ಓಣಂ ಹಬ್ಬದ ಹರಾಜಿನಲ್ಲಿ 5 ಕೆಜಿ ತೂಕದ ಕುಂಬಳಕಾಯಿ 47 ಸಾವಿರ ರೂ. ಗೆ ಮಾರಾಟ !

10-09-22 08:04 pm       HK News Desk   ದೇಶ - ವಿದೇಶ

ಒಂದು ಕುಂಬಳಕಾಯಿಯ ಬೆಲೆ 47 ಸಾವಿರ ರೂಪಾಯಿ ಅಂದರೆ ಯಾರೂ ನಂಬುವುದಿಲ್ಲ. ಆದರೂ ಇದು ಸತ್ಯ. ಕುಂಬಳಕಾಯಿಯೊಂದು ಬರೋಬ್ಬರಿ 47 ಸಾವಿರ ರೂಪಾಯಿಗೆ ಮಾರಾಟವಾಗಿದ್ದು ನಿಜ.

Photo credits : mathrubhumi news

ಕೇರಳ, ಸೆ.10: ಒಂದು ಕುಂಬಳಕಾಯಿಯ ಬೆಲೆ 47 ಸಾವಿರ ರೂಪಾಯಿ ಅಂದರೆ ಯಾರೂ ನಂಬುವುದಿಲ್ಲ. ಆದರೂ ಇದು ಸತ್ಯ. ಕುಂಬಳಕಾಯಿಯೊಂದು ಬರೋಬ್ಬರಿ 47 ಸಾವಿರ ರೂಪಾಯಿಗೆ ಮಾರಾಟವಾಗಿದ್ದು ನಿಜ. ಇಡುಕ್ಕಿಯ ಗುಡ್ಡ ಪ್ರದೇಶದಲ್ಲಿರುವ ಚೆಮ್ಮನ್ನಾರ್ ಎಂಬಲ್ಲಿ ನಡೆದ ಓಣಂ ಹಬ್ಬದ ಹರಾಜಿನಲ್ಲಿ 5 ಕೆಜಿ ತೂಕದ ಕುಂಬಳಕಾಯಿಯೊಂದು 47 ಸಾವಿರ ರೂಪಾಯಿಗೆ ಮಾರಾಟವಾಗಿದೆ. ಇದು ಈ ಬಾರಿಯ ಓಣಂ ಹಬ್ಬದ ವಿಶೇಷತೆಯಾಗಿದೆ.

ಸಾಮಾನ್ಯವಾಗಿ ಇಲ್ಲಿ ನಡೆಯುವ ಹರಾಜಿನಲ್ಲಿ ಟಗರು, ಹುಂಜ ಮುಂತಾದುವು 10 ಸಾವಿರಕ್ಕೂ ಅಧಿಕ ಬೆಲೆಗೆ ಮಾರಾಟವಾಗುತ್ತವೆ. ಆದರೆ ಇದಕ್ಕಿಂತಲೂ ದೊಡ್ಡ ಬೆಲೆಗೆ ಕುಂಬಳಕಾಯಿ ಮಾರಾಟವಾಗಿದ್ದು ಒಂದು ದಾಖಲೆಯಾಗಿದೆ. ಕುಂಬಳಕಾಯಿಗೆ ಈ ಪರಿ ಬೆಲೆ ಬಂದಿರುವುದನ್ನು ನೋಡಿ ಇಲ್ಲಿನ ಹರಾಜಿನ ಬಗ್ಗೆ ಜನರಲ್ಲಿ ವಿಪರೀತ ಕುತೂಹಲ ಮೂಡಿದೆ. ಇನ್ನೂ ವಿಚಿತ್ರ ಏನೆಂದರೆ ಈ ಕುಂಬಳಕಾಯಿಯನ್ನು ಹಬ್ಬದ ಸಂಘಟಕರಿಗೆ ಉಚಿತವಾಗಿ ನೀಡಿದ್ದರು ಎಂಬುದು.

47 ಸಾವಿರ ರೂ.ಗೆ ಮಾರಾಟವಾದ ಕುಂಬಳಕಾಯಿ

ಓಣಂ ಹಬ್ಬದ ಖರ್ಚು ವೆಚ್ಚಗಳನ್ನು ಸರಿದೂಗಿಸಲು ಪ್ರಯತ್ನಿಸುತ್ತಿದ್ದ ಸಂಘಟಕರಿಗೆ ಒಂದೇ ಒಂದು ಕುಂಬಳಕಾಯಿ ಮಾರಾಟದಿಂದ 47 ಸಾವಿರ ರೂಪಾಯಿ ಸಿಕ್ಕಿರುವುದು ಖುಷಿಯಾಗಿದೆ. ಅದೃಷ್ಟ ಎಂಬುದು ಕುಂಬಳಕಾಯಿ ರೂಪದಲ್ಲೂ ಬರುತ್ತೆ ಎಂದು ಇಲ್ಲಿನ ಜನ ಈಗ ಮಾತನಾಡಿಕೊಳ್ಳುತ್ತಿದ್ದಾರೆ.

An auction conducted in Chemmnar in Idukki as part of Onam celebrations became so competitive that a Pumpkin was sold for Rs 47,000.