ಬ್ರೇಕಿಂಗ್ ನ್ಯೂಸ್
17-09-22 11:21 am HK News Desk ದೇಶ - ವಿದೇಶ
ಕೀವ್, ಸೆ.17 : ಯುದ್ಧಪೀಡಿತ ಉಕ್ರೇನ್ ರಾಜಧಾನಿ ಕೀವ್ ನಗರದಲ್ಲಿ ಗುರುತು ಪತ್ತೆ ಮಾಡಲಾಗದ ಹಾರುವ ವಸ್ತುಗಳು ಕಂಡುಬಂದಿವೆ ಎಂದು ಉಕ್ರೇನ್ ಖಗೋಳಶಾಸ್ತ್ರಜ್ಞರು ತಿಳಿಸಿದ್ದಾರೆ. ರಾಜಧಾನಿ ಕೀವ್ ನಗರದ ಆಗಸದಲ್ಲಿ ಈ ಮಾದರಿಯ ಹಲವು ವಸ್ತುಗಳನ್ನು (UFO) ಪತ್ತೆ ಮಾಡಲಾಗಿದೆ ಎಂದು ಖಗೋಳ ವಿಜ್ಞಾನಿಗಳು ಹೇಳಿದ್ದಾರೆ.
ಈ ಕುರಿತು ಉಕ್ರೇನ್ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನ ಮುಖ್ಯ ಖಗೋಳ ವೀಕ್ಷಣಾಲಯ ವರದಿ ಪ್ರಕಟಿಸಿದ್ದು, ಖಗೋಳಶಾಸ್ತ್ರಜ್ಞರು ರಾಜಧಾನಿ ಕೀವ್ ಮತ್ತು ಸಮೀಪದ ವಿನಾರಿವ್ಕಾ ಗ್ರಾಮದಲ್ಲಿರುವ ಎರಡು ಉಲ್ಕೆ ವೀಕ್ಷಣಾ ಕೇಂದ್ರಗಳಿಂದ ಯುಎಫ್‌ಒಗಳನ್ನು ಪತ್ತೆಹಚ್ಚಲಾಗಿದೆ ಎಂದು ಹೇಳಿದೆ.
ಅಮೆರಿಕದ ಗುಪ್ತಚರ ಸಂಸ್ಥೆ ಪ್ರಕಾರ, ಉಕ್ರೇನ್ ಯುದ್ಧದಲ್ಲಿ ರಷ್ಯಾ ಬಳಸುತ್ತಿರುವ ವಿಮಾನಗಳು ಮತ್ತು ಡ್ರೋನ್‌ಗಳ ಮಾದರಿಗಳೂ ಈ ರೀತಿ ಕಂಡಿದ್ದಿರಲೂ ಬಹುದು ಎಂದು ಹೇಳಿದ್ದಾರೆ. ಆದರೆ ಈ ಹಾರುವ ವಸ್ತುಗಳು ಪದೇ ಪದೇ ಕಾಣಿಸಿದ್ದರೂ, ಅತ್ಯಂತ ಕ್ಷಣಿಕವಾಗಿದ್ದರಿಂದ ಯಾವ ಮಾದರಿಯದ್ದೆಂದು ಗುರುತಿಸಲು ಕಷ್ಟವಾಗಿದೆ ಎಂದು ಉಕ್ರೇನ್ ಖಗೋಳಶಾಸ್ತ್ರಜ್ಞರು ತಿಳಿಸಿದ್ದಾರೆ.
ಕೀವ್ ಆಗಸದಲ್ಲಿ ಗಮನಾರ್ಹ ಸಂಖ್ಯೆಯ ವಸ್ತುಗಳನ್ನು ಗಮನಿಸುತ್ತಿದ್ದೇವೆ. ಕ್ಷಣಿಕ ಸಮಯದಲ್ಲಿ ಬಂದು ಹೋಗುವುದರಿಂದ ಅವುಗಳ ಸ್ವಭಾವ ಸ್ಪಷ್ಟವಾಗಿಲ್ಲ ಎಂದು ಖಗೋಳಶಾಸ್ತ್ರಜ್ಞರು ಹೇಳಿದ್ದಾರೆ. ಇಂಥ ಯುಎಫ್‌ಒಗಳನ್ನು ಕಾಸ್ಮಿಕ್ ಮತ್ತು ಫ್ಯಾಂಟಮ್ ಎಂದು ಎರಡು ವಿಧಗಳದ್ದೆಂದು ವಿಂಗಡಿಸಲಾಗಿದೆ. ಕಾಸ್ಮಿಕ್ ವಸ್ತು ಪ್ರಕಾಶಮಾನವಾಗಿ ಕಾಣಿಸಿಕೊಂಡರೆ, ಫ್ಯಾಂಟಮ್ ವಸ್ತುಗಳು ತನ್ನ ಮೇಲೆ ಬೀಳುವ ಬೆಳಕನ್ನು ಹೀರಿಕೊಂಡು ಕ್ಷಣಮಾತ್ರದಲ್ಲಿ ಕಾಣದಾಗುವ ವಸ್ತುವಾಗಿದೆ ಎಂದು ಖಗೋಳ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.
ಸೆಕೆಂಡಿನ ಹತ್ತನೇ ಒಂದರಷ್ಟು ಸಮಯದಲ್ಲಿ ಬಂದು ಹೋಗುವ ವಸ್ತುಗಳು ಕಣ್ಣಿನಲ್ಲಿ ಗೋಚರ ಆಗೋದಿಲ್ಲ. ಸಾಮಾನ್ಯ ಕ್ಯಾಮರಾಗಳಲ್ಲಿಯೂ ಸೆರೆಹಿಡಿಯಲು ಅಸಾಧ್ಯ. ಕನಿಷ್ಠ ಸೆಕೆಂಡಿನ ಹತ್ತನೇ ನಾಲ್ಕರಷ್ಟು ಸಮಯವಾದ್ರೂ ಒಂದು ವಸ್ತು ಕಾಣಿಸಿಕೊಂಡರೆ ಮಾತ್ರ ಕಣ್ಣು ಗುರುತು ಹಿಡಿಯುತ್ತದೆ. ಕ್ಯಾಮರಾಗಳಲ್ಲೂ ಫ್ಲಾಶ್ ಆಗುತ್ತದೆ. ಆದರೆ ವಿಶೇಷ ಮಾದರಿಯ ಶಟರ್ ಸ್ಪೀಡ್ ಸಾಮರ್ಥ್ಯದ ಕ್ಯಾಮರಾಗಳಲ್ಲಿ ಇದನ್ನು ಸೆರೆ ಹಿಡಿಯಲು ಸಾಧ್ಯ. ಹೀಗಿದ್ದರೂ, ಖಗೋಳಶಾಸ್ತ್ರಜ್ಞರು ಇದನ್ನು ಪತ್ತೆ ಮಾಡಿದ್ದಾರೆ. ಆದರೆ ಯಾವ ಮಾದರಿಯದ್ದೆಂದು ಗುರುತು ಹಿಡಿಯಲು ಸಾಧ್ಯವಾಗಿಲ್ಲ. ಉಕ್ರೇನ್ ಯುದ್ಧ ಸತತ ಏಳನೇ ತಿಂಗಳಲ್ಲಿ ಮುಂದುವರಿದಿದ್ದು ರಷ್ಯಾದ ಆಧುನಿಕ ಮಾದರಿಯ ಶಸ್ತ್ರಗಳೇ ಎನ್ನುವ ಬಗ್ಗೆ ಖಚಿತವಾಗಿಲ್ಲ. ಹೊರ ಜಗತ್ತಿನ ಏಲಿಯನ್ಸ್ ಅಥವಾ ಹಾರುವ ತಟ್ಟೆಗಳೇ ಎನ್ನುವ ಬಗ್ಗೆಯೂ ವಿಜ್ಞಾನಿಗಳಲ್ಲಿ ಕುತೂಹಲ ಇದೆ.
Unidentified Flying Objects (UFOs) are filling the skies above Kyiv, according to Ukrainian astronomers. A paper with the surprising claims has been published by the Main Astronomical Observatory of the National Academy of Sciences of Ukraine. In the paper titled "Unidentified area phenomena Observations of events", the astronomers said the UFOs have been detected from two meteor observation stations in Kyiv and nearby village of Vinarivka. However, US intelligence agencies said these flying objects are too fleeting to identify, pointed to the use of aircraft and drones being used in the ongoing Ukraine war.
Unidentified Flying Objects (UFOs) are filling the skies above Kyiv, according to Ukrainian astronomers. A paper with the surprising claims has been published by the Main Astronomical Observatory of the National Academy of Sciences of Ukraine. In the paper titled "Unidentified area phenomena Observations of events", the astronomers said the UFOs have been detected from two meteor observation stations in Kyiv and nearby village of Vinarivka.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm