ಮೋದಿ ಜನ್ಮದಿನ ; ಚೆನ್ನೈನಲ್ಲಿ ಸೆ.17ರಂದು ಜನಿಸುವ ಶಿಶುಗಳಿಗೆ ಉಂಗುರ ಭಾಗ್ಯ! 

16-09-22 03:47 pm       HK News Desk   ದೇಶ - ವಿದೇಶ

ತಮಿಳುನಾಡಿನ ಬಿಜೆಪಿ ರಾಜ್ಯ ಘಟಕವು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾದ ಸೆಪ್ಟೆಂಬರ್ 17ರಂದು ಜನಿಸುವ ಮಗುವಿಗೆ ಚಿನ್ನದ ಉಂಗುರ ನೀಡುವುದಾಗಿ ಘೋಷಿಸಿದೆ.

ಚೆನ್ನೈ, ಸೆ.16 : ತಮಿಳುನಾಡಿನ ಬಿಜೆಪಿ ರಾಜ್ಯ ಘಟಕವು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾದ ಸೆಪ್ಟೆಂಬರ್ 17ರಂದು ಜನಿಸುವ ಮಗುವಿಗೆ ಚಿನ್ನದ ಉಂಗುರ ನೀಡುವುದಾಗಿ ಘೋಷಿಸಿದೆ.

ಈ ಯೋಜನೆಗಾಗಿ ಚೆನ್ನೈ ನಗರದ ಆರ್‌ಎಸ್‌ಆರ್‌ಎಂ ಆಸ್ಪತ್ರೆಯನ್ನು ಆಯ್ಕೆ ಮಾಡಿದ್ದು ಅಲ್ಲಿ ಸೆ.17ರಂದು ಜನಿಸುವ ಮಗುವಿಗೆ ಎರಡು ಗ್ರಾಮ್ ತೂಕದ ಚಿನ್ನದ ಉಂಗುರ ನೀಡಲಾಗುವುದು ಎಂದು ಕೇಂದ್ರದ ಮಾಹಿತಿ, ಪ್ರಸಾರ ಮತ್ತು ಮೀನುಗಾರಿಕೆ ರಾಜ್ಯ ಸಚಿವ ಎಲ್. ಮುರುಗನ್ ಮಾಹಿತಿ ನೀಡಿದ್ದಾರೆ. ಮಾಹಿತಿ ಪ್ರಕಾರ, ಸೆಪ್ಟೆಂಬರ್ 17 ರಂದು ಈ ಆಸ್ಪತ್ರೆಯಲ್ಲಿ 10ರಿಂದ 15 ಮಕ್ಕಳು ಜನಿಸುವ ನಿರೀಕ್ಷೆಯಿದೆ. ಮೋದಿ ಪರವಾಗಿ ವಿಶೇಷ ಉಡುಗೊರೆಯಾಗಿ ಉಂಗುರ ನೀಡಲಾಗುತ್ತಿದೆ. 

DMK's Udhayanidhi to test electoral waters from Chepauk-Tiruvallikeni, M K  Stalin to seek re-election from Kolathur | Deccan Herald

ಪಕ್ಷದ ರಾಜ್ಯ ಘಟಕದ ವತಿಯಿಂದ ಮೋದಿಯವರ 72ನೇ ಜನ್ಮದಿನದ ಅಂಗವಾಗಿ 720 ಕೇಜಿ ಮೀನುಗಳನ್ನು ವಿತರಿಸಲಾಗುವುದು‌. ಇದಕ್ಕಾಗಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಕೊಳತ್ತೂರು ಕ್ಷೇತ್ರವನ್ನು ಆಯ್ಕೆ ಮಾಡಲಾಗಿದೆ. ಮೋದಿಗೆ 72 ವರ್ಷವಾಗುವುದರಿಂದ 720 ಕೆಜಿ ಮೀನುಗಳನ್ನು ಜನರಿಗೆ ವಿತರಿಸಲಾಗುವುದು ಎಂದವರು ತಿಳಿಸಿದ್ದಾರೆ. 

ಮೋದಿ ಹುಟ್ಟಿದ ದಿನದ ಸಲುವಾಗಿ ದೇಶಾದ್ಯಂತ ಬಿಜೆಪಿ ವತಿಯಿಂದ ರಕ್ತದಾನ, ವೈದ್ಯಕೀಯ ಶಿಬಿರ ಹಮ್ಮಿಕೊಳ್ಳಲಾಗಿದೆ. ಇದರ ನಡುವೆ, ನವಜಾತ ಶಿಶುಗಳಿಗೆ ಮೋದಿ ಹೆಸರಲ್ಲಿ ಉಂಗುರ ನೀಡುತ್ತಿರುವುದು ಗಮನ ಸೆಳೆದಿದೆ.

The Tamil Nadu unit of the Bharatiya Janata Party (BJP) has decided to celebrate Prime Minister Narendra Modi’s birthday on September 17 (Saturday) by presenting gold rings to the newly borns and also distributing 720 kilograms of fish, among other plans.“We have identified the government RSRM hospital in Chennai and decided that all children born on the Prime Minister’s birthday will be given a gold ring,” minister of state in-charge of fisheries and information and broadcasting, L Murugan said on Thursday (September 15).