ಬ್ರೇಕಿಂಗ್ ನ್ಯೂಸ್
17-09-22 04:08 pm HK News Desk ದೇಶ - ವಿದೇಶ
ನವದೆಹಲಿ, ಸೆ.17: ಪ್ರಧಾನಿ ಮೋದಿ 72ನೇ ಹುಟ್ಟುಹಬ್ಬದ ಉಡುಗೊರೆಯಾಗಿ ಆಫ್ರಿಕನ್ ಚೀತಾಗಳು ಭಾರತಕ್ಕೆ ಬಂದಿವೆ. ನಮೀಬಿಯಾದಿಂದ ತರಿಸಲಾದ ಎಂಟು ಚೀತಾಗಳು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಕಾಲಿರಿಸಿದ್ದು ಅವುಗಳನ್ನು ಪ್ರಧಾನಿ ನರೇಂದ್ರ ಮೋದಿ ಉದ್ಯಾನಕ್ಕೆ ಬಿಡುಗಡೆ ಮಾಡಿದರು.
ಕಪ್ಪು ಟೋಪಿ, ಕಪ್ಪು ಕನ್ನಡಕ ಧರಿಸಿದ್ದ ಪ್ರಧಾನಿ ಮೋದಿ, ವೃತ್ತಿಪರ ಕ್ಯಾಮೆರಾದೊಂದಿಗೆ ಜಗತ್ತಿನಲ್ಲಿ ಅಳಿವಿನಂಚಿನಲ್ಲಿರುವ ಚೀತಾಗಳ ಚಿತ್ರಗಳನ್ನು ಸೆರೆಹಿಡಿದರು. ಎಲ್ಲ ಚೀತಾಗಳಿಗೂ ರೇಡಿಯೋ ಕಾಲರ್‌ಗಳನ್ನು ಅಳವಡಿಸಿದ್ದು ಚಲನವಲನದ ಮೇಲೆ ನಿಗಾ ಇಡಲಾಗುವುದು. ಚೀತಾಗಳ ಬಗ್ಗೆ ದಿನದ 24 ಗಂಟೆಯೂ ನಿಗಾ ವಹಿಸಲು ಇದಕ್ಕೆಂದೇ ಮೀಸಲಾದ ತಂಡ ಇರಲಿದೆ.
ನಮೀಬಿಯಾದಿಂದ ಶುಕ್ರವಾರ ಸಂಜೆ ಹೊರಟಿದ್ದ ಚೀತಾಗಳನ್ನು ಹೊತ್ತ ಭಾರತೀಯ ವಾಯುಪಡೆ (ಐಎಎಫ್) ವಿಮಾನವು ಗ್ವಾಲಿಯರ್‌ನ ಮಹಾರಾಜಪುರ ವಾಯುನೆಲೆಗೆ ಶನಿವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಬಂದಿಳಿಯಿತು. ವಾಯುನೆಲೆಯಿಂದ ಚೀತಾಗಳನ್ನು ವಾಯುಪಡೆ ಹೆಲಿಕಾಪ್ಟರ್‌ನಲ್ಲಿ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ವರ್ಗಾಯಿಸಲಾಗಿತ್ತು.
ಮೋದಿ ಜನ್ಮದಿನಕ್ಕೆ ಚೀತಾ ಉಡುಗೊರೆ
ಪ್ರಧಾನಿ ಮೋದಿ ಅವರ ಜನ್ಮದಿನಕ್ಕೆ ಇದಕ್ಕಿಂತ ದೊಡ್ಡ ಉಡುಗೊರೆ ಇಲ್ಲ ಎಂದು ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ. ನಮೀಬಿಯಾದಿಂದ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ವನ್ಯಜೀವಿಗಳ ಐತಿಹಾಸಿಕ ಸಾಗಾಟವು ಶತಮಾನದ ಅತಿ ದೊಡ್ಡ ವನ್ಯಜೀವಿ ಸ್ಥಾನಾಂತರ ಕಾರ್ಯಕ್ರಮ. ಇದು ರಾಜ್ಯದ ಪ್ರವಾಸೋದ್ಯಮ ವೃದ್ಧಿಗೆ ದೊಡ್ಡ ಕೊಡುಗೆ ನೀಡಲಿದೆ ಎಂದು ತಿಳಿಸಿದ್ದಾರೆ.
ಚೀತಾಗಳ ಜೊತೆಗೆ ಜಗತ್ತಿನ ಮುಂಚೂಣಿ ಚೀತಾ ಪರಿಣತೆ ಡಾ. ಲೌರಿ ಮಾರ್ಕರ್ ಆಗಮಿಸಿದ್ದರು. ನಮೀಬಿಯಾದಲ್ಲಿ ಕೇಂದ್ರ ಕಚೇರಿ ಹೊಂದಿರುವ ಚೀತಾ ಸಂರಕ್ಷಣಾ ತಂಡದ ಸದಸ್ಯೆಯೂ ಆಗಿರುವ ಲೌರಿ ಮಾರ್ಕರ್, ಚೀತಾಗಳಲ್ಲಿ ಐದು ಹೆಣ್ಣು ಮರಿಗಳಿದ್ದು ಎರಡರಿಂದ ಐದು ವರ್ಷಗಳ ವಯಸ್ಸಿನವಾಗಿವೆ. ಗಂಡು ಚೀತಾಗಳು 4.5 ವರ್ಷದಿಂದ 5.5 ವರ್ಷದವು. ನೋಡುವುದಕ್ಕೆ ಸೌಮ್ಯವಾಗಿದ್ದರೂ ಅತ್ಯಂತ ಪ್ರಖರವಾಗಿರುತ್ತವೆ ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಏಷ್ಯನ್ ಚೀತಾಗಳ ಕಣ್ಮರೆ
ಭಾರತವು ಈ ಹಿಂದೆ ಏಷ್ಯಾದ ಚೀತಾಗಳಿಗೆ ನೆಲೆಯಾಗಿತ್ತು. ಆದರೆ 1952ರಲ್ಲಿ ಈ ಪ್ರಾಣಿಗಳು ದೇಶದಲ್ಲಿ ವಿನಾಶಗೊಂಡಿವೆ ಎಂದು ಘೋಷಣೆ ಮಾಡಲಾಗಿತ್ತು. ಆನಂತರ, ಚೀತಾಗಳ ಸಂರಕ್ಷಣೆಗಾಗಿ ಕಾರ್ಯಕ್ರಮ ಆಗಿದ್ದರೂ, ಹೊರ ದೇಶಗಳಿಂದ ತರಿಸಿ ಸಾಕುವ ಪ್ರಯತ್ನಗಳು ಆಗಿರಲಿಲ್ಲ.
ಹಾಗೆ ನೋಡಿದರೆ, ಆಫ್ರಿಕನ್ ಚೀತಾಗಳ ಪರಿಚಯ ಕಾರ್ಯಕ್ರಮ 2009ರಲ್ಲಿಯೇ ಆರಂಭಿಸಲಾಗಿತ್ತು. ಕೋವಿಡ್ ಸಾಂಕ್ರಾಮಿಕದ ಕಾರಣ ಕಳೆದ ಎರಡು ವರ್ಷಗಳಲ್ಲಿ ಚೀತಾಗಳ ಸ್ಥಳಾಂತರ ಆಗಿರಲಿಲ್ಲ. ಅತ್ಯಂತ ಕ್ಷೀಣಿಸುತ್ತಿರುವ ಪ್ರಾಣಿಗಳೆಂದು ಪರಿಗಣಿಸಿರುವ ಚೀತಾ ತಳಿಗಳು ಜಗತ್ತಿನಾದ್ಯಂತ 7,000ಕ್ಕಿಂತ ಕಡಿಮೆ ಇದೆ. ಹೀಗಾಗಿ ಅವುಗಳ ಸಂರಕ್ಷಣೆಗೆ ಭಾರತ ಸರಕಾರ ಒತ್ತು ನೀಡಿದೆ.
#WATCH | Prime Minister Narendra Modi releases the cheetahs that were brought from Namibia this morning, at their new home Kuno National Park in Madhya Pradesh.
— ANI (@ANI) September 17, 2022
(Source: DD) pic.twitter.com/CigiwoSV3v
Eight cheetahs were brought to Gwalior from Namibia in a special plane on Saturday morning as part of the cheetah reintroduction programme. The animals were later flown to the KNP, located in Sheopur district, in two Indian Air Force (IAF) helicopters.
15-07-25 01:32 pm
Bangalore Correspondent
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 02:28 pm
HK News Desk
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
ಕಲ್ಲು ಮರಳಿನ ಸಮಸ್ಯೆಯಿಂದ ಜನರ ತಲೆಗೆ ಚಪ್ಪಡಿ ಕಲ್ಲು...
14-07-25 09:55 pm
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
15-07-25 01:13 pm
HK News Desk
Mangalore Crime, Police: ದುಬೈನಲ್ಲಿ ವಹಿವಾಟು ;...
15-07-25 11:38 am
ಮ್ಯಾಟ್ರಿಮನಿ ಸೈಟಲ್ಲಿ ಸಿಕ್ಕ ಗೆಳತಿಯಿಂದಲೇ ಮೋಸ ; ಆ...
13-07-25 05:23 pm
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm