ಯೇಸು ಮಾತ್ರ ನೈಜ ದೇವರು ; ರಾಹುಲ್ ಗಾಂಧಿಗೆ ಪಾಠ ಮಾಡಿದ ಕನ್ಯಾಕುಮಾರಿ ಪಾದ್ರಿ, ವಿವಾದಕ್ಕೆ ಬಳಸಿದ ಬಿಜೆಪಿ

10-09-22 04:09 pm       HK News Desk   ದೇಶ - ವಿದೇಶ

ಭಾರತ್ ಜೋಡೋ ಯಾತ್ರೆ ಕೈಗೊಂಡಿರುವ ರಾಹುಲ್ ಗಾಂಧಿ ಮತ್ತೆ ವಿವಾದಕ್ಕೆ ತುತ್ತಾಗಿದ್ದಾರೆ. ಯಾತ್ರೆ ಆರಂಭಿಸಿರುವ ಕನ್ಯಾಕುಮಾರಿಯಲ್ಲಿ ಚರ್ಚ್ ಒಂದಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, ಅಲ್ಲಿನ ಪಾದ್ರಿಗಳ ಬಳಿ ಜೀಸಸ್ ಕ್ರಿಸ್ತನ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ತಿರುವನಂತಪುರ, ಸೆ.10: ಭಾರತ್ ಜೋಡೋ ಯಾತ್ರೆ ಕೈಗೊಂಡಿರುವ ರಾಹುಲ್ ಗಾಂಧಿ ಮತ್ತೆ ವಿವಾದಕ್ಕೆ ತುತ್ತಾಗಿದ್ದಾರೆ. ಯಾತ್ರೆ ಆರಂಭಿಸಿರುವ ಕನ್ಯಾಕುಮಾರಿಯಲ್ಲಿ ಚರ್ಚ್ ಒಂದಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, ಅಲ್ಲಿನ ಪಾದ್ರಿಗಳ ಬಳಿ ಜೀಸಸ್ ಕ್ರಿಸ್ತನ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಪಾದ್ರಿ, ಜೀಸಸ್ ಮಾತ್ರ ನಿಜವಾದ ದೇವರು, ಉಳಿದವರಲ್ಲ ಎಂದು ಹೇಳಿರುವ ವಿಡಿಯೋವನ್ನು ಬಿಜೆಪಿ ಟೀಕಿಸಿದ್ದು, ವಿವಾದಕ್ಕೆ ಬಳಸಿದೆ.

ಚರ್ಚ್ ಫಾದರ್ ಜಾರ್ಜ್ ಪೊನ್ನಯ್ಯ ಈ ರೀತಿ ರಾಹುಲ್ ಗಾಂಧಿಗೆ ಹೇಳುವ ವಿಡಿಯೋವನ್ನು ಬಿಜೆಪಿ ನಾಯಕರು ಟ್ವೀಟ್ ಮಾಡಿದ್ದಾರೆ. ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲ ವಿಡಿಯೋ ಶೇರ್ ಮಾಡಿದ್ದು, ರಾಹುಲ್ ಗಾಂಧಿಯನ್ನು ಟೀಕಿಸಲು ಬಳಸಿದ್ದಾರೆ. ಜೀಸಸ್ ಮಾತ್ರ ದೇವರು. ಉಳಿದವರಲ್ಲ ಎಂದು ಜಾರ್ಜ್ ಪೊನ್ನಯ್ಯ ರಾಹುಲ್ ಗಾಂಧಿಗೆ ಹೇಳುತ್ತಾರೆ. ಇದೇ ಪೊನ್ನಯ್ಯ, ತನ್ನ ಹಿಂದು ವಿರೋಧಿ ಹೇಳಿಕೆಯ ಕಾರಣಕ್ಕೆ ಹಿಂದೆ ಬಂಧನಕ್ಕೊಳಗಾಗಿದ್ದರು. ನಾನು ಶೂ ಯಾಕೆ ಹಾಕ್ಕೊಂಡಿದ್ದೇನಂದ್ರೆ, ಭಾರತ ಮಾತೆಯ ಕಲ್ಮಶಗಳು ನಮಗೆ ಅಂಟಿಕೊಳ್ಳಬಾರದಲ್ಲ ಎಂದು ಹೇಳಿದ್ದರು. ಭಾರತ್ ತೋಡೋಗಳ ಜೊತೆಗೆ ರಾಹುಲ್ ಭಾರತ್ ಜೋಡೊ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ರಾಹುಲ್ ಗಾಂಧಿಯವರು ಕನ್ಯಾಕುಮಾರಿಯಲ್ಲಿ ಚರ್ಚ್ ಒಂದಕ್ಕೆ ಭೇಟಿ ನೀಡಿದ್ದಾಗ, ಅಲ್ಲಿನ ಪಾದ್ರಿಗಳ ಜೊತೆ ಪ್ರಶ್ನೆ ಮಾಡಿದ್ದರು. ಜೀಸಸ್ ಸ್ವತಃ ದೇವರಾಗಿದ್ದರೇ ಅಥವಾ ದೇವರ ದೂತನೇ ಎಂದು ಕೇಳಿದ್ದರು. ಅದಕ್ಕುತ್ತರಿಸಿದ್ದ ಪಾದ್ರಿ ಜಾರ್ಜ್ ಪೊನ್ನಯ್ಯ, ಜೀಸಸ್ ನಿಜವಾದ ದೇವರು. ದೇವರ ದೂತನಾಗಿ ಮನುಷ್ಯ ರೂಪದಲ್ಲಿ ಭೂಲೋಕಕ್ಕೆ ಬಂದಿದ್ದರೆಂದು ನಂಬುತ್ತೇವೆ ಎಂದು ಹೇಳಿದ್ದರು. ಅದೇ ಸಂದರ್ಭದಲ್ಲಿ ರಾಹುಲ್ ಗಾಂಧಿಯ ಬಲಭಾಗದಲ್ಲಿ ಕುಳಿತಿದ್ದ ವ್ಯಕ್ತಿಗಳು, ಜೀಸಸ್ ದೇವರು ಮತ್ತು ದೇವದೂತ ಎರಡೂ ಆಗಿದ್ದರು ಎಂದು ಹೇಳುತ್ತಾರೆ. ಆದರೆ ಈ ವಿಡಿಯೋವನ್ನು ಬಿಜೆಪಿ ನಾಯಕರು ಟೀಕೆಗೆ ಬಳಸ್ಕೊಂಡಿದ್ದು, ಭಾರತ ವಿರೋಧಿಗಳ ಜೊತೆಗೆ ರಾಹುಲ್ ಗಾಂಧಿ ಕೈಜೋಡಿಸಿದ್ದಾರೆಂದು ಟೀಕಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಅದು ಬೋಗಸ್ ವಿಡಿಯೋ, ಬಿಜೆಪಿ ನಾಯಕರು ತಮ್ಮ ಹಿತಾಸಕ್ತಿಯನ್ನು ಈ ಮೂಲಕ ತೋರಿಸುತ್ತಿದ್ದಾರೆ. ನಾವು ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದೇವೆ. ಬಿಜೆಪಿಯವರು ಜನರನ್ನು ಒಡೆಯಲು ನೋಡುತ್ತಿದ್ದರೆ, ಕಾಂಗ್ರೆಸ್ ಒಗ್ಗೂಡಿಸಲು ಶ್ರಮಿಸುತ್ತಿದೆ. ಭಾರತವನ್ನು ಒಗ್ಗೂಡಿಸುವ ಕಾಂಗ್ರೆಸ್ ಪ್ರಯತ್ನವನ್ನು ಹಾಳುಗೆಡಹುವ ಹುನ್ನಾರ ಬಿಜೆಪಿಯದ್ದು ಎಂದು ಹೇಳಿದ್ದಾರೆ.

