ಬ್ರೇಕಿಂಗ್ ನ್ಯೂಸ್
21-09-22 07:25 pm HK News Desk ದೇಶ - ವಿದೇಶ
ಶ್ರೀನಗರ, ಸೆ.21: ಜಮ್ಮು ಕಾಶ್ಮೀರದಲ್ಲಿ ಶಾಲೆಗಳಲ್ಲಿ ಭಜನೆ ಹಾಡುವುದಕ್ಕೆ ಅಲ್ಲಿನ ಸರಕಾರ ಆದೇಶ ಮಾಡಿರುವುದನ್ನು ಪಿಡಿಪಿ ನಾಯಕರು ಆಕ್ಷೇಪಿಸಿದ್ದರೆ, ನ್ಯಾಶನಲ್ ಕಾನ್ಫರೆನ್ಸ್ ನಾಯಕರು ಅದರಲ್ಲೇನು ತಪ್ಪಿದೆ ಎಂದು ಪ್ರಶ್ನೆ ಮಾಡಿದ್ದಾರೆ.
ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ಹಿರಿಯ ನಾಯಕ ಫಾರೂಕ್ ಅಬ್ದುಲ್ಲಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ನಾನು ಎರಡು ದೇಶದ ಥಿಯರಿಯನ್ನು ಒಪ್ಪುವುದಿಲ್ಲ. ಭಾರತ ಜಾತ್ಯತೀತ ದೇಶ, ಕಮ್ಯುನಲ್ ದೇಶ ಅಲ್ಲ. ನಾನು ಭಜನೆ ಮಾಡುತ್ತೇನೆ. ಭಜನೆ ಮಾಡುವುದರಿಂದ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ. ಹಿಂದುವೊಬ್ಬ ಅಜ್ಮೀರ್ ದರ್ಗಾಕ್ಕೆ ಬಂದಲ್ಲಿ ಆತ ಮುಸ್ಲಿಂ ಆಗುತ್ತಾನೆಯೇ ಎಂದು ಕೇಳಿದ್ದಾರೆ.
ಪಿಡಿಪಿ ಅಧ್ಯಕ್ಷೆ ಮೆಹಬೂಬ ಮುಫ್ತಿ ಜಮ್ಮು ಕಾಶ್ಮೀರ ಸರಕಾರದ ಕ್ರಮವನ್ನು ಆಕ್ಷೇಪಿಸಿದ್ದು ಅಲ್ಲಿನ ಶಾಲೆಯೊಂದರಲ್ಲಿ ರಘುಪತಿ ರಾಘವ ರಾಜಾ ರಾಮ್ ಎನ್ನುವ ಗಾಂಧೀಜಿ ಹಾಡುತ್ತಿದ್ದ ಪ್ರೀತಿಯ ಭಜನೆಯನ್ನು ಶಾಲಾ ಮಕ್ಕಳು ಮತ್ತು ಶಿಕ್ಷಕ ವರ್ಗ ಹಾಡುವ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಧಾರ್ಮಿಕ ಗುರುಗಳನ್ನು ಜೈಲಿಗಟ್ಟಿ ಜಾಮಿಯಾ ಮಸೀದಿಯನ್ನು ಮುಚ್ಚಿ ಶಾಲೆಯಲ್ಲಿ ಹಿಂದುಗಳ ಭಜನೆ ಹಾಡಿ ಎಂದು ಹೇಳುವುದು ಜಮ್ಮು ಕಾಶ್ಮೀರದ ಹಿಂದುತ್ವದ ಅಜೆಂಡಾ ಹೇರಿಕೆ ಎಂದು ಟೀಕಿಸಿದ್ದಾರೆ.
ಮಹಾತ್ಮ ಗಾಂಧೀಜಿಯ 153ನೇ ಜನ್ಮ ದಿನಾಚರಣೆಯ ಪ್ರಯುಕ್ತ ಜಮ್ಮು ಕಾಶ್ಮೀರ ಸರಕಾರ ಶಾಲೆಗಳಲ್ಲಿ ಸರಣಿ ಕಾರ್ಯಕ್ರಮ ಹಮ್ಮಿಕೊಳ್ಳಲು ಆದೇಶ ಮಾಡಿದೆ. ಅದರಂತೆ, ಶಾಲೆಗಳಲ್ಲಿ ಗಾಂಧೀಜಿ ಹಾಡುತ್ತಿದ್ದ ರಘುಪತಿ ರಾಘವ ರಾಜಾರಾಮ್ ಭಜನೆಯನ್ನೂ ಮಕ್ಕಳಿಗೆ ಹಾಡಿಸಲಾಗುತ್ತಿದೆ. ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಏರ್ಪಾಡು ಮಾಡಲಾಗಿದೆ. ಭಜನೆ ಹಾಡುವುದು ಗಾಂಧೀಜಿ ಜನ್ಮ ದಿನಾಚರಣೆಯ ಒಂದು ಭಾಗವಷ್ಟೇ ಆಗಿದೆ.
ಮೆಹಬೂಬ ಮುಫ್ತಿ ಹೇಳಿಕೆಯ ಬಗ್ಗೆ ಬಿಜೆಪಿ ಖಾರವಾಗಿ ಪ್ರತಿಕ್ರಿಯಿಸಿದ್ದು, ಯುವ ಜನರ ಮೆದುಳಿಗೆ ವಿಷ ತುಂಬುವ ಪ್ರಯತ್ನವನ್ನು ಮಾಡುತ್ತಿದ್ದಾರೆಂದು ಕಿಡಿಕಾರಿದೆ. ಜಮ್ಮು ಕಾಶ್ಮೀರ ಬಿಜೆಪಿ ಘಟಕದ ಅಧ್ಯಕ್ಷ ರವೀಂದರ್ ರೈನಾ ಹೇಳಿಕೆ ನೀಡಿದ್ದು, ಮೆಹಬೂಬ ಮುಫ್ತಿಯನ್ನು ಕಣಿವೆ ಜನರು ತಿರಸ್ಕರಿಸಿದ್ದಾರೆ. ಹೀಗಾಗಿ ಈ ರೀತಿಯ ಹೀನ ರಾಜಕೀಯ ಮಾಡಿ ಮತ್ತೆ ಅಧಿಕಾರಕ್ಕೇರಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
After PDP president Mehbooba Mufti slammed the BJP government in Jammu and Kashmir over its order of singing bhajans in schools, National Conference chief Farooq Abdullah has begged to differ.“We didn’t believe in two-nation theory. India is not communal and India is secular. I am chanting bhajan. If I am chanting bhajan, is it wrong?” Farooq Abdullah said as quoted by news agency ANI.“If a Hindu visits Ajmer Dargah, then will he or she be transformed into a Muslim?" he parried.
15-07-25 01:32 pm
Bangalore Correspondent
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 02:28 pm
HK News Desk
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
ಕಲ್ಲು ಮರಳಿನ ಸಮಸ್ಯೆಯಿಂದ ಜನರ ತಲೆಗೆ ಚಪ್ಪಡಿ ಕಲ್ಲು...
14-07-25 09:55 pm
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
15-07-25 01:13 pm
HK News Desk
Mangalore Crime, Police: ದುಬೈನಲ್ಲಿ ವಹಿವಾಟು ;...
15-07-25 11:38 am
ಮ್ಯಾಟ್ರಿಮನಿ ಸೈಟಲ್ಲಿ ಸಿಕ್ಕ ಗೆಳತಿಯಿಂದಲೇ ಮೋಸ ; ಆ...
13-07-25 05:23 pm
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm