ಮೋದಿ ದೇಶವನ್ನು ಹಿಂದಕ್ಕೆ ಕೊಂಡೊಯ್ಯುತ್ತಿದ್ದಾರೆ, ಬಿಜೆಪಿ ಸರ್ಕಾರ ಬಂದಾಗಿನಿಂದ ದ್ವೇಷ ಬೆಳೆಯುತ್ತಿದೆ ; ರಾಹುಲ್ ವಾಗ್ದಾಳಿ

04-09-22 09:03 pm       HK News Desk   ದೇಶ - ವಿದೇಶ

"ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ದ್ವೇಷ ಬೆಳೆಯುತ್ತಿದೆ, ಬಿಜೆಪಿ ಮತ್ತು ಆರ್‌ಎಸ್‌ಎಸ್ ದೇಶವನ್ನು ವಿಭಜಿಸುತ್ತಿವೆ" ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಭಾನುವಾರ ಹೇಳಿದರು.

ನವದೆಹಲಿ, ಸೆ.04: "ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ದ್ವೇಷ ಬೆಳೆಯುತ್ತಿದೆ, ಬಿಜೆಪಿ ಮತ್ತು ಆರ್‌ಎಸ್‌ಎಸ್ ದೇಶವನ್ನು ವಿಭಜಿಸುತ್ತಿವೆ" ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಭಾನುವಾರ ಹೇಳಿದರು.

ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್‌ನ ಮೆಗಾ ರ್‍ಯಾಲಿ ನಡೆಯುತ್ತಿದ್ದು, ವೇದಿಕೆಯಲ್ಲಿ ರಾಹುಲ್ ಗಾಂಧಿ ಬಿಜೆಪಿ ಸರ್ಕಾರವನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದಾರೆ.

Modi-BJP Working For Industrialists, Spreading Hatred And Fear: Rahul Gandhi  In Congress Rally

"ಜನರು ಅವರ ಭವಿಷ್ಯ, ಹಣದುಬ್ಬರ ಮತ್ತು ನಿರುದ್ಯೋಗದಿಂದ ಭಯಭೀತರಾಗಿದ್ದಾರೆ. ಬಿಜೆಪಿ ಅವರನ್ನು ದ್ವೇಷದ ಕಡೆಗೆ ತಿರುಗಿಸುತ್ತಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ದೇಶವನ್ನು ವಿಭಜಿಸುತ್ತಿವೆ" ಎಂದು ಹೇಳಿದರು. ಕಾಂಗ್ರೆಸ್‌ನಿಂದ ಮೆಹಂಗೈ ಪರ್ ಹಲ್ಲಾ ಬೋಲ್ ರ್‍ಯಾಲಿ ದೆಹಲಿಯಲ್ಲಿ ಬಿಗಿ ಭದ್ರತೆಯ ನಡುವೆ ನಡೆಯುತ್ತಿದ್ದು, ಭಾರೀ ಜನಸಮೂಹಕ್ಕೆ ಸಾಕ್ಷಿಯಾಗಿದೆ.

Rahul Gandhi's "Hate Rising" Attack On BJP At Mega Congress Rally

ಪ್ರಧಾನಿಯನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಸಂಸದರು "ಕೇವಲ ಇಬ್ಬರು ಉದ್ಯಮಿಗಳು ಸರ್ಕಾರದಿಂದ ಪ್ರಯೋಜನಗಳನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಿದರು. ದೇಶದ ವಿಮಾನ ನಿಲ್ದಾಣ, ಬಂದರು, ರಸ್ತೆಗಳು ಎಲ್ಲವನ್ನೂ ಈ ಇಬ್ಬರು ವ್ಯಕ್ತಿಗಳು ಸ್ವಾಧೀನಪಡಿಸಿಕೊಳ್ಳುತ್ತಿದ್ದಾರೆ" ಎಂದು ಆರೋಪಿಸಿದರು.

The work we did in 10 years, they destroyed in 8 years': Rahul Gandhi slams  BJP at Congress' price rise rally

"ಪ್ರಧಾನಿಯವರ ವಿಚಾರಧಾರೆಯು ಇಬ್ಬರಿಗೆ ಮಾತ್ರ ಸವಲತ್ತುಗಳನ್ನು ನೀಡಬೇಕೆಂದು ಹೇಳುತ್ತದೆ, ದೇಶದ ಪ್ರಗತಿಯಿಂದ ಪ್ರತಿಯೊಬ್ಬರೂ ಪ್ರಯೋಜನ ಪಡೆಯಬೇಕು ಎಂದು ನಮ್ಮ ಸಿದ್ಧಾಂತ ಹೇಳುತ್ತದೆ. ಮೋದಿ ಸರ್ಕಾರವು ಉದ್ಯೋಗ ನೀಡಲು ಸಾಧ್ಯವಾಗುತ್ತಿಲ್ಲ ಮತ್ತು ಆಯ್ದ ಇಬ್ಬರು ದೊಡ್ಡ ಕೈಗಾರಿಕೋದ್ಯಮಿಗಳಿಗೆ ಮಾತ್ರ ಲಾಭ ನೀಡುತ್ತಿದೆ" ಎಂದು ದೂರಿದರು.

BJP, RSS Spreading Hatred, Fear In Country: Rahul Gandhi - THE NEW INDIAN

"ಈ ರೀತಿಯ ಬೆಲೆ ಏರಿಕೆಯನ್ನು ದೇಶ ಹಿಂದೆಂದೂ ನೋಡಿಲ್ಲ. ಸಾಮಾನ್ಯ ಜನರು ಬಹಳ ಕಷ್ಟದಲ್ಲಿದ್ದಾರೆ. ಚೀನಾದೊಂದಿಗಿನ ಉದ್ವಿಗ್ನತೆ, ಹಣದುಬ್ಬರ ಅಥವಾ ನಿರುದ್ಯೋಗ ಆಗಿರಬಹುದು, ಸಂಸತ್ತಿನಲ್ಲಿ ಈ ವಿಷಯಗಳನ್ನು ಪ್ರಸ್ತಾಪಿಸಲು ವಿರೋಧ ಪಕ್ಷಗಳಿಗೆ ಅನುಮತಿ ನೀಡುವುದಿಲ್ಲ" ಎಂದು ಆರೋಪಿಸಿದರು.

Economy weakened as result of...': Rahul Gandhi targets BJP at Congress  rally | Latest News India - Hindustan Times

"ನರೇಂದ್ರ ಮೋದಿ ದೇಶವನ್ನು ಹಿಂದಕ್ಕೆ ಕೊಂಡೊಯ್ಯುತ್ತಿದ್ದಾರೆ, ಅವರು ದ್ವೇಷವನ್ನು ಹರಡುತ್ತಿದ್ದಾರೆ. ಪಾಕಿಸ್ತಾನ ಮತ್ತು ಚೀನಾ ಇದರ ಲಾಭ ಪಡೆಯುತ್ತಿವೆ. ಕಳೆದ ಎಂಟು ವರ್ಷಗಳಲ್ಲಿ ಪ್ರಧಾನಿ ಮೋದಿ ಭಾರತವನ್ನು ದುರ್ಬಲಗೊಳಿಸಿದ್ದಾರೆ" ಎಂದರು.

Accusing the Narendra Modi government of weakening India in the last eight years, Congress leader Rahul Gandhi on Sunday said that the grand old party along with other parties will defeat the ideology of the Bharatiya Janata Party (BJP) and the Rashtriya Swayamsevak Sangh (RSS).