ಬ್ರೇಕಿಂಗ್ ನ್ಯೂಸ್
19-09-22 05:21 pm HK News Desk ದೇಶ - ವಿದೇಶ
ಲಕ್ನೋ, ಸೆ.19: ದೇಶದಲ್ಲಿರುವ ಎಲ್ಲ ಮದ್ರಸಗಳನ್ನು ಗನ್ ಪೌಡರ್ ಇಟ್ಟು ಸ್ಫೋಟಿಸಬೇಕು. ಮದ್ರಸದಲ್ಲಿರುವ ಮಕ್ಕಳ ತಲೆಗೆ ಖುರಾನ್ ಹೆಸರಿನ ವೈರಸ್ ತುಂಬುತ್ತಿದ್ದಾರೆ. ಅವರ ತಲೆಯಲ್ಲಿ ತುಂಬಿರುವ ವೈರಸ್ ಕಿತ್ತೊಗೆಯಲು ಮಕ್ಕಳನ್ನು ನಿಗಾ ಕೇಂದ್ರಕ್ಕೆ ಹಾಕಬೇಕು ಎಂದು ವಿವಾದಿತ ಯತಿ ನರಸಿಂಗಾನಂದ ಸರಸ್ವತಿ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ನರಸಿಂಗಾನಂದ ವಿರುದ್ಧ ಆಲಿಗಢ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಆಲಿಗಢದಲ್ಲಿ ಹಿಂದು ಮಹಾಸಭಾ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಯತಿ ನರಸಿಂಗಾನಂದ ಈ ಹೇಳಿಕೆ ನೀಡಿದ್ದಾರೆ. ಚೀನಾದಲ್ಲಿ ಯಾವ ರೀತಿ ಮದ್ರಸಾಗಳನ್ನು ಬಾಂಬ್ ಇಟ್ಟು ಸ್ಫೋಟ ಮಾಡಲಾಗುತ್ತಿದೆಯೋ ಅದೇ ರೀತಿ ತೆರವು ಮಾಡಬೇಕು. ಅಲ್ಲದೆ ಆಲಿಗಢ ಮುಸ್ಲಿಂ ವಿವಿಯನ್ನೂ ಮದ್ರಸಾಗಳ ರೀತಿಯಲ್ಲೇ ಸ್ಫೋಟಿಸಬೇಕು. ಅಲ್ಲಿ ಕಲಿಯುವ ಮಕ್ಕಳನ್ನು ನಿಗಾ ಕೇಂದ್ರಕ್ಕೆ ಕಳುಹಿಸಿ ಅಲ್ಲಿ ಅವರ ಮೆದುಳನ್ನು ಪರೀಕ್ಷೆಗೊಡ್ಡಬೇಕು. ತಲೆಯಲ್ಲಿ ತುಂಬಿರುವ ವೈರಸನ್ನು ತೆಗೆಸಬೇಕು ಎಂದು ಹೇಳಿದ್ದಾರೆ.
ಕಳೆದ ಬಾರಿ ಹರಿದ್ವಾರದಲ್ಲಿ ನರಸಿಂಗಾನಂದ ಇದೇ ರೀತಿ ದ್ವೇಷದ ಹೇಳಿಕೆ ನೀಡಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದರು. ಇತ್ತೀಚೆಗೆ ಗಾಂಧೀಜಿ ಬಗ್ಗೆಯೂ ಅವಹೇಳನಕಾರಿ ಮಾತನಾಡಿದ್ದರು. ದೇಶ ವಿಭಜನೆ ಸಂದರ್ಭದಲ್ಲಿ ಒಂದು ಕೋಟಿ ಹಿಂದುಗಳು ಕೊಲ್ಲಲ್ಪಟ್ಟ ಘಟನೆಗೆ ಮಹಾತ್ಮ ಗಾಂಧಿಯೇ ಹೊಣೆಗಾರ ಎಂದು ಹೇಳಿಕೆ ನೀಡಿ ವಿವಾದಕ್ಕೊಳಗಾಗಿದ್ದರು. ಆ ಬಗ್ಗೆಯೂ ಪೊಲೀಸರು ಕೇಸು ದಾಖಲಿಸಿದ್ದಾರೆ.
ಆಲಿಗಢ್ ಕಾರ್ಯಕ್ರಮದಲ್ಲಿ ಸ್ವಾಮೀಜಿ, ಭಾರತ್ ಜೋಡೊ ನಡೆಸುತ್ತಿರುವ ರಾಹುಲ್ ಗಾಂಧಿಯ ಬಗ್ಗೆಯೂ ಟೀಕಿಸಿದ್ದು ಆತನೊಬ್ಬ ಜೋಕರ್ ಎಂದಿದ್ದಾರೆ. ರಾಹುಲ್ ಗಾಂಧಿಗೆ ಉತ್ತರ ಪ್ರದೇಶದಲ್ಲಿ ಗೆಲ್ಲಲಿಕ್ಕಾಗದೆ ಕೇರಳದ ವಯನಾಡಿಗೆ ತೆರಳಿದ್ದಾರೆ. ಆತ ಜಿಹಾದಿಗಳ ಜೊತೆ ಸೇರಿ ಯಾತ್ರೆ ನಡೆಸುತ್ತಿದ್ದಾರೆ ಎಂದು ಹೇಳಿದ್ದರು. ರಾಹುಲ್ ಗಾಂಧಿ ಭಾರತವನ್ನು ಜೋಡಿಸಬೇಕೆಂದಿದ್ದರೆ ಮೊದಲು ಪಾಕಿಸ್ಥಾನ ಮತ್ತು ಬಾಂಗ್ಲಾಕ್ಕೆ ಹೋಗಿ ಅದನ್ನು ಭಾರತದ ಜೊತೆ ಜೋಡಿಸಬೇಕು. ಅದನ್ನು ವಿಭಜಿಸಿದ್ದು ಮಹಾತ್ಮ ಗಾಂಧಿ. ಅವನ್ನು ಮತ್ತೆ ಜೋಡಿಸಿದರೆ ನಾವೆಲ್ಲ ರಾಹುಲ್ ಗಾಂಧಿ ಜೊತೆ ಕೈಜೋಡಿಸುತ್ತೇವೆ ಎಂದು ಹೇಳಿದ್ದಾರೆ.
Controversial preacher Yati Narsinghanand Saraswati has been booked for a statement where he allegedly called for the demolition of madrasas and the Aligarh Muslim University using "gunpowder".
15-07-25 01:32 pm
Bangalore Correspondent
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 02:28 pm
HK News Desk
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
ಕಲ್ಲು ಮರಳಿನ ಸಮಸ್ಯೆಯಿಂದ ಜನರ ತಲೆಗೆ ಚಪ್ಪಡಿ ಕಲ್ಲು...
14-07-25 09:55 pm
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
15-07-25 01:13 pm
HK News Desk
Mangalore Crime, Police: ದುಬೈನಲ್ಲಿ ವಹಿವಾಟು ;...
15-07-25 11:38 am
ಮ್ಯಾಟ್ರಿಮನಿ ಸೈಟಲ್ಲಿ ಸಿಕ್ಕ ಗೆಳತಿಯಿಂದಲೇ ಮೋಸ ; ಆ...
13-07-25 05:23 pm
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm