ಅಫ್ಘಾನಿಸ್ತಾನದ ಮಸೀದಿಯಲ್ಲಿ ಸ್ಫೋಟ ; 18 ಮಂದಿ ಸಾವು

02-09-22 09:48 pm       HK News Desk   ದೇಶ - ವಿದೇಶ

ಪಶ್ಚಿಮ ಅಫ್ಘಾನ್ ನಗರದ ಹೆರಾತ್‌ನಲ್ಲಿರುವ ಮಸೀದಿಯಲ್ಲಿ ಶುಕ್ರವಾರ ಸ್ಫೋಟ ಸಂಭವಿಸಿದ್ದು, 18 ಜನರು ಸಾವನ್ನಪ್ಪಿದ್ದಾರೆ. 

ಕಾಬೂಲ್‌, ಸೆ.2: ಪಶ್ಚಿಮ ಅಫ್ಘಾನ್ ನಗರದ ಹೆರಾತ್‌ನಲ್ಲಿರುವ ಮಸೀದಿಯಲ್ಲಿ ಶುಕ್ರವಾರ ಸ್ಫೋಟ ಸಂಭವಿಸಿದ್ದು, 18 ಜನರು ಸಾವನ್ನಪ್ಪಿದ್ದಾರೆ. 

ಶುಕ್ರವಾರ ಮಧ್ಯಾಹ್ನದ ಪ್ರಾರ್ಥನೆಯ ಸಮಯದಲ್ಲಿ ಹೆರಾತ್‌ನ ಗುಜರ್ಗಾ ಮಸೀದಿಯಲ್ಲಿ ಸ್ಫೋಟ ಸಂಭವಿಸಿದೆ. ಇಂದು ಮುಸ್ಲಿಂ ಧಾರ್ಮಿಕ ವಾರದ ಪ್ರಮುಖ ದಿನವಾಗಿದ್ದು, ಮಸೀದಿಯಲ್ಲಿ ವಿಶೇಷ ಜನಸಂದಣಿಯಿತ್ತು.

Afghan mosque blast kills 18, including senior cleric, 21 wounded

ಶುಕ್ರವಾರ ಪ್ರಾರ್ಥನೆಗೂ ಕೊಂಚ ಮುನ್ನ ಸಂಭವಿಸಿದ ಈ ಭೀಕರ ಸ್ಫೋಟದಲ್ಲಿ ಕನಿಷ್ಠ 18 ಜನರು ಬಲಿಯಾಗಿದ್ದು, ಸುಮಾರು 23 ಮಂದಿ ಗಾಯಗೊಂಡಿದ್ದಾರೆ ಎಂದು ಹೆರಾತ್ ಪ್ರಾಂತ್ಯದ ಗವರ್ನರ್ ಅವರ ವಕ್ತಾರ ಹಮೀದುಲ್ಲಾ ಮೊಟವಾಕೆಲ್ ತಿಳಿಸಿದ್ದಾರೆ. ಮೃತರಲ್ಲಿ ಮಸೀದಿಯ ಇಮಾಮ್ ಮುಜೀಬ್ ಉರ್ ರಮಹಾನ್ ಅನ್ಸಾರಿ ಸೇರಿರುವುದನ್ನು ಸರ್ಕಾರದ ವಕ್ತಾರ ಜಬೀಹುಲ್ಲಾ ಮುಜಾಹಿದ್ ಖಚಿತಪಡಿಸಿದ್ದಾರೆ.

Senior cleric among several killed in Afghan mosque blast

ಈ ಘಟನೆಯ ಹೊಣೆಯನ್ನು ಇದುವರೆಗೂ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ಈ ಹಿಂದಿನ ಮಸೀದಿ ದಾಳಿಗಳನ್ನು ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಗುಂಪು ನಡೆಸಿದ್ದು, ಇದು ಅಫ್ಘಾನಿಸ್ತಾನದಲ್ಲಿ ಧಾರ್ಮಿಕ ಮತ್ತು ಜನಾಂಗೀಯ ಅಲ್ಪಸಂಖ್ಯಾತರ ವಿರುದ್ಧ ಸರಣಿ ದಾಳಿಗಳನ್ನು ನಡೆಸಿ, ತಾಲಿಬಾನ್ ಅನ್ನು ಗುರಿಯಾಗಿಸಿಕೊಂಡಿದೆ.

Afghan mosque blast kills 18, including senior cleric

ತನ್ನ ಪ್ರಚೋದನಾಕಾರಿ ಹೇಳಿಕೆಗಳಿಂದ ಪ್ರಸಿದ್ಧರಾಗಿದ್ದ ಅನ್ಸಾರಿ, ತಾಲಿಬಾನ್ ಸರ್ಕಾರದಲ್ಲಿ ಬಹಳ ಪ್ರಭಾವಿ ವ್ಯಕ್ತಿಯಾಗಿದ್ದರು. ಜುಲೈನಲ್ಲಿ ಕಾಬೂಲ್‌ನಲ್ಲಿ ಧಾರ್ಮಿಕ ಸಮಾವೇಶದಲ್ಲಿ ಮಾತನಾಡಿದ್ದ ಅನ್ಸಾರಿ, ಅಫ್ಘಾನಿಸ್ತಾನದಲ್ಲಿನ ತಾಲಿಬಾನ್ ಆಡಳಿತವನ್ನು ಸಮರ್ಥಿಸಿಕೊಂಡಿದ್ದರು.

Afghanistan Blast: Pro-Taliban cleric and 17 others killed in Afghan mosque  blast - The Economic Times

"ನಮ್ಮ ಇಸ್ಲಾಮಿಕ್ ಸರ್ಕಾರದ ವಿರುದ್ಧ ಅತಿ ಸಣ್ಣ ಕೃತ್ಯವನ್ನು ಕೂಡ ಯಾರಾದರೂ ಎಸಗಿದರೂ ಅವರ ಶಿರಚ್ಛೇದ ಮಾಡಬೇಕು. ಈ ಬಾವುಟ (ತಾಲಿಬಾನ್) ಸುಲಭವಾಗಿ ಹಾರಾಡಿಲ್ಲ. ಹಾಗೆಯೇ ಅದನ್ನು ಕೆಳಕ್ಕೆ ಇಳಿಸುವುದು ಸುಲಭವಲ್ಲ" ಎಂದಿದ್ದರು.

At Least 18 Killed as Explosion Strikes Mosque in Herat, Afghanistan |  Democracy Now!

ಕಳೆದ ವರ್ಷದ ಆಗಸ್ಟ್‌ನಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಮರಳುವ ಮುನ್ನ ಕೂಡ ಅನ್ಸಾರಿ ಅವರು ಅಮೆರಿಕ ಬೆಂಬಲಿತ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸುತ್ತಿದ್ದರು. ಅವರು ಒಂದು ತಿಂಗಳ ಒಳಗೇ, ಬಾಂಬ್ ಸ್ಫೋಟದಲ್ಲಿ ಮೃತಪಟ್ಟ ತಾಲಿಬಾನ್ ಪರವಿರುವ ಎರಡನೇ ಧಾರ್ಮಿಕ ನಾಯಕರಾಗಿದ್ದಾರೆ. ಕಾಬೂಲ್‌ನಲ್ಲಿ ಮದರಸಾದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ರಹಿಮುಲ್ಲಾ ಹಕ್ಕಾನಿಯನ್ನು ಹತ್ಯೆ ಮಾಡಲಾಗಿತ್ತು.

Afghan Mosque Blast Kills 18, Including Senior Cleric | Asharq AL-awsat

ಅಫ್ಘಾನಿಸ್ತಾನದಲ್ಲಿ ಕಳೆದ ವರ್ಷ ತಾಲಿಬಾನ್ ಅಧಿಕಾರಕ್ಕೆ ಬಂದ ಬಳಿಕ ಹಿಂಸಾಚಾರಗಳಲ್ಲಿ ಇಳಿಕೆಯಾಗಿದೆ. ಆದರೆ ಕೆಲವು ತಿಂಗಳಿನಿಂದ ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಯಾಗಿಸಿ ದಾಳಿಗಳು ನಡೆದಿವೆ. ಇವುಗಳಲ್ಲಿ ಹೆಚ್ಚಿನ ಕೃತ್ಯಗಳಿಗೆ ಇಸ್ಲಾಮಿಕ್ ಸ್ಟೇಟ್ ಹೊಣೆ ಹೊತ್ತುಕೊಂಡಿದೆ.

An Afghan medic says at least 18 people were killed and 21 wounded in a blast that tore through a crowded mosque in the western city of Herat.Mohammad Daud Mohammadi, an official at the Herat ambulance centre, said ambulances transported 18 dead and 21 wounded to hospitals in the city on Friday.The blast went off in the Guzargah Mosque in the western city of Herat during Friday noon prayers, the highlight of the Muslim religious week when places of worship are particularly crowded.