ಜಾರ್ಜ್ ಪೊನ್ನಯ್ಯ, ತಮಿಳುನಾಡಿನಲ್ಲಿ ಜನನಾಯಕ ಕ್ರಿಸ್ತವ ಪೆರಾವಿ ಎನ್ನುವ ಎನ್ ಜಿಓ ಸಂಘಟನೆಯೊಂದನ್ನು ನಡೆಸುತ್ತಿದ್ದು ಕನ್ಯಾಕುಮಾರಿಯಲ್ಲಿ ಪ್ರಧಾನ ಕೇಂದ್ರವನ್ನು ಹೊಂದಿದ್ದಾರೆ. ವಿವಾದಕ್ಕೂ ಇವರಿಗೂ ಹತ್ತಿರದ ನಂಟಿದೆ. ಈ ಹಿಂದೆ ಪ್ರಧಾನಿ ಮೋದಿ ವಿರುದ್ಧ ನಿಂದಿಸಿ ಹೇಳಿಕೆ ನೀಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಆನಂತರ, ತಮಿಳುನಾಡಿನ ವಿವಿಧೆಡೆ ಜಾರ್ಜ್ ವಿರುದ್ಧ 30ಕ್ಕೂ ಹೆಚ್ಚು ಕೇಸುಗಳು ದಾಖಲಾಗಿದ್ದವು. ಜಾರ್ಜ್ ಬಹಿರಂಗ ಕ್ಷಮೆ ಯಾಚಿಸುವಂತೆ ಆಗ್ರಹ ಮಾಡಲಾಗಿತ್ತು.

ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಉತ್ತರ ಭಾರತದ ವರೆಗೆ ಭಾರತ್ ಜೋಡೊ ಯಾತ್ರೆ ಹಮ್ಮಿಕೊಂಡಿದ್ದು, 12 ರಾಜ್ಯಗಳಲ್ಲಿ 3750 ಕಿಮೀ ಉದ್ದಕ್ಕೆ 150 ದಿನಗಳ ವರೆಗೆ ಯಾತ್ರೆ ನಡೆಯಲಿದೆ. ಸೆ.7ರಂದು ಯಾತ್ರೆ ಆರಂಭಗೊಂಡಿತ್ತು. 

The Congress’ ‘Bharat Jodo’ campaign has given the BJP yet another reason to take on Rahul Gandhi. The BJP slammed the Congress leader over a video that is now viral on social media that captures a conversation between George Ponniah - a pastor in Tamil Nadu’s Kanyakumari and Rahul Gandhi. In the video the pastor is seen terming Jesus the ‘only real god’.