ಬ್ರೇಕಿಂಗ್ ನ್ಯೂಸ್
13-09-22 10:19 pm HK News Desk ದೇಶ - ವಿದೇಶ
ನವದೆಹಲಿ, ಸೆ.13 : ಕ್ಯಾನ್ಸರ್ ಚಿಕಿತ್ಸೆಗೆ ಬಳಕೆ ಮಾಡುವ ಔಷಧಗಳು, ಆ್ಯಂಟಿ ಬಯೋಟಿಕ್ ಲಸಿಕೆಗಳು ಇನ್ನು ಜನರ ಕೈಗೆಟಕುವ ದರದಲ್ಲಿ ಲಭ್ಯವಾಗಲಿವೆ. ಜೊತೆಗೆ ಅಸಿಡಿಟಿ ನಿಯಂತ್ರಣಕ್ಕಾಗಿ ವೈದ್ಯರು ನೀಡುವ ರ್‍ಯಾಂಟಾಕ್, ಝಿಂಟ್ಯಾಕ್ ಸೇರಿದಂತೆ 26 ಔಷಧಗಳನ್ನು ರಾಷ್ಟ್ರೀಯ ಅಗತ್ಯ ಔಷಧ ಪಟ್ಟಿಯಿಂದ ತೆಗೆಯಲಾಗಿದೆ. ಅವುಗಳ ಬಳಕೆಯಿಂದ ಕ್ಯಾನ್ಸರ್ ಬರಲಿವೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಅಗತ್ಯ ಔಷಧಗಳ ಪಟ್ಟಿಗೆ 34 ಹೊಸ ಔಷಧಗಳನ್ನು ಸೇರಿಸಲಾಗಿದೆ. ಅದರಲ್ಲಿ ಐವರ್‌ವೆುಕ್ಟಿನ್, ಮ್ಯುಪಿರೋಸಿನ್ ಮತ್ತು ಮೆರೋಪೆನೆಮ್ ಔಷಧಗಳನ್ನು ಸೇರಿಸಲಾಗಿದೆ. ಹೀಗಾಗಿ, ಜನರ ಕೈಗೆ ಎಟಕುವ ದರದಲ್ಲಿ ಲಭ್ಯವಾಗಲಿರುವ ಔಷಧಗಳ ಪಟ್ಟಿ 384ಕ್ಕೆ ಏರಿಕೆಯಾಗಿದೆ.
ವಿವಿಧ ಕ್ಯಾನ್ಸರ್ ಚಿಕಿತ್ಸೆಗೆ ಬಳಕೆ ಮಾಡಲಾಗಿರುವ ನಾಲ್ಕು ಪ್ರಮುಖ ಔಷಧಗಳು ಕೈಗೆಟಕುವ ದರಗಳ ಪಟ್ಟಿಗೆ ಸೇರ್ಪಡೆಯಾಗಿವೆ. ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಮನ್ಸುಖ್ ಮಾಂಡವಿಯಾ “ಕೇಂದ್ರ ಸರ್ಕಾರದ ನಿರ್ಧಾರದಿಂದ ಜನರಿಗೆ ಕೈಗೆಟಕುವ ದರದಲ್ಲಿ ಔಷಧಗಳು ಲಭ್ಯವಾಗಲಿವೆ’ ಎಂದು ಬರೆದುಕೊಂಡಿದ್ದಾರೆ.
ರಾಷ್ಟ್ರೀಯ ಅಗತ್ಯ ಔಷಧಗಳ ಪಟ್ಟಿ (ಎನ್‌ಎಲ್‌ಇಎಂ)ಯಲ್ಲಿ 27 ವಿಭಾಗಗಳಿಗೆ ಅನ್ವಯವಾಗುವ 384 ಔಷಧಗಳು, ಏಳು ಆ್ಯಂಟಿ ಬಯಾಟಿಕ್ಸ್‌ಗಳು, ಲಸಿಕೆಗಳು, ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುವ ಔಷಧಗಳು ಜನರಿಗೆ ಕಡಿಮೆ ದರದಲ್ಲಿ ಲಭ್ಯವಾಗಲಿವೆ ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎಲ್ಲರಿಗೂ ಔಷಧ; ಕಡಿಮೆ ದರದಲ್ಲಿ ಎಂಬ ನಿಲುವಿನ ಆಧಾರದಲ್ಲಿ ಇಂಥ ಕ್ರಮ ಕೈಗೊಂಡಿದೆ ಎಂದು ಸಚಿವ ಮಾಂಡವಿಯಾ ಹೇಳಿದ್ದಾರೆ. ದರ, ಸುರಕ್ಷತೆ, ಪರಿಣಾಮಕಾರಿತ್ವವನ್ನು ಪರಿಗಣಿಸಿ ರಾಷ್ಟ್ರೀಯ ಅಗತ್ಯ ಔಷಧ ಪಟ್ಟಿ ರೂಪಿಸಲಾಗಿದೆ ಎಂದು ಹೇಳಿದ್ದಾರೆ. ಪರಿಷ್ಕೃತ ಆಗಿರುವ ಔಷಧಗಳ ಪಟ್ಟಿಯಲ್ಲಿ ಹೃದಯ ಚಿಕಿತ್ಸೆಗೆ ಸಂಬಂಧಿಸಿದ ಡಬಿಗಟ್ರಾನ್ ಮತ್ತು ಟೆನೆಕ್ಟೆಪ್ಲೇಸ್‌ಗಳು ಕೂಡ ಸೇರಿವೆ.
Centre has removed the popular antacid salt Ranitidine from the essential medicine list over cancer-causing concerns. 26 medicines have been taken off the list.Ranitidine is popularly sold under the brand names Aciloc, Zinetac, and Rantac, among others, and is commonly prescribed for acidity and stomachache-related issues.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm