ಬೆಹ್ರೈನ್ ; ವಿವಿಧ ಕ್ಷೇತ್ರಗಳ ಸಾಧಕರಿಗೆ ಇಂಡಿಯನ್ ಸೋಶಿಯಲ್ ಫೋರಮ್ ಪ್ರಶಸ್ತಿ ಪ್ರದಾನ 

17-09-22 12:37 pm       HK News Desk   ದೇಶ - ವಿದೇಶ

ಸಮಾಜದಲ್ಲಿ ತಮ್ಮನ್ನು ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡವರಿಗೆ ಇಂಡಿಯನ್ ಸೋಶಿಯಲ್ ಫೋರಂ ನೀಡುವ ಈ ವರ್ಷದ ಪ್ರಶಸ್ತಿಯನ್ನು ಮನಾಮಾ ಮುಹರ್ರಕ್ಅಲ್ ಇಸ್ಲಾಹ್ ಸೊಸೈಟಿ ಹಾಲ್ ನಲ್ಲಿ  ಪ್ರದಾನ ಮಾಡಲಾಯಿತು.

ಮನಾಮ,(ಬೆಹ್ರೈನ್) ಸೆ.17 : ಸಮಾಜದಲ್ಲಿ ತಮ್ಮನ್ನು ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡವರಿಗೆ ಇಂಡಿಯನ್ ಸೋಶಿಯಲ್ ಫೋರಂ ನೀಡುವ ಈ ವರ್ಷದ ಪ್ರಶಸ್ತಿಯನ್ನು ಮನಾಮಾ ಮುಹರ್ರಕ್ಅಲ್ ಇಸ್ಲಾಹ್ ಸೊಸೈಟಿ ಹಾಲ್ ನಲ್ಲಿ  ಪ್ರದಾನ ಮಾಡಲಾಯಿತು.

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಡಾ. ಮುಸ್ತಫಾ ರಜಾ ರಬ್ಬಾನಿ (ಬಿಹಾರ) ಅವರಿಗೆ ಶಿಕ್ಷಣ ತಜ್ಞ ಪ್ರಶಸ್ತಿ, ಸಾಮಾಜಿಕ ಕಾರ್ಯಕರ್ತರಾದ ಜವಾದ್ ಪಾಷಾ (ಕರ್ನಾಟಕ) ಅತ್ಯುತ್ತಮ ಸಾಮಾಜಿಕ ಕಾರ್ಯಕರ್ತ ಪ್ರಶಸ್ತಿ,ಮಾನವೀಯ ಸೇವೆಯಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸಿದ ಸಾಬು ಚಿರಮ್ಮೆಲ್ ಮತ್ತು ಫೈಸಲ್ ಪತಂಡಿ  (ಕೇರಳ) ಇವರಿಗೆ ಪ್ರಶಸ್ತಿಯನ್ನು ನೀಡಲಾಯಿತು. 

ಅತ್ಯುತ್ತಮ ಬರಹಗಾರ ಪ್ರಶಸ್ತಿಯನ್ನು ಅಬ್ದುಲ್ ಖಾಯ್ (ತಮಿಳುನಾಡು) ಮತ್ತು ಉದ್ಯಮ ಕ್ಷೇತ್ರದಲ್ಲಿ ಸಾಧನೆಗೈದ ರಿಯಾಜ್ ಬಿ.ಕೆ (ಕರ್ನಾಟಕ) ಅವರಿಗೆ ಅತ್ಯುತ್ತಮ ಉದ್ಯಮಿ ಪ್ರಶಸ್ತಿಯನ್ನು ನೀಡಲಾಯಿತು. ಇಂಡಿಯನ್ ಸೋಶಿಯಲ್ ಫೋರಮ್ ಆಯೋಜಿಸಿದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಇಂಡಿಯನ್ ಸೋಶಿಯಲ್ ಫೋರಂ ಕೇಂದ್ರ ಸಮಿತಿ ಅಧ್ಯಕ್ಷ ಅಲಿ ಅಕ್ಬರ್ ಮತ್ತು ಪ್ರಧಾನ ಕಾರ್ಯದರ್ಶಿ ರಫೀಕ್ ಅಬ್ಬಾಸ್ ಉಪಸ್ಥಿತರಿದ್ದರು.

Indian Social Forum Bahrain organizes award ceremony for achievers from various fields.