ರಾಮನ್ ಮ್ಯಾಗ್ಸೇಸೆ ಪುರಸ್ಕಾರ ನಿರಾಕರಿಸಿದ ಕೇರಳದ ಮಾಜಿ ಆರೋಗ್ಯ ಸಚಿವೆ ಕೆಕೆ ಶೈಲಜಾ

04-09-22 06:59 pm       HK News Desk   ದೇಶ - ವಿದೇಶ

ಏಷ್ಯಾ ರಾಷ್ಟ್ರಗಳ ಪಾಲಿಗೆ ನೋಬೆಲ್ ಬಹುಮಾನ ಎಂದೇ ಖ್ಯಾತಿ ಹೊಂದಿರುವ ರಾಮನ್ ಮ್ಯಾಗ್ಸೇಸೆ ಪುರಸ್ಕಾರವನ್ನು ಕೇರಳದ ಮಾಜಿ ಆರೋಗ್ಯ ಸಚಿವೆ ಕೆಕೆ ಶೈಲಜಾ ನಿರಾಕರಿಸಿದ್ದಾರೆ.

ತಿರುವನಂತಪುರ, ಸೆ.4: ಏಷ್ಯಾ ರಾಷ್ಟ್ರಗಳ ಪಾಲಿಗೆ ನೋಬೆಲ್ ಬಹುಮಾನ ಎಂದೇ ಖ್ಯಾತಿ ಹೊಂದಿರುವ ರಾಮನ್ ಮ್ಯಾಗ್ಸೇಸೆ ಪುರಸ್ಕಾರವನ್ನು ಕೇರಳದ ಮಾಜಿ ಆರೋಗ್ಯ ಸಚಿವೆ ಕೆಕೆ ಶೈಲಜಾ ನಿರಾಕರಿಸಿದ್ದಾರೆ. ಕಮ್ಯುನಿಸ್ಟ್ ಪಾರ್ಟಿ ನಾಯಕರ ಸೂಚನೆಯಂತೆ ಪ್ರಶಸ್ತಿ ನಿರಾಕರಿಸುತ್ತಿರುವುದಾಗಿ ಶೈಲಜಾ ಹೇಳಿದ್ದಾರೆ.

ಕೋವಿಡ್ ಸೋಂಕು ಮತ್ತು ನಿಫಾ ವೈರಸ್ ಸೋಂಕನ್ನು ತಡೆಯುವಲ್ಲಿ ಪರಿಣಾಮಕಾರಿ ಕೆಲಸ ನಿರ್ವಹಿಸಿದ್ದ ಕೇರಳದ ಆರೋಗ್ಯ ಸಚಿವೆ ಕೆಕೆ ಶೈಲಜಾ ಅವರನ್ನು 64ನೇ ಮ್ಯಾಗ್ಸೇಸೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಈ ಬಗ್ಗೆ ಪಕ್ಷದ ನಾಯಕರಲ್ಲಿ ಚರ್ಚಿಸಿದ ಬಳಿಕ ಹೇಳಿಕೆ ನೀಡಿರುವ ಶೈಲಜಾ, ಪ್ರಶಸ್ತಿ ಸಮಿತಿಯು ನನ್ನ ಹೆಸರನ್ನು ಪರಿಗಣಿಸಿರುವ ಬಗ್ಗೆ ಮಾಹಿತಿ ನೀಡಿದೆ. ಆದರೆ, ಮ್ಯಾಗ್ಸೇಸೆ ಪುರಸ್ಕಾರ ಸಾಮಾನ್ಯವಾಗಿ ರಾಜಕೀಯ ವ್ಯಕ್ತಿಗಳಿಗೆ ನೀಡುವಂಥದ್ದಲ್ಲ. ನಾನು ಪಕ್ಷದ ಕೇಂದ್ರೀಯ ಸಮಿತಿಯಲ್ಲಿ ಮೆಂಬರ್ ಆಗಿದ್ದೇನೆ. ಪಕ್ಷದ ನಾಯಕರಲ್ಲಿ ಈ ಬಗ್ಗೆ ಚರ್ಚೆ ಮಾಡಿದ್ದು, ಎಲ್ಲರ ಅಭಿಪ್ರಾಯದಂತೆ ಪುರಸ್ಕಾರವನ್ನು ಸ್ವೀಕರಿಸದಿರಲು ನಿರ್ಧರಿಸಿದ್ದೇನೆ. ಮ್ಯಾಗ್ಸೇಸೆ ದೊಡ್ಡ ಪುರಸ್ಕಾರ. ಆದರೆ ಅದನ್ನು ಕೊಡಮಾಡುವ ಎನ್ ಜಿಓ ಸಂಸ್ಥೆಯು ಕಮ್ಯುನಿಸ್ಟ್ ತತ್ವಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

1957ರಲ್ಲಿ ಸ್ಥಾಪನೆಗೊಂಡಿದ್ದ ರಾಮನ್ ಮ್ಯಾಗ್ಸೇಸೆ ಪುರಸ್ಕಾರವು ಏಶ್ಯಾದ ಅತ್ಯುನ್ನತ ಗೌರವಗಳಲ್ಲಿ ಒಂದಾಗಿದೆ. ಫಿಲಿಪೈನ್ಸ್ ದೇಶದ ಮೂರನೇ ಅಧ್ಯಕ್ಷರ ಹೆಸರಿನಲ್ಲಿ ಪ್ರಶಸ್ತಿಯನ್ನು ಪ್ರತಿ ವರ್ಷ ಕೊಡಲಾಗುತ್ತಿದೆ. ಏಶ್ಯಾ ರಾಷ್ಟ್ರಗಳಲ್ಲಿ ಅತ್ಯುತ್ತಮ ಸಮಾಜ ಸೇವೆ ಕಾರ್ಯ ನಿರ್ವಹಿಸಿದ್ದಕ್ಕಾಗಿ ವ್ಯಕ್ತಿ ಮತ್ತು ಸಂಘಟನೆಯನ್ನು ಮ್ಯಾಗ್ಸೇಸೆ ಪುರಸ್ಕಾರಕ್ಕಾಗಿ ಆಯ್ಕೆ ಮಾಡಲಾಗುತ್ತದೆ. 

Former Kerala health minister KK Shailaja turned down the Ramon Magsaysay award. KK Shailaja was considered for the 64th Magsaysay Award in consideration of her performance as Kerala health minister, particularly in the period when the state battled the Nipah virus and Covid-19 pandemic