ಚೀನಾದಲ್ಲಿ ನೋಡ ನೋಡುತ್ತಲೇ ಹೊತ್ತಿ ಉರಿದ ಗಗನಚುಂಬಿ ಕಟ್ಟಡ ! 

16-09-22 10:44 pm       HK News Desk   ದೇಶ - ವಿದೇಶ

ನೋಡ ನೋಡುತ್ತಲೇ 42 ಮಹಡಿಗಳ ಗಗನಚುಂಬಿ​ ಕಟ್ಟಡವೊಂದು ಬೆಂಕಿ ಆಕಸ್ಮಿಕದಿಂದ ಹೊತ್ತಿ ಉರಿದ ಘಟನೆ ಚೀನಾದ ಹುನಾನ್ ಪ್ರಾಂತ್ಯದ ಚಾಂಗ್ಶಾ ನಗರದಲ್ಲಿ ನಡೆದಿದೆ. 

ಚಾಂಗ್ಶಾ (ಚೀನಾ), ಸೆ.16 : ನೋಡ ನೋಡುತ್ತಲೇ 42 ಮಹಡಿಗಳ ಗಗನಚುಂಬಿ​ ಕಟ್ಟಡವೊಂದು ಬೆಂಕಿ ಆಕಸ್ಮಿಕದಿಂದ ಹೊತ್ತಿ ಉರಿದ ಘಟನೆ ಚೀನಾದ ಹುನಾನ್ ಪ್ರಾಂತ್ಯದ ಚಾಂಗ್ಶಾ ನಗರದಲ್ಲಿ ನಡೆದಿದೆ. 

42 ಅಂತಸ್ತಿನ ಈ ಕಟ್ಟಡದಲ್ಲಿ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಕಂಪನಿ ಚೀನಾ ಟೆಲಿಕಾಂ ಕಚೇರಿ ಹೊಂದಿತ್ತು. ಶುಕ್ರವಾರ ಸಂಜೆ 4.30ರ ವೇಳೆಗೆ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಕೆಲವೇ ಕ್ಷಣಗಳಲ್ಲಿ ಇಡೀ ಕಟ್ಟಡಕ್ಕೆ ಬೆಂಕಿ ಆವರಿಸಿದೆ. ಕಟ್ಟಡವು ನೋಡ ನೋಡುತ್ತಲೇ ಹೊತ್ತಿ ಉರಿಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. 

Fire engulfs 42-story building in China - GulfToday

China tower block fire: High-rise building engulfed in flames and smoke in  Changsha | World | News | Express.co.uk

Inferno engulfs huge skyscraper with terrified victims 'trapped inside' -  Daily Star

China tower block fire: High-rise building engulfed in flames and smoke in  Changsha | World | News | Express.co.uk

ಧಗಧಗಿಸುವ ಬೆಂಕಿಯ ಜೊತೆಗೆ ದಟ್ಟ ಕಪ್ಪು ಹೊಗೆ ಉಕ್ಕಿ ಬರುತ್ತಿತ್ತು. ಹಲವಾರು ವಾಹನಗಳಲ್ಲಿ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಘಟನೆಯಲ್ಲಿ ಯಾವುದೇ ಸಾವು-ನೋವು ವರದಿಯಾಗಿಲ್ಲ. ಹೇಗೆ ದಿಢೀರ್ ಬೆಂಕಿ ಕಾಣಿಸಿಕೊಂಡ್ತು ಅನ್ನೋದು ಕೂಡ ಗೊತ್ತಾಗಿಲ್ಲ.

A fire engulfed a skyscraper Friday in the central Chinese city of Changsha, with authorities saying that no casualties had yet been found.The blaze broke out in a 42-floor building housing an office of state-owned telecommunications company China Telecom, according to state broadcaster CCTV."Thick smoke billowed from the site, and dozens of floors burned ferociously," CCTV reported.