ಬ್ರೇಕಿಂಗ್ ನ್ಯೂಸ್
20-09-22 07:03 pm HK News Desk ದೇಶ - ವಿದೇಶ
ಕಾಸರಗೋಡು, ಸೆ.20: ತಾಯಿಯೊಂದಿಗೆ ಜಗಳವಾಡಿದ ಹದಿಹರೆಯದ ಮಗ ಆಕೆಯನ್ನು ಗ್ರೈಂಡರ್ ಕಲ್ಲಿನಿಂದ ತಲೆಗೆ ಹೊಡೆದು ಕೊಲ್ಲಲು ಯತ್ನಿಸಿದ್ದಲ್ಲದೆ, ಆನಂತರ ತಾನೇ ನೇಣು ಬಿಗಿದು ಸಾವಿಗೆ ಶರಣಾದ ಘಟನೆ ಹೊಸದುರ್ಗದಲ್ಲಿ ನಡೆದಿದೆ.
ಹೊಸದುರ್ಗ ತಾಲೂಕಿನ ಮಡಿಕೈ ನಿವಾಸಿ ಸುಧಾ (37) ಅವರ ಮೇಲೆ ಐಟಿಐ ಓದುತ್ತಿದ್ದ ಮಗ ಸುಜಿತ್ (19) ಹಲ್ಲೆ ನಡೆಸಿದ್ದಾನೆ. ಆನಂತರ ತಾನೇ ಸಾವಿಗೆ ಶರಣಾಗಿದ್ದಾನೆ. ಸುಜಿತ್ ಒಬ್ಬನೇ ಮಗನಾಗಿದ್ದು ಕಯ್ಯೂರು ಐಟಿಐ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದ. ಸುಧಾ ಅವರ ಪತಿ ಇತ್ತೀಚೆಗೆ ಸಾವು ಕಂಡಿದ್ದರು. ಆನಂತರ, ಸುಧಾ ಮಾನಸಿಕವಾಗಿ ನೊಂದಿದ್ದು ಮನೆಯಲ್ಲಿ ಮಗನನ್ನು ಹೊರಗೆ ಹೋಗದಂತೆ ಒತ್ತಡ ಹೇರುತ್ತಿದ್ದರು. ಸದಾ ತನ್ನ ಜೊತೆಗೇ ಇರುವಂತೆ ಮಗನಲ್ಲಿ ಹೇಳುತ್ತಿದ್ದರು.
ಇದರಿಂದ ಹಿಂಸೆಯಾಗಿದ್ದ ಸುಜಿತ್, ತಾಯಿ ಜೊತೆ ಜಗಳ ಮಾಡುತ್ತಿದ್ದ. ಓಣಂ ಹಿನ್ನೆಲೆಯಲ್ಲಿ ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮ ಇದ್ದುದರಿಂದ ಸುಜಿತ್ ಅಲ್ಲಿಗೆ ಹೊರಟು ನಿಂತಿದ್ದ. ಈ ವೇಳೆ, ತಾಯಿ ಮಗನನ್ನು ಹೊರಗೆ ಹೋಗಲು ಬಿಡದೆ ಜಗಳ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಇದರಿಂದ ಕುಪಿತನಾದ ಸುಜಿತ್ ತಾಯಿ ಮೇಲೆಯೇ ಗ್ರೈಂಡರ್ ಕಲ್ಲನ್ನು ಎತ್ತಿ ಬಡಿದಿದ್ದಾನೆ. ಅಲ್ಲದೆ, ತೆಂಗಿನ ಚಿಪ್ಪನ್ನು ತಲೆಗೆ ಬಡಿದು ಹಲ್ಲೆ ನಡೆಸಿದ್ದಾನೆ. ಇದರಿಂದ ತೀವ್ರ ಏಟು ಬಿದ್ದು ಸುಧಾ ಗಂಭೀರ ಸ್ಥಿತಿಗೆ ಒಳಗಾಗಿದ್ದಾರೆ. ಇದರಿಂದ ನೊಂದ ಸುಜಿತ್ ತಾನೇ ಸಾವಿಗೆ ಶರಣಾಗಿದ್ದಾನೆ. ಹೊಸದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
In a shocking incident reported from Hosadurga Madikai of the district, a youth, student of ITI, dropped a grinding stone on the head of his mother who was asleep and also hit her head with coconut scrapper and later killed himself by hanging.Sudha (37), a resident of Madikai Alaipathukaran, is the woman who is seriously injured. Her only son, Kayyur ITI student Sujith is the one who hit her and later killed himself.
09-04-26 04:33 pm
HK News Staffer
ಶರಣ್ಯ ನಾಪತ್ತೆ ಪ್ರಕರಣದಲ್ಲಿ ಟ್ವಿಸ್ಟ್ ; ನಕ್ಸಲ್ ಲ...
09-04-26 03:37 pm
ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆಯಾಗಿದೆ ಎಂಬ ವದಂತಿಗೆ...
08-04-26 09:35 pm
ಜಯಮೃತ್ಯುಂಜಯ ಸ್ವಾಮೀಜಿ ಬೆತ್ತಲೆ ವೀಡಿಯೋ ಕೇಸಿಗೆ ಟ್...
08-04-26 08:44 pm
ಚಂದ್ರದ್ರೋಣ ಪರ್ವತ ಶ್ರೇಣಿಗೆ ಪ್ರವಾಸ ಬಂದಿದ್ದ ಕೇರಳ...
08-04-26 02:09 pm
09-04-26 07:43 pm
HK News Staffer
ಕದನ ವಿರಾಮದ ಅಂತಿಮ ಕ್ಷಣದಲ್ಲಿ ಇಸ್ರೇಲ್, ಯುಎಇ, ಕತಾ...
08-04-26 06:59 pm
ಜಾಗತಿಕ ಮಾರುಕಟ್ಟೆ : ಇರಾನ್-ಅಮೆರಿಕ ಕದನ ವಿರಾಮ ಹಿನ...
08-04-26 02:39 pm
ಅಮೆರಿಕ–ಇರಾನ್ ನಡುವೆ 2 ವಾರಗಳ ಕದನ ವಿರಾಮ ಘೋಷಣೆ; ಟ...
08-04-26 10:36 am
ಇರಾನ್ ಗೆ ಆರ್ಥಿಕ ನೆರವಿಗೆ ಮುಂದಾಗಿದ್ದ ಕಾಶ್ಮೀರಿಗಳ...
07-04-26 10:44 pm
07-04-26 01:22 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಪರಿಚಿತ ಶವ ಪತ...
06-04-26 07:58 pm
ಉಡುಪಿ ; ಬಾವಿಗೆ ಬಿದ್ದು ಮೂರು ದಿನ ನರಳಾಡಿತ್ತು ವೃದ...
06-04-26 07:43 pm
ಕೇರಳಕ್ಕೆ ಅಕ್ರಮ ಜಾನುವಾರು ಸಾಗಣೆ; ಕಡಬದಲ್ಲಿ ಪೊಲೀಸ...
03-04-26 11:43 am
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
09-04-26 01:03 pm
HK News Staffer
Arif Murder, Seven Arrested, Mangalore: ಟ್ಯಾಬ...
08-04-26 07:48 pm
ಡ್ರಗ್ಸ್ ಪೆಡ್ಲಿಂಗ್ ; ತಾವಾಗಿಯೇ ಗಾಂಜಾ, ಡ್ರಗ್ಸ್ ತ...
08-04-26 05:53 pm
Gurupura Accident, Mangalore: ಮೂಡುಬಿದ್ರೆ ಎಕ್ಸ...
08-04-26 04:29 pm
Mangalore Crime, Bunder Murder: ಮೀನುಗಾರಿಕೆ ದಕ...
08-04-26 01:06 pm