ಬ್ರೇಕಿಂಗ್ ನ್ಯೂಸ್
04-09-22 06:03 pm HK News Desk ದೇಶ - ವಿದೇಶ
ನವದೆಹಲಿ, ಸೆ.4: ಭಾರತವು 2029ರ ವೇಳೆಗೆ ಜರ್ಮನಿ ಮತ್ತು ಜಪಾನ್ ಆರ್ಥಿಕತೆಯನ್ನು ಹಿಂದಿಕ್ಕಿ ಜಗತ್ತಿನಲ್ಲಿ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಎಸ್ ಬಿಐ ಸಂಶೋಧನಾ ವರದಿಯೊಂದು ಹೇಳಿದೆ.
ಭಾರತದ ಜಿಡಿಪಿ ದರವು ವಿಸ್ತಾರಗೊಳ್ಳುತ್ತಿದ್ದು, ಸದ್ಯಕ್ಕೆ ಯುಕೆಯನ್ನು ಹಿಂದಿಕ್ಕಿ 5ನೇ ಸ್ಥಾನದಲ್ಲಿದೆ. ಹಾಗೆ ನೋಡಿದರೆ, 5ನೇ ಸ್ಥಾನಕ್ಕೆ ಏರಿರುವುದು ಇತ್ತೀಚಿನ ಬೆಳವಣಿಗೆ ಅಲ್ಲ. 2021ರ ಡಿಸೆಂಬರ್ ನಲ್ಲಿಯೇ ಯುಕೆ ಆರ್ಥಿಕತೆಯನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೆ ಹೋಗಿತ್ತು. ಭಾರತದ ಜಿಡಿಪಿ ಬೆಳವಣಿಗೆ ದರ ಈಗ ಶೇ. 3.5ರಲ್ಲಿದೆ. 2014ರಲ್ಲಿ ಅದು ಶೇ. 2.5ರಲ್ಲಿತ್ತು. ಇದೇ ರೀತಿ ಬೆಳವಣಿಗೆಯಾದಲ್ಲಿ 2027ರ ಹೊತ್ತಿಗೆ ಜಿಡಿಪಿ ನಾಲ್ಕು ಶೇಕಡಾಕ್ಕೆ ಏರಿಕೆಯಾಗಲಿದೆ. ಹಾಗಾದಲ್ಲಿ ಜರ್ಮನಿ ಆರ್ಥಿಕತೆಯನ್ನು ಹಿಂದಿಕ್ಕಲಿದೆ ಎಂದು ಎಸ್ ಬಿಐ ಸಂಶೋಧನಾ ವಿಭಾಗದ ಗ್ರೂಪ್ ಚೀಫ್ ಇಕನಾಮಿಕ್ ಅಡ್ವೈಸರ್ ಸೌಮ್ಯಾ ಕಾಂತಿ ಘೋಷ್ ಬರೆದಿದ್ದಾರೆ.
2014ರಲ್ಲಿ ಜಿಡಿಪಿ ಆಧಾರದಲ್ಲಿ ವಿಶ್ವ ಆರ್ಥಿಕತೆಯಲ್ಲಿ ಭಾರತದ ಸ್ಥಾನ ಹತ್ತರಲ್ಲಿತ್ತು. 2022-23ರ ಸಾಲಿನ ಮೊದಲ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ 13.5ರಲ್ಲಿತ್ತು. ಇದನ್ನು ಬೇರೆ ದೇಶಗಳಿಗೆ ಹೋಲಿಸಿದರೆ ಅತ್ಯಂತ ವೇಗದ ಬೆಳವಣಿಗೆಯಂತೆ ಕಾಣುತ್ತದೆ. 2022ರ ಜೂನ್ ವೇಳೆಗೆ ಜಿಡಿಪಿ ದರ 13.5ರಷ್ಟು ದಾಖಲಾಗಿತ್ತು. ಅದಕ್ಕೂ ಹಿಂದೆ 2021-22ರ ಸಾಲಿನಲ್ಲಿ ಬೆಳವಣಿಗೆ ದರವು ಶೇ. 20.1ರಲ್ಲಿತ್ತು. ಅಂದರೆ, 2022ರಲ್ಲಿ ದೇಶದ ಒಟ್ಟು ಜಿಡಿಪಿ 36.85 ಲಕ್ಷ ಕೋಟಿಗೇರಿದ್ದರೆ, ಹಿಂದಿನ ಸಾಲಿನಲ್ಲಿ ಈ ಮೊತ್ತ 32.46 ಲಕ್ಷ ಕೋಟಿ ಇತ್ತು ಎಂದು ಎಸ್ ಬಿಐ ಅಧಿಕೃತ ಹೇಳಿಕೆಯನ್ನು ಉಲ್ಲೇಖಿಸಿ ನ್ಯೂಸ್ 18 ಡಾಟ್ ಕಾಮ್ ವರದಿ ಮಾಡಿದೆ.
ಕಳೆದ ಶುಕ್ರವಾರ ಬ್ಲೂಮ್ ಬರ್ಗ್ ಸಂಸ್ಥೆಯು ಭಾರತದ ಆರ್ಥಿಕತೆಯು ಯುನೈಟೆಡ್ ಕಿಂಗ್ ಡಮ್ ಅನ್ನು ಹಿಂದಿಕ್ಕಿದ್ದಾಗಿ ವರದಿ ಮಾಡಿತ್ತು. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಲ್ಲಿ (ಐಎಂಎಫ್) 2021ರ ಸಾಲಿನ ಉಲ್ಲೇಖಿತವಾಗಿದ್ದ ಜಿಡಿಪಿ ಅಂಶಗಳನ್ನು ಆಧರಿಸಿ ಬ್ಲೂಮ್ ಬರ್ಗ್ ಸಂಸ್ಥೆಯು ಭಾರತದ ಆರ್ಥಿಕತೆಯನ್ನು ವಿಶ್ವದ ಐದನೇ ಅತಿ ದೊಡ್ಡ ಆರ್ಥಿಕತೆಯೆಂದು ಹೇಳಿತ್ತು.
Even as India has surpassed the UK in terms of gross domestic product (GDP) to become the fifth largest economy, an SBI report now says that the Indian economy is expected to become the third largest in the world by 2029, overtaking Germany and Japan as well. In that year, India will be seven notches higher as compared with its position in 2014, when the country was ranked 10th.
14-07-25 10:44 pm
Bangalore Correspondent
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 09:55 pm
Mangalore Correspondent
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm