ಬ್ರೇಕಿಂಗ್ ನ್ಯೂಸ್
19-09-22 12:35 pm HK News Desk ದೇಶ - ವಿದೇಶ
ತಿರುವನಂತಪುರಂ, ಸೆ.19: ಭಾಗ್ಯಲಕ್ಷ್ಮಿ ಕೆಲವೊಮ್ಮೆ ಯಾವ ಮೂಲೆಯಿಂದ ಮನೆ ಒಳಕ್ಕೆ ಕಾಲಿಡುತ್ತಾಳೆಂದು ಹೇಳೋದಿಕ್ಕೆ ಬರಲ್ಲ. ಕೇರಳದಲ್ಲಿ ಬಡ ಆಟೋ ಚಾಲಕನ ಪಾಲಿಗೆ ಅದೃಷ್ಟ ಲಕ್ಷ್ಮಿಯೇ ಒಲಿದು ಬಂದಿದ್ದಾಳೆ. ಹಣ ಇಲ್ಲದೆ, ಮಗಳ ದುಡ್ಡಿನಲ್ಲಿ 500 ರೂ. ಮೊತ್ತದ ಲಾಟರಿ ಟಿಕೆಟ್ ಖರೀದಿಸಿದ್ದ ವ್ಯಕ್ತಿಯೊಬ್ಬ ಒಂದೇ ದಿನದಲ್ಲಿ ಕೋಟ್ಯಾಧಿಪತಿ ಆಗಿದ್ದಾನೆ. ಕೇರಳ ಸರಕಾರದ ಓಣಂ ಲಾಟರಿಯಲ್ಲಿ ಬರೋಬ್ಬರಿ 25 ಕೋಟಿ ತನ್ನನ್ನು ತಾನೇ ನಂಬದಾಗಿದ್ದಾನೆ.
ತಿರುವನಂತಪುರದ ಶ್ರೀ ವರಹಂ ಎಂಬಲ್ಲಿನ ನಿವಾಸಿ ಅನೂಪ್ ಎಂಬ ಆಟೋ ಚಾಲಕ ಲಾಟರಿ ಗೆದ್ದ ಅದೃಷ್ಟವಂತ. ಲಾಟರಿ ಡ್ರಾಗೊಳ್ಳುವ ದಿನಾಂಕದ ಒಂದು ದಿನದ ಹಿಂದೆ ಮನೆಗೆ ಮರಳುತ್ತಿದ್ದಾಗ ತಿರುವನಂತಪುರದ ಪಜವಂಗಡಿಯ ಗಣಪತಿ ದೇಗುಲದ ಬಳಿ ಅಂಗಡಿಯೊಂದರಲ್ಲಿ ಲಾಟರಿ ಖರೀದಿಸಿದ್ದರು. ಟಿಜೆ 750605 ನಂಬರಿನ ಲಾಟರಿ ಟಿಕೆಟ್ ಮೂಲಕ ಇವರಿಗೆ ಅದೃಷ್ಟದ ಬಾಗಿಲು ತೆರೆದಿದೆ. ಲಾಟರಿ ಏಜೆಂಟ್ ತಂಗರಾಜ್ ಎಂಬವರಿಂದ ಖರೀದಿಸಿದ ಈ ಲಾಟರಿಯಿಂದ ಅನೂಪ್ ಒಂದೇ ದಿನದಲ್ಲಿ ಕೋಟ್ಯಧಿಪತಿಯಾಗಿದ್ದು, ದೇಶದ ಗಮನಸೆಳೆದಿದ್ದಾರೆ.
ಆಟೋ ಚಾಲಕ ಅನೂಪ್ ಬಡ ಕುಟುಂಬದ ವ್ಯಕ್ತಿಯಾಗಿದ್ದು ಆಟೋ ಚಾಲನೆಯಿಂದಲೇ ಜೀವನ ದೂಡುತ್ತಿದ್ದ. ಲಾಟರಿ ಟಿಕೆಟ್ ದರ 500 ರೂಪಾಯಿ ಇದ್ದುದರಿಂದ ಅದನ್ನು ಕೊಳ್ಳುವುದಕ್ಕೂ ಹಣ ಇರಲಿಲ್ಲ. ತನ್ನ ಮಗಳ ಪಿಗ್ಗಿ ಡಬ್ಬಿಯಲ್ಲಿದ್ದ ಐನೂರು ರೂ. ತೆಗೆದುಕೊಂಡು ಹೋಗಿ ಲಾಟರಿ ಖರೀದಿಸಿದ್ದರು. ಮಗಳ ಅದೃಷ್ಟದ ಫಲವೋ ಎಂಬಂತೆ ಅದೇ ಲಾಟರಿ ಟಿಕೇಟಿಗೆ 25 ಕೋಟಿ ರೂ. ಬಹುಮಾನ ಬಂದಿದೆ. ಭಾನುವಾರ ಮಧ್ಯಾಹ್ನ ಎರಡು ಗಂಟೆಗೆ ಕೇರಳದ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಅವರು ಲಾಟರಿ ಬಹುಮಾನದ ಫಲಿತಾಂಶ ಪ್ರಕಟಿಸಿದ್ದರು.
Ticket number TJ-750605 has emerged as the winner at the much-awaited Onam bumper lucky draw, which carries a jackpot of Rs 25 crore. Anoop, a native of Sreevaraham in Thiruvananthapuram, has won the mega prize.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm