ಬ್ರೇಕಿಂಗ್ ನ್ಯೂಸ್
10-09-22 12:38 pm HK News Desk ದೇಶ - ವಿದೇಶ
ಲಂಡನ್, ಸೆ.9: ಸುದೀರ್ಘ ಅವಧಿಗೆ ಇಂಗ್ಲೆಂಡ್ ರಾಣಿಯಾಗಿದ್ದ ಎರಡನೇ ಎಲಿಜಬೆತ್ ಇನ್ನಿಲ್ಲ. ರಾಣಿಯ ಮಗ ಮೂರನೇ ಚಾರ್ಲ್ಸ್ ಹೊಸ ರಾಜನಾಗಿ ಪದವಿಗೇರಲಿದ್ದಾರೆ. ಇದೇ ವೇಳೆ, ಎಲಿಜಬೆತ್ ರಾಣಿ ಸುದೀರ್ಘ ಕಾಲದಿಂದ ತಲೆಯಲ್ಲಿಟ್ಟುಕೊಂಡಿದ್ದ ಕಿರೀಟ ಕಿಂಗ್ ಚಾರ್ಲ್ಸ್ ಅವರ ಪತ್ನಿ ಕೆಮಿಲ್ಲಾ ಮುಡಿಗೇರಲಿದೆ ಅನ್ನೋ ಮಾತು ಕೇಳಿಬಂದಿದೆ.
ವಿಶೇಷ ಏನಂದ್ರೆ, 170 ವರ್ಷಗಳ ಹಿಂದೆ ಭಾರತದಿಂದ ಹೊತ್ತೊಯ್ದಿದ್ದ ಜಗತ್ತಿನ ಅತಿ ದೊಡ್ಡ ಮತ್ತು ಅತ್ಯಂತ ವಿಶೇಷವಾಗಿರುವ ಕೋಹಿನೂರ್ ವಜ್ರವೂ ರಾಣಿ ಎಲಿಜಬೆತ್ ಕಿರೀಟದಲ್ಲಿತ್ತು. ಸುದೀರ್ಘ 70 ವರ್ಷ ಕಾಲ ಬ್ರಿಟನ್ ರಾಣಿಯಾಗಿದ್ದ ಎರಡನೇ ಎಲಿಜಬೆತ್ ಯುಗಾಂತ್ಯವಾಗುತ್ತಲೇ ಕೋಹಿನೂರ್ ವಜ್ರ ಮತ್ತೆ ಸುದ್ದಿಗೆ ಗ್ರಾಸವಾಗಿದೆ. ಭಾರತದ ಕಡೆಯಿಂದ ಕೋಹಿನೂರ್ ವಜ್ರವನ್ನು ಹಿಂತಿರುಗಿಸಬೇಕೆಂಬ ಅತಿ ಹಳೆಯ ಬೇಡಿಕೆಗೆ ಮತ್ತೆ ಜೀವ ಬಂದಿದೆ.
ಕೋಹಿನೂರ್ ವಜ್ರದ ಮೂಲ ಎಲ್ಲಿ ?
ಕೋಹಿನೂರ್ ವಜ್ರವು ಸದ್ಯಕ್ಕೆ 105.6 ಕ್ಯಾರೆಟ್ ಭಾರ ಹೊಂದಿದೆ. ಮೂಲ ವಜ್ರವು ಸುಮಾರು 186 ಕ್ಯಾರೆಟ್ ಇತ್ತು ಎನ್ನಲಾಗುತ್ತದೆ. ಇಷ್ಟಕ್ಕೂ ಈ ಅತ್ಯಂತ ಅಮೂಲ್ಯ ವಜ್ರ ಭಾರತದ ಯಾವ ಭಾಗದಲ್ಲಿ ಮೊದಲ ಬಾರಿಗೆ ಸಿಕ್ಕಿತ್ತು ಅನ್ನುವುದಕ್ಕೆ ಖಚಿತ ಪುರಾವೆಗಳಿಲ್ಲ. ಕೆಲವು ಮೂಲದ ಪ್ರಕಾರ, ಆಂಧ್ರಪ್ರದೇಶದ ಗೊಲ್ಕೊಂಡಾ ವಜ್ರದ ಗಣಿ ಶ್ರೇಣಿಗಳಲ್ಲಿ 14ನೇ ಶತಮಾನದಲ್ಲಿ ಅಮೋಘ ವಜ್ರದ ಕಲ್ಲು ಪತ್ತೆಯಾಗಿತ್ತು ಎನ್ನಲಾಗುತ್ತದೆ. ಅತ್ಯಂತ ದೊಡ್ಡದಾಗಿದ್ದ ಮತ್ತು ಫಳಪಳನೆ ಹೊಳೆಯುತ್ತಿದ್ದ ಈ ವಜ್ರ ಆಗಿನ ಕಾಲದಲ್ಲಿ ಆ ಭಾಗವನ್ನು ಆಳುತ್ತಿದ್ದ ಕಾಕತೀಯ ರಾಜ ವಂಶಸ್ಥರಲ್ಲಿತ್ತು. ಬಳಿಕ ಮೊಘಲ್ ರಾಜ ಅಲ್ಲಾವುದ್ದೀನ್ ಖಿಲ್ಜಿ ಅದನ್ನು ಮೊದಲ ಬಾರಿಗೆ ವಶಕ್ಕೆ ಪಡೆದಿದ್ದ.
ಕೋಹಿನೂರ್ ಇದ್ದವರು ಅಧಿಕಾರ ಕಳಕೊಂಡಿದ್ದರು
ಆನಂತರ, ಈ ವಜ್ರ ಹಲವು ಮೊಘಲ್ ರಾಜರ ಕೈಬದಲಾಗಿದ್ದವು. ಮೊಘಲ್ ರಾಣಿಯರ ಕಿರೀಟವನ್ನೂ ಸೇರಿತ್ತು. 1526ರಲ್ಲಿ ಬಾಬರನ ಕಾಲದಲ್ಲಿ ಆತನ ವಶಕ್ಕೂ ಹೋಗಿತ್ತು. ಆನಂತರ ಅಕ್ಬರ್, ಔರಂಗಜೇಬನ ಆಳ್ವಿಕೆಯಲ್ಲೂ ಅವರ ವಶದಲ್ಲಿದ್ದವು ಎನ್ನಲಾಗುತ್ತದೆ. ಆದರೆ, ಈ ವಜ್ರವನ್ನು ಯಾವ ರಾಜ ತಮ್ಮ ವಶದಲ್ಲಿಟ್ಟುಕೊಂಡಿದ್ದನೋ ಅವರು ಅಕಾಲಿಕ ಸಾವನ್ನಪ್ಪುತ್ತಿದ್ದರು ಅಥವಾ ಆಡಳಿತ ಕಳಕೊಳ್ಳುತ್ತಿದ್ದರು ಅನ್ನುವ ನಂಬಿಕೆ ಬೆಳೆದಿತ್ತು. ಹಾಗಾಗಿ, ಒಂದೋ ರಾಣಿಯರು ಇಟ್ಟುಕೊಳ್ಳಬೇಕಿತ್ತು. ಅಥವಾ ದೇವರ ಸೇವೆಗೆ ಅರ್ಪಣೆ ಮಾಡುತ್ತಿದ್ದರು. 1740ರಲ್ಲಿ ದೆಹಲಿಯನ್ನು ಆಳುತ್ತಿದ್ದ ಮಹಮ್ಮದ್ ಮಹರ್ವಿ ಎಂಬಾತ ಆಕರ್ಷಕ ವಜ್ರಕ್ಕೆ ಕೊಹ್ ಇ- ನೂರ್ ಎಂದು ಹೆಸರಿಟ್ಟಿದ್ದ.
ಕೊನೆಯ ಬಾರಿಗೆ 1847ರಲ್ಲಿ ಬ್ರಿಟಿಷರ ಕೈಗೆ ಸಿಗುವುದಕ್ಕೂ ಮೊದಲು ಅದು ಲಾಹೋರಿನ ರಾಜ ದುಲೀಪ್ ಸಿಂಗ್ ಬಳಿಯಿತ್ತು. ಅದಕ್ಕೂ ಮೊದಲು ಜಮ್ಮು ಕಾಶ್ಮೀರದ ರಾಜ ಗುಲಾಬ್ ಸಿಂಗ್ ಬಳಿ ಕೋಹಿನೂರ್ ವಜ್ರ ಇತ್ತು. 1841ರ ವರೆಗೂ ಆತನ ಬಳಿಯೇ ಇತ್ತು. ಆನಂತರ, ಲಾಹೋರಿನ ಷೇರ್ ಸಿಂಗ್ ಎಂಬ ರಾಜನ ವಿರುದ್ಧ ಸೋತಾಗ ಆ ವಜ್ರವನ್ನು ಆತನಿಗೆ ಕೊಟ್ಟು ರಾಜ್ಯವನ್ನು ಉಳಿಸಿಕೊಂಡಿದ್ದ. 1843ರಲ್ಲಿ ಷೇರ್ ಸಿಂಗ್ ಮತ್ತು ಆತನ ಮಂತ್ರಿ ಧಿಯಾನ್ ಸಿಂಗ್, ರಾಜಾ ಅಜಿತ್ ಸಿಂಗ್ ಎದುರು ಯುದ್ಧದಲ್ಲಿ ಮಡಿಯುತ್ತಾರೆ. ಬಳಿಕ ಮಂತ್ರಿಯ ಮಗ ಹೀರಾ ಸಿಂಗ್ ತಾನೇ ಮಂತ್ರಿಯಾಗಿ ಅಧಿಕಾರ ಪಡೆದು 5 ವರ್ಷದವನಿದ್ದ ದುಲೀಪ್ ಸಿಂಗ್ ನನ್ನು ರಾಜನೆಂದು ಘೋಷಿಸಿಕೊಳ್ಳುತ್ತಾನೆ. ಆ ಸಂದರ್ಭದಲ್ಲಿ ಮಗು ಮತ್ತು ಆತನ ತಾಯಿ ಜಿಂದ್ ಕೌರ್, ಜಮ್ಮುವಿನಲ್ಲಿದ್ದರು.
ಜಮ್ಮು ಕಾಶ್ಮೀರ ಆಳುತ್ತಿದ್ದ ಗುಲಾಬ್ ಸಿಂಗ್, ಆಳ್ವಿಕೆಯಲ್ಲೇ ಲಾಹೋರ್ ಕೂಡ ಇತ್ತು. ಆದರೆ, ಕೋಹಿನೂರ್ ವಜ್ರ ಲಾಹೋರಿನ ಕೋಟೆಯಲ್ಲೇ ಇತ್ತು. 1844ರಲ್ಲಿ ಪ್ರಧಾನಿ ಹೀರಾ ಸಿಂಗ್, ಬ್ರಿಟಿಷರ ಜೊತೆಗಿನ ಮೊದಲ ಆಂಗ್ಲೋ- ಸಿಖ್ ಯುದ್ಧದಲ್ಲಿ ಮಡಿಯುತ್ತಾನೆ. ಆನಂತರ, ಗುಲಾಬ್ ಸಿಂಗ್ ಅಮೃತಸರವನ್ನು ಬ್ರಿಟಿಷರಿಗೆ ಬಿಟ್ಟು ಕೊಟ್ಚು ಲಾಹೋರನ್ನು ತನ್ನ ಆಳ್ವಿಕೆಯಲ್ಲಿ ಉಳಿಸಿಕೊಳ್ಳುತ್ತಾನೆ. ಬಳಿಕ ಎರಡನೇ ಆಂಗ್ಲೋ- ಸಿಖ್ ಯುದ್ಧದಲ್ಲಿ ಪೂರ್ತಿ ಪಂಜಾಬ್ ಬ್ರಿಟಿಷರ ವಶವಾಗುತ್ತದೆ. ಗುಲಾಬ್ ಸಿಂಗ್, ಬ್ರಿಟಿಷರಿಗೆ ಬೆಂಬಲವಾಗಿ ನಿಲ್ಲುತ್ತಾನೆ. ಬ್ರಿಟಿಷರ ಆಳ್ವಿಕೆ ಒಪ್ಪಿಕೊಂಡು ಲಾಹೋರ್ ಒಪ್ಪಂದ ಮಾಡಿಕೊಳುತ್ತಾರೆ. ಅದರ ಪ್ರಕಾರ, 1849ರಲ್ಲಿ ಲಾಹೋರ್ ಕೋಟೆಯಲ್ಲಿದ್ದ ಕೋಹಿನೂರ್ ವಜ್ರ ಸಹಿತ ಸಮಸ್ತ ಆಭರಣವನ್ನು ಬ್ರಿಟಿಷ್ ರಾಣಿಗೆ ನೀಡಲಾಗುತ್ತದೆ. ಅಲ್ಲಿಂದ ಇಲ್ಲಿ ವರೆಗೂ ಕೋಹಿನೂರ್ ವಜ್ರ ಬ್ರಿಟನ್ ರಾಣಿಯ ಸೊತ್ತಾಗಿಯೇ ಇದೆ.
ಮೊಘಲ್ ರಾಜರು, ಮೊಘಲ್ ರಾಣಿಯರು, ಅಫ್ಘನ್ ರಾಜರು, ಆನಂತರ ಪಂಜಾಬಿ ಸಿಖ್ ರಾಜರ ವಶಕ್ಕೆ ಬಂದಿದ್ದ ಕೋಹಿನೂರ್ ವಜ್ರ ಕೊನೆಗೆ ಬ್ರಿಟಿಷರ ಪಾಲಾಗಿತ್ತು. ಹೀಗಾಗಿ ಈ ವಜ್ರ ತಮ್ಮದು ಎಂದು ಪಾಕಿಸ್ತಾನವೂ ಹೇಳಿಕೊಂಡಿತ್ತು. ಅಫ್ಘಾನಿಸ್ತಾನವೂ ಹೇಳಿಕೊಂಡಿತ್ತು. ಭಾರತವೂ ಅದು ತನ್ನದೆಂದು ಹಕ್ಕು ಸ್ಥಾಪನೆ ಮಾಡಿತ್ತು. 186 ಕ್ಯಾರೆಟ್ ಇದ್ದ ವಜ್ರವನ್ನು ತುಂಡರಿಸಿ ರಾಣಿ ಎಲಿಜಬೆತ್ ತನ್ನ ಕಿರೀಟದಲ್ಲಿ ಇಟ್ಟುಕೊಂಡಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಕೂಡಲೇ 1947ರಲ್ಲಿ ಕೋಹಿನೂರ್ ವಜ್ರವನ್ನು ಬ್ರಿಟಿಷರು ಮರಳಿಸಬೇಕೆಂದು ಒತ್ತಾಯ ಮಾಡಲಾಗಿತ್ತು. 1953ರಲ್ಲಿ ಎರಡನೇ ಎಲಿಜಬೆತ್ ಬ್ರಿಟನ್ ರಾಣಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಕೋಹಿನೂರ್ ವಜ್ರವನ್ನು ಕಿರೀಟದಲ್ಲಿಯೇ ಇಟ್ಟುಕೊಂಡಿದ್ದರು.
