ತಿಚಿತ್ರಕ್ಕಾಗಿ ರೂಪಿಸಿರುವ ವಿಶೇಷ ವೆಬ್​ಪುಟಗಳಲ್ಲಿ ಮಾಹಿತಿಯನ್ನು ಅಪ್​ಡೇಟ್ ಮಾಡಲಾಗುತ್ತದೆ. 

Elon Musk and Neuralink Exec Had Twins Via IVF, No Romance: Report

Jeff Bezos Biography - How He Started Amazon and More

ಎಲಾನ್ ಮಸ್ಕ್ ಹಾಗೂ ಜೆಫ್​ ಬಿಜೋಸ್ ಅವರ ನಿವ್ವಳ ಸಂಪತ್ತು ಪ್ರಸ್ತುತ ಕ್ರಮವಾಗಿ 251 ಶತಕೋಟಿ ಡಾಲರ್ ಹಾಗೂ 153 ಶತಕೋಟಿ ಡಾಲರ್ ಇದೆ. ಅದಾನಿ ಗ್ರೂಪ್ ಹಲವು ವರ್ಷಗಳಿಂದ ಕಲ್ಲಿದ್ದಲು ಹಾಗೂ ಬಂದರು ವಲಯದಲ್ಲಿ ಕಾರ್ಯಪ್ರವೃತ್ತವಾಗಿತ್ತು. ಕಳೆದ ಕೆಲ ವರ್ಷಗಳಲ್ಲಿ ದತ್ತಾಂಶ ವಿಶ್ಲೇಷಣೆ, ಮಾಧ್ಯಮ ಮತ್ತು ಅಲ್ಯುಮಿನಿಯಂ ಸೇರಿದಂತೆ ಹಲವು ವಲಯಗಳಿಗೆ ವಹಿವಾಟು ವಿಸ್ತರಿಸಿತ್ತು. ಪ್ರಸ್ತುತ ಅದಾನಿ ಸಮೂಹವು ಭಾರತದಲ್ಲಿ ಖಾಸಗಿ ವಲಯದ ಅತಿದೊಡ್ಡ ಬಂದರು ಹಾಗೂ ವಿಮಾನ ನಿಲ್ದಾಣ ನಿರ್ವಹಣೆ ಕಂಪನಿಯಾಗಿದೆ. 

ಹಾಗೆಂದು ಅದಾನಿ ಸಮೂಹದ ಕಾರ್ಯ ನಿರ್ವಹಣೆಯಲ್ಲಿ ಎಲ್ಲವೂ ಸರಿಯಾಗಿದೆ ಎಂದೇನಿಲ್ಲ. ಅದಾನಿ ಗ್ರೂಪ್​ ಈಗಾಗಲೇ ಬಹುದೊಡ್ಡ ಪ್ರಮಾಣದಲ್ಲಿ ಸಾಲ ಮಾಡಿದೆ. ತುಸು ಹೆಚ್ಚು ಕಡಿಮೆಯಾದರೂ ಅದಾನಿ ಗ್ರೂಪ್​ ಸಾಲ ಮರುಪಾವತಿಗೆ ವಿಫಲವಾಗಬಹುದು ಎಂದು ಫಿಚ್​ ಗ್ರೂಪ್​ ಎಚ್ಚರಿಕೆ ನೀಡಿತ್ತು. ಅದಾನಿ ಗ್ರೂಪ್​ ಕಂಪನಿಯ ಷೇರುಗಳ ಮೌಲ್ಯವೂ ಸಹ ಅಸಹಜವಾಗಿ ಏರಿಕೆ ಕಂಡಿದೆ. 2020ರಿಂದೀಚೆಗೆ ಅದಾನಿ ಸಮೂಹದ ಷೇರುಗಳ ಮೌಲ್ಯ 1,000 ಪಟ್ಟು ಹೆಚ್ಚಾಗಿದೆ. ಆದಾಯದ 750 ಹೆಚ್ಚಿನ ಮೊತ್ತಕ್ಕೆ ಕಂಪನಿಯ ಮೌಲ್ಯ ಹೆಚ್ಚಾಗಿದೆ. 

Reliance Industries - Wikipedia

A brief history of the Tata Group - iPleaders

ಭಾರತದಲ್ಲಿ ರಿಲಯನ್ಸ್ ಮತ್ತು ಟಾಟಾ ಗ್ರೂಪ್​ನ ನಂತರದ ಸ್ಥಾನದಲ್ಲಿ ಅದಾನಿ ಸಮೂಹವು ಷೇರುಪೇಟೆಯಲ್ಲಿ ಪಾಲು ಪಡೆದಿದೆ. ಮುಂದಿನ ದಿನಗಳಲ್ಲಿ ಟೆಲಿಕಾಂ, ಹೈಡ್ರೊಜನ್ ಮತ್ತು ವಿಮಾನ ನಿಲ್ದಾಣ ಕಾರ್ಯಾಚರಣೆಗಳ ಮೂಲಕ ಹೆಚ್ಚಿನ ಆದಾಯ ಗಳಿಸಲು ಅದಾನಿ ಗ್ರೂಪ್ ಯೋಜನೆ ರೂಪಿಸಿಕೊಂಡಿದೆ. ಅದಾನಿ ಎಂಟರ್​ಪ್ರೈಸಸ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಪೋರ್ಟ್ಸ್ ಮತ್ತು ವಿಶೇಷ ಆರ್ಥಿಕ ವಲಯ, ಅದಾನಿ ಪವರ್, ಅದಾನಿ ಟೋಟಲ್ ಗ್ಯಾಸ್ ಹಾಗೂ ಅದಾನಿ ಟ್ರಾನ್ಸ್​ಮಿಷನ್ ಕಂಪನಿಗಳು ಭಾರತದ ಷೇರುಪೇಟೆಯಲ್ಲಿ ವಹಿವಾಟು ನಡೆಸುತ್ತಿವೆ.

Gautam Adani has now become the world’s third-richest person. It’s the first time an Asian has broken into the top-3 of the Bloomberg Billionaires Index, with a net worth of $137.4 billion. He is now just behind Elon Musk and Jeff Bezos in the global ranking.