2009ರಲ್ಲಿ ಮಹಾತ್ಮ ಗಾಂಧೀಜಿಯ ಮೊಮ್ಮಗ ತುಷಾರ್ ಗಾಂಧಿಯವರು ಕೂಡ ಕೋಹಿನೂರ್ ವಜ್ರವನ್ನು ಮರಳಿ ತರಬೇಕೆಂದು ಒತ್ತಾಯ ಮಾಡಿದ್ದರು. 2013ರಲ್ಲಿ ಪ್ರಧಾನಿ ಡೇವಿಡ್ ಕ್ಯಾಮರೂನ್, ಕೋಹಿನೂರ್ ವಜ್ರವನ್ನು ಮರಳಿಸುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದರು. 2016ರಲ್ಲಿ ವಜ್ರವನ್ನು ಲಾಹೋರ್ ಒಪ್ಪಂದದ ನೆಪದಲ್ಲಿ ಬ್ರಿಟಿಷರು ಕೊಳ್ಳೆ ಹೊಡೆದುಕೊಂಡು ಹೋಗಿದ್ದರು ಎಂದು ಭಾರತ ಸರಕಾರ ಹೇಳಿತ್ತು. ಈ ಹೇಳಿಕೆ, ವಿವಾದ ಆಗುತ್ತಲೇ ಭಾರತದ ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್, ಅದು ಕದ್ದುಕೊಂಡು ಹೋಗಿದ್ದೂ ಅಲ್ಲ, ಬಲವಂತದಿಂದ ಹೊತ್ತೊಯ್ದಿದ್ದೂ ಅಲ್ಲ ಎಂದಿದ್ದರು. ಇದೇ ವೇಳೆ, ಪ್ರಾಚ್ಯವಸ್ತು ಇಲಾಖೆಯವರು ಕೋಹಿನೂರ್ ವಜ್ರವನ್ನು ಮರಳಿ ಪಡೆಯಲು ಯಾವುದೇ ಕಾನೂನು ಮಾನದಂಡ ಇಲ್ಲವೆಂದು ಹೇಳಿ ವಿವಾದಕ್ಕೆ ಅಂತ್ಯ ಹಾಡಿದ್ದರು.
ರಾಣಿ ಎರಡನೇ ಎಲಿಜಬೆತ್ ಅವರ ಸುದೀರ್ಘ ಅವಧಿಯ ಆಡಳಿತ ಕೊನೆಗೊಂಡಾಗ, ಕೋಹಿನೂರ್ ವಜ್ರ ಇನ್ನಾದರೂ ಮೂಲಸ್ಥಾನಕ್ಕೆ ಮರಳಿ ಬಂದೀತೇ ಎನ್ನುವ ಮಾತು ಕೇಳಿಬಂದಿದೆ. ಇದೇನಿದ್ದರೂ, ಕೋಹಿನೂರ್ ಬ್ರಿಟನ್ ಪಾಲಾದ ಬಳಿಕ ಅಲ್ಲಿನ ಅರಸೊತ್ತಿಗೆ ಮತ್ತು ಸಾಮ್ರಾಜ್ಯ ಶಾಹಿತ್ವ ಕಳೆಗುಂದುತ್ತಾ ಬಂದಿದ್ದಂತೂ ಸತ್ಯ.
The Koh-i-Noor is arguably the most famous diamond in the world. The 105.6 carat dazzling ‘Mountain of Light’, with controversial origins, is now one of 2,800 diamonds, along with sapphires other precious stones, in the Britain monarch’s crown crafted in 1937. It was Queen Elizabeth II’s, until her death on September 8, 2022.The prestigious crown will now reportedly go to Queen Camilla, as she will be crowned, when she takes her place alongside King Charles III in his coronation. A message published on the eve of Queen Elizabeth’s 70th accession this February said it was her “sincere wish” that Charles’s wife would be known on his accession to the throne as Queen Consort.
15-07-25 10:35 am
Bangalore Correspondent
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 10:32 am
Mangalore Correspondent
ಕಲ್ಲು ಮರಳಿನ ಸಮಸ್ಯೆಯಿಂದ ಜನರ ತಲೆಗೆ ಚಪ್ಪಡಿ ಕಲ್ಲು...
14-07-25 09:55 pm
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm